Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Bandh: ಇಂದು ಅಖಂಡ ಕರ್ನಾಟಕ ಬಂದ್​ ವೇಳೆ ಏನಿರುತ್ತೆ? ಏನಿರಲ್ಲ? ಇಲ್ಲಿದೆ ನೋಡಿ

Cauvery Water Dispute, Karnataka Bandh: ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು ಜಿಲ್ಲೆ ಜಿಲ್ಲೆಯಲ್ಲೂ ಹೋರಾಟಗಾರರ ಆಕ್ರೋಶದ ಕಿಚ್ಚು ಹೊತ್ತಿ ಉರಿಯಲಿದೆ. ಕಾವೇರಿ ನೀರಿಗಾಗಿ ಎಲ್ಲ ಬೆಂಬಲ ನೀಡಿದ್ದಾರೆ.. ದಶದಿಕ್ಕುಗಳಲ್ಲೂ ಕಹಳೆ ಮೊಳಗಿಸಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು, ಕನ್ನಡಪರ ಸಂಘಟನೆಗಳು ಸಜ್ಜಾಗಿದ್ದಾರೆ. ಹಾಗಾದ್ರೆ, ಕರ್ನಾಟಕ ಬಂದ್​ ವೇಳೆ ಇಂದು ಯಾವೆಲ್ಲ ಸೇವೆಗಳು ಇರುತ್ತೆ? ಯಾವುದು ಇರುವುದಿಲ್ಲ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

Karnataka Bandh: ಇಂದು ಅಖಂಡ ಕರ್ನಾಟಕ ಬಂದ್​ ವೇಳೆ ಏನಿರುತ್ತೆ? ಏನಿರಲ್ಲ? ಇಲ್ಲಿದೆ ನೋಡಿ
ಕರ್ನಾಟಕ ಬಂದ್​
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Sep 29, 2023 | 6:44 AM

ಬೆಂಗಳೂರು, (ಸೆಪ್ಟೆಂಬರ್ 29): ಕಾವೇರಿಗಾಗಿ ಕರುನಾಡು ಕೂಗುತ್ತಿದೆ. ಜೀವಜಲಕ್ಕಾಗಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಒಂದು ಹನಿ ನೀರನ್ನ ಬಿಡ್ಬಬಾರದು ಎಂದು ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ, ಗಲ್ಲಿ ಗಲ್ಲಿಯಲ್ಲೂ ಕಾವೇರಿ ನಮ್ಮದು ಎನ್ನುವ ಧ್ವನಿ ಮಾರ್ಧನಿಸಿದೆ. ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಿ, ತಮಿಳುನಾಡಿಗೆ (Tamil Nadu)ಯಾವುದೇ ಕಾರಣಕ್ಕೂ ಕಾವೇರಿ ನೀರು (Cauvery Water Dispute) ಬಿಡುಗಡೆ ಮಾಡಬಾರದು ಎನ್ನುವ ಆಗ್ರಹ ಜೋರಾಗಿದೆ. ಹೀಗಾಗಿ ಇಂದು(ಸೆ.29) ಕರ್ನಾಟಕ ಬಂದ್ (Karnataka Bandh) ಆಚರಿಸಲಾಗುತ್ತಿದೆ. ಮೊನ್ನೆ ಬೆಂಗಳೂರು ಬಂದ್ ಯಶಸ್ವಿಯಾದ ರೀತಿ ಇವತ್ತು ಅಖಂಡ ಕರ್ನಾಟಕ ಸ್ತಬ್ಧವಾಗೋದು ಬಹುತೇಕ ಖಚಿತವಾಗಿದೆ. ಹಾಗಾದ್ರೆ, ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ ಚಿತ್ರಣ ಹೇಗಿರುತ್ತೆ? ಇಂದು ಯಾವೆಲ್ಲ ಸೇವೆಗಳು ಇರುತ್ತೆ? ಯಾವುದು ಇರುವುದಿಲ್ಲ ಎನ್ನುವ ವಿವರ ಇಲ್ಲಿದೆ.

ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್

ಇಂದು (ಸೆ.29) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಸಂಪೂರ್ಣ ಬಂದ್ ಇರಲಿದೆ. ಶುಕ್ರವಾರ ಬೆಳಗ್ಗೆ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ್ಯಾಲಿ ಹಮ್ಮಿಕೊಂಡಿರೋ ಕನ್ನಡ ಪರ ಹೋರಾಟಗಾರರು, ಟೋಲ್‌ಗಳಿಗೆ ಮುತ್ತಿಗೆ ಹಾಕಿ ರೈಲು, ಹೆದ್ದಾರಿ ತಡೆಯೋದಕ್ಕೂ ಪ್ಲ್ಯಾನ್ ಮಾಡಿದ್ದಾರೆ. ಅಲ್ಲದೇ, ಬೀದರ್‌ನಿಂದ ಚಾಮರಾಜನಗರವರೆಗೆ, ಕೋಲಾರದಿಂದ ಮಂಗಳೂರಿನವರೆಗೆ ಜಿಲ್ಲೆ ಜಿಲ್ಲೆಯಲ್ಲೂ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಇದನ್ನೂ ಓದಿ: Karnataka Dam Water Level: ಸೆ.29ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ

ಬಂದ್ ವೇಳೆ ಏನಿರಲ್ಲ?

  • ಹೋಟೆಲ್
  • ಬೇಕರಿ
  • ಚಿತ್ರಮಂದಿರ
  • ಓಲಾ, ಉಬರ್
  • ಆಟೋ, ಕ್ಯಾಬ್
  • ಗೂಡ್ಸ್ ವಾಹನ
  • ಲಾರಿ ಮಾಲೀಕರು
  • ಜ್ಯುವೆಲರಿ ಶಾಪ್
  • ಜಿಮ್
  • ಬೀದಿ ಬದಿ ವ್ಯಾಪಾರ
  • ಬನ್ನೇರುಘಟ್ಟ ಜೈವಿಕ ಉದ್ಯಾನವನ
  • ರಾಷ್ಟ್ರೀಯ ಹೆದ್ದಾರಿ ಬಂದ್
  • ಪಡಿತರ ಅಂಗಡಿ
  • ಶಾಪಿಂಗ್ ಮಾಲ್
  • ಮಾರುಕಟ್ಟೆ

    ಇಂದು ಇದೆಲ್ಲಾ ಇರುತ್ತೆ?

ಇನ್ನು ಅಗತ್ಯ ಸೇವೆಗಳಿಗೆ ಇಂದು ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಹಾಗಿದ್ರೆ ಬಂದ್ ಇದರೂ ಸಹ ಯಾವ್ಯಾವ ಸೇವೆಗಳು ಲಭ್ಯವಿರಲಿವೆ ಎನ್ನುವುದು ನೋಡುವುದಾದರೆ,

  • ಆಸ್ಪತ್ರೆ
  • ಮೆಡಿಕಲ್ ಶಾಪ್
  • ಆಂಬ್ಯುಲೆನ್ಸ್
  • ತರಕಾರಿ
  • ಹಾಲಿನ ಬೂತ್
  • ಬ್ಯಾಂಕ್
  • ಪೆಟ್ರೋಲ್ ಬಂಕ್
  • ಎಪಿಎಂಸಿ

ಎಲ್ಲೆಲ್ಲೆ ಶಾಲಾ ಕಾಲೇಜುಗಳು ರಜೆ?

ಬೆಂಗಳೂರು, ಕೋಲಾರ, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಬೇರೆಡೆಗೆ ರಜೆ ಘೋಷಿಸುವ ನಿರ್ಧಾರವನ್ನು ಬಿಇಓಗಳ ವಿವೇಚನೆಗೆ ಬಿಡಲಾಗಿದೆ.

ಇನ್ನೂ ನಿರ್ಧಾರವಾಗಿಲ್ಲ

ಐಟಿ ಕಂಪನಿಗಳು ಬಂದ್‌ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಮೊನ್ನೆ ಬೆಂಗಳೂರು ಬಂದ್‌ಗೆ ಬೆಂಬಲ ನೀಡಿದ್ದರಿಂದ ಇಂದಿನ ಬಂದ್‌ಗೆ ಸಪೋರ್ಟ್ ಮಾಡ್ತಾರಾ ಇಲ್ವೋ ಅನ್ನೋದು ಗೊಂದಲದಲ್ಲಿದೆ. ಹಾಗೆಯೇ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಆದ್ರೆ, ನೌಕರರಲ್ಲೇ ಕೆಲವರು ಬೆಂಬಲ ಕೊಡ್ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿ ಇಂದು ದಿನವಿಡೀ ಸರ್ಕಾರಿ ಬಸ್ ಓಡುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಸರ್ಕಾರಿ ನೌಕರರ ಸಂಘವೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಸಂಚಾರ ಬಹುತೇಕ ಸ್ಥಗಿತ

ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಇಂದು ನಮ್ಮ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ಕೃಷ್ಣರಾಜಪುರದಿಂದ ಗರುಡಾಚಾರ್ ಪಾಳ್ಯದವರೆಗೆ ಮೆಟ್ರೋ ಸೇವೆ ಬಂದ್ ಮಾಡಲಾಗಿದೆ. ಹಸಿರು ಮಾರ್ಗದ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಗರುಡಾಚಾರ್ ಪಾಳ್ಯದಿಂದ ವೈಟ್ ಫೀಲ್ಡ್​​ವರೆಗೆ ಮೆಟ್ರೋ ಸೇವೆ ಇರಲಿದೆ.

ಕರ್ನಾಟಕ ಬಂದ್ ಹಿನ್ನೆಲೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಇಂದು ರಜೆ ಘೋಷಿಸಲಾಗಿದೆ. ಪ್ರವಾಸಿಗರಿಗೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಉದ್ಯಾನವನ ಬಂದ್ ಮಾಡಲಾಗ್ತಿದೆ.

ಇಂದಿನ ರಾಜ್ಯ ಬಂದ್‌ಗೆ ಖಾಸಗಿ ವಾಹನಗಳ ಒಕ್ಕೂಟ ನೈತಿಕ ಬೆಂಬಲ ಮಾತ್ರ ನೀಡಿದೆ. ನಿನ್ನೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಂದ್‌ನಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು ಸ್ವಯಂ ಭಾಗಿಯಾಗಲು ತೀರ್ಮಾನಿದ್ದಾರೆ. ಆದ್ರೆ ಖಾಸಗಿ ಬಸ್‌ಗಳು ಓಡಾಡಬಹುದಾಗಿದ್ದು, ಚಾಲಕರು ವಿವೇಚನೆಯಿಂದ ಖಾಸಗಿ ವಾಹನಗಳನ್ನು ಓಡಿಸಬಹುದು ಅಂತೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:32 am, Fri, 29 September 23

ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ