ಮಕ್ಕಳನ್ನು ನೋಡಲು ಅಮೆರಿಕಾಗೆ ಹೋದಾಗ ಸಾವು, ಭಾರತಕ್ಕೆ ಶವ ತರಲು ನೆರವಾದ ಕೋಲಾರ ಸಂಸದ ಮುನಿಸ್ವಾಮಿ

| Updated By: ಆಯೇಷಾ ಬಾನು

Updated on: Sep 03, 2023 | 10:51 AM

ವಯೋಸಹಜ ಕಾಯಿಲೆಯಿಂದ ಅಮೆರಿಕಾದಲ್ಲಿ ಮೃತಪಟ್ಟ ವೆಂಕಟೇಶಯ್ಯರ ಮೃತದೇಹವನ್ನು ಭಾರತಕ್ಕೆ ತರಲು ಕೋಲಾರ ಸಂಸದ ಮುನಿಸ್ವಾಮಿ ನೆರವಾಗಿದ್ದಾರೆ.ವೆಂಕಟೇಶಯ್ಯ ಅವರ ಮಗ ಸುರೇಶ್ ಕುಮಾರ್ ಹಾಗೂ ಇನ್ನೂ ಕೆಲವು ಸಂಬಂಧಿಕರು ಅಮೆರಿಕಾದ ಪೀಟರ್ಸ್ ಬರ್ಗ್ ನಲ್ಲಿ ನೆಲೆಸಿದ್ದರು. ಹೀಗಾಗಿ ಅಮೆರಿಕಾಕ್ಕೆ‌ ತೆರಳಿದ್ದ ವೆಂಕಟೇಶಯ್ಯ‌‌ ಅಮೆರಿಕಾಗೆ‌ ತೆರಳಿದ ಕೆಲವು ದಿನಗಳ ನಂತರ ಮೃತಪಟ್ಟಿದ್ದರು.

ಮಕ್ಕಳನ್ನು ನೋಡಲು ಅಮೆರಿಕಾಗೆ ಹೋದಾಗ ಸಾವು, ಭಾರತಕ್ಕೆ ಶವ ತರಲು ನೆರವಾದ ಕೋಲಾರ ಸಂಸದ ಮುನಿಸ್ವಾಮಿ
ಕೋಲಾರ ಸಂಸದ ಏಸ್​ ಮುನಿಸ್ವಾಮಿ
Follow us on

ಕೋಲಾರ, ಸೆ.03: ತನ್ನ ಮಕ್ಕಳನ್ನು ನೋಡಿಕೊಂಡು ಬರಲು ಅಮೆರಿಕಾಕ್ಕೆ ತೆರಳಿದ್ದ ಕೋಲಾರ(Kolar) ಮೂಲದ ವ್ಯಕ್ತಿಯೊಬ್ಬರು ವಯೋಸಹಜ ಕಾಯಿಲೆಯಿಂದ ಅಮೆರಿಕಾದಲ್ಲಿ ಮೃತಪಟ್ಟಿದ್ದಾರೆ. ಕಳೆದ ಹನ್ನೊಂದು ದಿನಗಳ ಹಿಂದೆ ಅಂದರೆ ಆಗಸ್ಟ್ 23 ರಂದು ಕೋಲಾರದ ಗಾಂಧಿನಗರದ 91 ವರ್ಷದ ವೆಂಕಟೇಶಯ್ಯ ಮೃತಪಟ್ಟಿದ್ದು ಶವವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಪರದಾಡುತ್ತಿದ್ದರು. ಸದ್ಯ ಕೋಲಾರ ಸಂಸದ ಮುನಿಸ್ವಾಮಿ(MP Muniswamy) ಅವರು ನೆರವಿನ ಹಸ್ತ ಚಾಚಿದ್ದು ನಾಳೆ ವೆಂಕಟೇಶಯ್ಯನವರ ಪಾರ್ಥಿವ ಶರೀರ ಭಾರತಕ್ಕೆ ಆಗಮಿಸಲಿದೆ. ಸಂಸದ ಮುನಿಸ್ವಾಮಿ ಅವರ ನೆರವಿಗಾಗಿ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

ವೆಂಕಟೇಶಯ್ಯ ಅವರ ಮಗ ಸುರೇಶ್ ಕುಮಾರ್ ಹಾಗೂ ಇನ್ನೂ ಕೆಲವು ಸಂಬಂಧಿಕರು ಅಮೆರಿಕಾದ ಪೀಟರ್ಸ್ ಬರ್ಗ್ ನಲ್ಲಿ ನೆಲೆಸಿದ್ದರು. ಹೀಗಾಗಿ ಅಮೆರಿಕಾಕ್ಕೆ‌ ತೆರಳಿದ್ದ ವೆಂಕಟೇಶಯ್ಯ‌‌ ಅಮೆರಿಕಾಗೆ‌ ತೆರಳಿದ ಕೆಲವು ದಿನಗಳ ನಂತರ ಮೃತಪಟ್ಟಿದ್ದಾರೆ. ಆದರೆ ಅವರ ಅಂತ್ಯ ಸಂಸ್ಕಾರವನ್ನು ಕೋಲಾರದಲ್ಲೇ ಮಾಡಬೇಕು ಎಂದು ಕುಟುಂಬಸ್ಥರು ನಿರ್ಧಾರ ಮಾಡಿದ ಹಿನ್ನಲೆ ಮೃತ ವೆಂಕಟೇಶಯ್ಯ ಅವರ ಶವವನ್ನು ಕೋಲಾರಕ್ಕೆ ತರಲು ಪ್ರಯತ್ನಿಸಿದ್ದಾರೆ. ಆದರೆ ಕೆಲವೊಂದು ಕಾನೂನು ತೊಡಕುಗಳು ಬಂದ ಹಿನ್ನಲೆಯಲ್ಲಿ ಶವವನ್ನು ತರುವುದು ಅಷ್ಟು ಸುಲಭವಾಗಿರಲಿಲ್ಲ, ಈ ಹಿನ್ನಲೆ ಕೋಲಾರದ ವೆಂಕಟೇಶಯ್ಯ ಅವರ ಸಂಬಂಧಿಗಳು ಕೋಲಾರ ಸಂಸದ ಎಸ್.ಮುನಿಸ್ವಾಮಿ ಅವರನ್ನು ಸಂಪರ್ಕ ಮಾಡಿ ವಿಚಾರವನ್ನು ತಿಳಿಸಿ ಶವವನ್ನು ಕೋಲಾರಕ್ಕೆ ತರಲು ನೆರವಾಗುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿಯ 17 ಶಾಸಕರಿಗೆ ಕಾಂಗ್ರೆಸ್ ಕಿರುಕುಳ ನೀಡುವ ಉದ್ದೇಶ‌ ಇಟ್ಟುಕೊಂಡಿದೆ: ಸಂಸದ ಮುನಿಸ್ವಾಮಿ

ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಸಂಸದ ಮುನಿಸ್ವಾಮಿ ಕೇಂದ್ರದ ವಿದೇಶಾಂಗ ಸಚಿವಾಲಯದ ಜೊತೆಗೆ ಸಂಪರ್ಕಿಸಿ ಮೃತರ ಶವ ಭಾರತಕ್ಕೆ ತರಲು ಇದ್ದ ಕಾನೂನು ತೊಡಕುಗಳನ್ನು ನಿವಾರಣೆ ಮಾಡಿದ್ದಾರೆ. ಸತತ ಹನ್ನೊಂದು ದಿನಗಳ ನಂತರ ಅಂದರೆ ನಾಳೆ(ಸೆ.04) ಮೃತ ವೆಂಕಟೇಶಯ್ಯ ಅವರ ಮೃತದೇಹವು ಭಾರತಕ್ಕೆ ಬರಲಿದೆ. ನಾಳೆ ರಾತ್ರಿ ವೇಳೆಗೆ ವೆಂಕಟೇಶಯ್ಯ ಪಾರ್ಥವ ಶರೀರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಇನ್ನು ಇಂತ ಕಠಿಣ ಪರಿಸ್ಥಿತಿಯಲ್ಲಿ ಶೀಘ್ರವಾಗಿ ನಮಗೆ ಪ್ರತಿಕ್ರಿಯಿಸಿ ನಮಗೆ ನೆರವಾದ ಸಂಸದ ಮುನಿಸ್ವಾಮಿ ಅವರಿಗೆ ಮೃತರ ಕುಟುಂಬಸ್ಥರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.‌ ನಾಳೆ ಕೋಲಾರಕ್ಕೆ ಪಾರ್ಥಿವ ಶರೀರ ಬಂದ ನಂತರ ಮಂಗಳವಾರ ಕೋಲಾರದ ಗಾಂಧಿನಗರದಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ಸಕಲ‌ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಕೋಲಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ