ಕೋಲಾರ: ಹೃದಯಾಘಾತದಿಂದ ಕರ್ತವ್ಯನಿರತ ಸಿಆರ್​ಪಿಎಫ್​ ಯೋಧ ನಿಧನ

| Updated By: preethi shettigar

Updated on: Jan 08, 2022 | 2:28 PM

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅನಿಗಾನಹಳ್ಳಿಯ ಯೋಧ ಸುರೇಶ್(45) ಮೃತಪಟ್ಟಿದ್ದಾರೆ. ನಿನ್ನೆ ಸಂಜೆ (ಜನವರಿ, 07) ಜಾರ್ಖಂಡ್​ನ ಮಿಲಿಟರಿ ಕ್ಯಾಂಪ್​ನಲ್ಲಿ ತರಬೇತಿ ನೀಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕೋಲಾರ: ಹೃದಯಾಘಾತದಿಂದ ಕರ್ತವ್ಯನಿರತ ಸಿಆರ್​ಪಿಎಫ್​ ಯೋಧ ನಿಧನ
ಸುರೇಶ್(45)
Follow us on

ಕೋಲಾರ: ಹೃದಯಾಘಾತದಿಂದ ಕರ್ತವ್ಯನಿರತ ಸಿಆರ್​ಪಿಎಫ್(CRPF)​ ಯೋಧ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅನಿಗಾನಹಳ್ಳಿಯ ಯೋಧ (Soldier) ಸುರೇಶ್(45) ಮೃತಪಟ್ಟಿದ್ದಾರೆ. ನಿನ್ನೆ ಸಂಜೆ (ಜನವರಿ, 07) ಜಾರ್ಖಂಡ್​ನ ಮಿಲಿಟರಿ ಕ್ಯಾಂಪ್​ನಲ್ಲಿ ತರಬೇತಿ ನೀಡುವಾಗ ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದಾರೆ.

ಚಿಕ್ಕಬಳ್ಳಾಪುರ: ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಬಳಿ ನಡೆದಿದೆ. ಶಬರಿಮಲೆಗೆ ಹೋಗಿ ಅಯ್ಯಪ್ಪ ದರ್ಶನ ಪಡೆದು ವಾಪಸ್ ಬರುವ ವೇಳೆ ದುರ್ಘಟನೆ ನಡೆದಿದೆ. ಧರಣೀಶ್ (22) ನಿರಂಜನ್ ಸಿಂಗ್ (52) ಮೃತ ದುರ್ಧೈವಿಗಳು. ಮೃತಪಟ್ಟರೆಲ್ಲಾ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯವರು ಎಂದು ಗುರುತಿಸಲಾಗಿದೆ.

ಪಂಚರ್ ಆಗಿದ್ದ ಕಾರನ್ನು ರಸ್ತೆ ಬದಿ ನಿಲ್ಲಿಸಿ ಸ್ಟೆಪ್ನಿ ಬದಲಾಯಿಸುತ್ತಿದ್ದ ವೇಳೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂರು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಮಾಡಿ ಕ್ಯಾಂಟರ್ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸದ್ಯ ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ನೈಸ್ ರಸ್ತೆಯಲ್ಲಿ ಹೊಸ ಕಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ
ಬೆಂಗಳೂರಿನ ನೈಸ್ ರಸ್ತೆಯ ಪುರವಂಕರ ಜಂಕ್ಷನ್‌ನಲ್ಲಿ ಹೊಸ ಕಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿದೆ. 10 ಹೊಸ ಹ್ಯುಂಡೈ ಕಾರುಗಳಿದ್ದ ಟ್ರಕ್ ಪಲ್ಟಿಯಾದ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಆಗಿದೆ. ಬಳಿಕ ಕ್ರೇನ್ ಸಹಾಯದಿಂದ ಪೊಲೀಸರು ಟ್ರಕ್ ಮೇಲೆತ್ತಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಸ್ಥಳದಲ್ಲಿ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ
ನೈಸ್ ರಸ್ತೆಯಲ್ಲಿ ಭೀಕರ ಅಪಘಾತಗಳು ಸಂಭವಿಸುವುದು ಮುಂದುವರಿದಿದೆ. ಬೆಂಗಳೂರು ಹೊರವಯದಲ್ಲಿರುವ ನೈಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮೊಹಮ್ಮದ್ ಫಾದಿಲ್(25), ಅಭಿಲಾಷ್(25) ಮತ್ತು ಶಿಲ್ಪಾ(30) ಸೇರಿ ಒಟ್ಟು ನಾಲ್ವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ. ಓರ್ವ ಯುವತಿಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಮತ್ತೊಂದು ಕ್ವಾಲಿಸ್ ಕಾರಲ್ಲಿದ್ದ ನಾಲ್ವರ ಸ್ಥಿತಿಯೂ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಚಿಕ್ಕಬಳ್ಳಾಪುರ: ಕೊರೆಯುವ ಚಳಿಗೆ ಹೃದಯಾಘಾತ; ತೊಂಡೆಬಾವಿ ಯೋಧ ಹುತಾತ್ಮ

ಅಕ್ಕನ ಮಗಳ ಮದುವೆಗೆ ಬಂದಿದ್ದ ಯೋಧನ ಕೊಲೆ, ನಿಶ್ಚಿತಾರ್ಥಕ್ಕೆ ಹೋಗಿ ಬರುತ್ತಿದ್ದ ಬಸ್ ಪಲ್ಟಿಯಾಗಿ ಇಬ್ಬರ ಸಾವು