ಪ್ರಗತಿಪರ ಸಂಘಟನೆಗಳಿಂದ ಕೋಲಾರ ಬಂದ್, ಬಸ್​ಗಳಿಲ್ಲದೆ ಜನರ ಪರದಾಟ

|

Updated on: Jan 03, 2025 | 10:59 AM

ಎರಡು-ಮೂರು ವಾರಗಳಿಂದ ಬಂದ್​ಗಳು ಅನೇಕ ಕಡೆಗಳಲ್ಲಿ ನಡೆಯುತ್ತಿವೆ. ಬಂದ್​ಗಳಿಗೆ ಕರೆನೀಡದೆ ಬೇರೆ ರೀತಿಯಲ್ಲಿ ಪ್ರತಿಭಟನೆ ನಡೆಸುವುದು ಸಾಧ್ಯವಿಲ್ಲವೇ ಅನ್ನೋದು ಒಂದು ಪ್ರಶ್ನೆ. ಭಾರತ್ ಬಂದ್, ಕರ್ನಾಟಕ ಬಂದ್ ಅಂತ ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಪ್ರತಿಭಟನೆ ನಡೆಸುವ ಹಕ್ಕನ್ನು ನಮ್ಮ ಸಂವಿಧಾನ ಎಲ್ಲರಿಗೂ ನೀಡಿದೆ. ಆದರೆ ಅದನ್ನು ಬಂದ್​ಗೆ ಕರೆ ನೀಡುವ ಹೊರತಾಗಿ ನಡೆಸಲಾಗದೇ?

ಕೋಲಾರ: ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ವಿರೋಧಿಸಿ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಕೋಲಾರ ಬಂದ್​ಗೆ ಕರೆ ನೀಡಿದ್ದು ಬಸ್, ಆಟೋಗಳ ಸಂಚಾರವಿಲ್ಲದೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೋಲಾರದ ಟೋಲ್ ಗೇಟ್ ಬಳಿ ಮಹಿಳೆಯೊಬ್ಬರು ತನ್ನ ಮಗುವನ್ನು ಹೊತ್ತುಕೊಂಡ ನಡೆದು ಹೋಗುತ್ತಿರುವ ದೃಶ್ಯವನ್ನು ನೋಡಬಹುದು. ದಿವ್ಯಾಂಗ ವ್ಯಕ್ತಿಯೊಬ್ಬರು ತಲೆಮೇಲೆ ಮೂಟೆ ಹೊತ್ತು ಬಸ್ಸಿಗಾಗಿ ಕಾಯುತ್ತಿದ್ದಾರೆ. ದಿನಗೂಲಿ ಮಾಡಿ ಜೀವನ ನಡೆಸುವವರಿಗೆ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡರೆ ತುಂಬಾ ಕಷ್ಟ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Bandh: ಇಂದು ಅಖಂಡ ಕರ್ನಾಟಕ ಬಂದ್​ ವೇಳೆ ಏನಿರುತ್ತೆ? ಏನಿರಲ್ಲ? ಇಲ್ಲಿದೆ ನೋಡಿ