ಕೋಲಾರ ನ.28: ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಳಬಾಗಿಲು (Mulabagilu) ತಾಲೂಕಿನ ನಂಗಲಿ ಪೊಲೀಸ್ (Police) ಠಾಣೆಯ ಪಿಎಸ್ಐ (PSI) ಮತ್ತು ಇಬ್ಬರು ಪೇದೆಗಳ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಡಿವೈಎಸ್ಪಿ ನಂದಕುಮಾರ್ ವರದಿ ಆಧರಿಸಿ ಪಿಎಸ್ಐ ಪ್ರದೀಪ್ ಸಿಂಗ್, ಕಾನ್ಸ್ಟೇಬಲ್ ಮಂಜುನಾಥ್, ಮಹಾಂತೇಶ್ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮುನಿರಾಜು, ಬಾಲಾಜಿ ಎಂಬ ಆರೋಪಿಗಳನ್ನು ಪೊಲೀಸರು ಅಕ್ಟೋಬರ್ 17 ರಂದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಪೊಲೀಸರು ಆರೋಪಿಗಳನ್ನು 15 ದಿನಗಳ ಕಾಲ ಪೊಲೀಸ್ ಠಾಣೆ ಮತ್ತು ಬೇರೆ ಬೇರೆ ಸ್ಥಳಗಳಲ್ಲಿರಿಸಿ ಅಕ್ರಮವಾಗಿ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆಂಧ್ರದ ಮದನಪಲ್ಲಿ ನಿವಾಸಿ ಮುನಿರಾಜು ಮೃತಪಟ್ಟಿದ್ದನು. ಲಾಕಪ್ ಡೆತ್ ಪ್ರಕರಣವನ್ನು ತನಿಖೆ ನಡೆಸಿ ಡಿವೈಎಸ್ಪಿ ನಂದಕುಮಾರ್ ವರದಿ ನೀಡಿದ್ದರು. ಈ ವರದಿ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ತುಮಕೂರು: ಮಹಿಳಾ ಪಿಎಸ್‌ಐಗೆ ಲೈಂಗಿಕ ಕಿರುಕುಳ, ಆರೋಪಿ ವಶಕ್ಕೆ
ಮಂಡ್ಯ: ಕುತ್ತಿಗೆಗೆ ಹಗ್ಗ ಬಿಗಿದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನನ್ನು ಕೊಲೆ ಮಾಡಿರುವ ಘಟನೆ ಮದ್ದೂರು ತಾಲೂಕಿನ ಕುದುರಗುಂಡಿ ಗ್ರಾಮದಲ್ಲಿ ನಡೆದಿದೆ. ಎಳನೀರು ವ್ಯಾಪಾರ ಮಾಡುತ್ತಿದ್ದ ಶಿವಾನಂದ (19) ಕೊಲೆಯಾದ ಯುವಕ. ದುಷ್ಕರ್ಮಿಗಳು ತಡರಾತ್ರಿ ಶಿವಾನಂದನನ್ನ ಕೊಲೆ ಮಾಡಿದ್ದಾರೆ. ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ