ಕುರ್ಚಿಗಾಗಿ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿದ ಅಧಿಕಾರಿ: ಸೂಕ್ತ ಕ್ರಮಕ್ಕೆ ಒತ್ತಾಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 06, 2025 | 7:05 PM

ಕೋಲಾರ ಜಿಲ್ಲೆಯಲ್ಲಿ ಓರ್ವ ಅರಣ್ಯಾಧಿಕಾರಿ ತಮ್ಮ ವರ್ಗಾವಣೆ ಆದೇಶವನ್ನು ಉಲ್ಲಂಘಿಸಿ, ಕಚೇರಿಗೆ ಬೀಗ ಹಾಕಿ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಯತ್ನಿಸಿದ್ದಾರೆ. ಇದರಿಂದಾಗಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ಈ ಘಟನೆಯಿಂದ ಜಿಲ್ಲೆಯಲ್ಲಿ ಗೊಂದಲ ಉಂಟಾಗಿದೆ.

ಕುರ್ಚಿಗಾಗಿ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿದ ಅಧಿಕಾರಿ: ಸೂಕ್ತ ಕ್ರಮಕ್ಕೆ ಒತ್ತಾಯ
ಕುರ್ಚಿಗಾಗಿ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿದ ಅಧಿಕಾರಿ: ಸೂಕ್ತ ಕ್ರಮಕ್ಕೆ ಒತ್ತಾಯ
Follow us on

ಕೋಲಾರ, ಜನವರಿ 06: ಕುರ್ಚಿಗಾಗಿ (Chair) ಸರ್ಕಾರದ ಆದೇಶವನ್ನೇ ಅಧಿಕಾರಿಗಳು ಗಾಳಿಗೆ ತೂರಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅಧಿಕಾರ ಹಸ್ತಾಂತರ ಮಾಡಲು ಇಚ್ಚಿಸಿದೆ ಕಚೇರಿಗೆ ಬೀಗ ಹಾಕಿಕೊಂಡು ಹೋಗಿದ್ದ ಅಧಿಕಾರಿಯ ಕಾರ್ಯವೈಖರಿ ಕುರಿತು ದಿಶಾ ಸಭೆಯಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುರ್ಚಿಗಾಗಿ ಇಬ್ಬರ ಅಧಿಕಾರಿಗಳ ನಡುವೆ ನಡೆಯುತ್ತಿರುವ ಹೈಡ್ರಾಮಾ ಜಿಲ್ಲೆಯ ಜನರಿಗೆ ಪುಕ್ಕಟೆ ಮನರಂಜನೆ‌ ನೀಡುತ್ತಿದೆ.

ಮುಳಬಾಗಲು ಆರ್.ಎಫ್.ಓ ಅಧಿಕಾರಿಯ ಕುರ್ಚಿ ಫೈಟ್

ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ಮಲ್ಲೇಶ್ ಬಾಬು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ದಿಶಾ ಸಭೆಯಲ್ಲಿ ಮುಳಬಾಗಲು ಆರ್.ಎಫ್.ಓ ಅಧಿಕಾರಿಯ ಕುರ್ಚಿ ಫೈಟ್ ಸಾಕಷ್ಟು ಸದ್ದು ಮಾಡಿತು. ಮುಳಬಾಗಲು ವಲಯ ಅರಣ್ಯಾಧಿಕಾರಿ ಜ್ಯೋತಿ ಅವರನ್ನು ಚನ್ನಪಟ್ಟಣಕ್ಕೆ ವರ್ಗಾವಣೆ ಮಾಡಿ ಮೂರು ತಿಂಗಳು ಕಳೆದರೂ ಸಹ‌‌ ಇಲ್ಲಿಂದ ರಿಲೀವ್‌ ಆಗದೆ ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ. ಅವರ ಸ್ಥಾನಕ್ಕೆ ಶಾಲಿನಿ‌ ಎಂಬ ಅಧಿಕಾರಿ ಬಂದರೂ ಸಹ ಅವರಿಗೆ ಅಧಿಕಾರವನ್ನು ನೀಡದೆ ಕಚೇರಿಗೆ ಬೀಗ‌ ಹಾಕಿಕೊಂಡು ಹೋಗಿದ್ದಾರೆಂದು ಮುಳಬಾಗಲು ಶಾಸಕ ಸಮೃದ್ದಿ ಮಂಜುನಾಥ್ ಆಕ್ರೋಶ ವಕ್ತಪಡಿಸಿದ್ದಾರೆ.

ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಇಲ್ಲದಂತಾಗಿದೆ. ಸರ್ಕಾರಿ ಕಚೇರಿಯನ್ನು ತಮ್ಮ ಸ್ವಂತವೆಂದು ತಿಳಿದುಕೊಂಡಿದ್ದು, ಕಚೇರಿಗೆ ಬೀಗ ಹಾಕಿಕೊಂಡು ಹೋಗಿರುವುದಲ್ಲದೆ, ತಮ್ಮ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿಕೊಂಡು ಹೋಗಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ಗೆ ಮತ್ತೆ ಭೂಸಂಕಷ್ಟ? ಜ. 15 ರೊಳಗೆ ಸರ್ವೆ ಮುಗಿಸಲು ಹೈಕೋರ್ಟ್ ಆದೇಶ

ಇನ್ನು ಮುಳಬಾಗಲು ಆರ್​​ಎಫ್​ಓ ಸ್ಥಾನಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಶಾಲಿನಿ ಎಂಬುವರು ಆಗಮಿಸಿದ್ದು, ಕಳೆದರೆಡು ದಿನಗಳಿಂದ ಅಧಿಕಾರ ಪಡೆಯಲು ಕಚೇರಿ ಬಳಿ ಕಾಯುತ್ತಿದ್ದರೂ ಸಹ ಜ್ಯೋತಿ ಅವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಚೇರಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸರ್ಕಾರಿ ಆದೇಶವನ್ನು ಲೆಕ್ಕಸಿದೆ ಇರವುದರಿಂದ ಕೂಡಲೇ ಇವರ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿ, ಸ್ಥಳ ಪರಿಶೀಲನೆ ಮಾಡುವುದರ ಜೊತೆಗೆ ಕಚೇರಿಗೆ ಹಾಕಿರುವ ಬೀಗ ಹೊಡೆದು ಅವರ ಮೇಲೆ‌ ಕ್ರಮ ಕೈಗೊಳ್ಳುವಂತೆ ಡಿಎಫ್​ಓಗೆ ಸೂಚನೆ ನೀಡಲಾಗಿದೆ.

ಶಾಸಕ ಸಮೃದ್ದಿ ಮಂಜುನಾಥ್ ಅವರು ಸಹ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿರುವುದರಿಂದ, ಸರ್ಕಾರ ಆಸ್ತಿಯನ್ನು ಯಾರು ಸಹ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಸರ್ಕಾರದ‌ ನಿಯಮನುಸಾರ ವರ್ಗಾವಣೆಯಾಗಿ ಬೇರೊಬ್ಬರಿಗೆ ಅನುವು ಮಾಡಿಕೊಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಗತಿಪರ ಸಂಘಟನೆಗಳಿಂದ ಕೋಲಾರ ಬಂದ್, ಬಸ್​ಗಳಿಲ್ಲದೆ ಜನರ ಪರದಾಟ

ಒಟ್ಟಾರೆ ಕುರ್ಚಿಗಾಗಿ ಕೋಲಾರ ಜಿಲ್ಲೆಯಲ್ಲಿ ದೊಡ್ಡ ಹೈಡ್ರಾಮಾವೇ ಸೃಷ್ಡಿಯಾಗಿದ್ದು, ನೋಡುವ ಜನರಿಗೂ ಪುಕ್ಕಟೆ ಮನರಂಜನೆ ಸಿಗುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡರೆ ಉತ್ತಮ. ಇಲ್ಲವಾದರೆ ಓದಿ ಕಾನೂನು ತಿಳಿದಿರುವವರೇ ಜನರೆದುರು ತಮ್ಮ ಮಾನ ಹರಾಜುಹಾಕಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.