ತಮ್ಮ ತಾಯಿಗೆ ಸರ್ಕಾರಿ ಭೂಮಿ ಮಂಜೂರು; ಬಂಗಾರಪೇಟೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ವಿರುದ್ಧ ಆರೋಪ

ಕೋಲಾರ ಜಿಲ್ಲೆ ಬಂಗಾರಪೇಟೆ ಗ್ರಾಮದ ಹುದುಕುಳ ಸರ್ವೆ ನಂಬರ್ 256ರ ಪೈಕಿ 3.10 ಎಕರೆ ಸರ್ಕಾರಿ ಜಾಗವನ್ನು 2018ರಲ್ಲಿ ಶಾಸಕರ ತಾಯಿ ಮುನಿಯಮ್ಮ ಹೆಸರಿಗೆ ಮಂಜೂರು ಮಾಡಿದ್ದಾರೆ.

ತಮ್ಮ ತಾಯಿಗೆ ಸರ್ಕಾರಿ ಭೂಮಿ ಮಂಜೂರು; ಬಂಗಾರಪೇಟೆ ಶಾಸಕ ಎಸ್ಎನ್ ನಾರಾಯಣಸ್ವಾಮಿ ವಿರುದ್ಧ ಆರೋಪ
ಶಾಸಕ ಎಸ್ಎನ್ ನಾರಾಯಣಸ್ವಾಮಿ
Edited By:

Updated on: Jun 19, 2022 | 3:45 PM

ಕೋಲಾರ: ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ (MLA SN Narayanaswamy) ಅವರು ತಮ್ಮ ತಾಯಿ ಹೆಸರಿಗೆ ಸರ್ಕಾರಿ ಭೂಮಿ (Government Land) ಮಂಜೂರು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಸಕರ ವಿರುದ್ಧ ಆರೋಪ ಮಾಡಿರುವ ರಾಜಣ್ಣ ಫೆಬ್ರವರಿ 23ರಂದು ಕೋಲಾರ ಎಸಿಬಿಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಜುಲೈ 8ರೊಳಗೆ ತನಿಖಾ ವರದಿ ಸಲ್ಲಿಸಲು ಎಸಿಬಿಗೆ ಬೆಂಗಳೂರಿನ ಜನಪ್ರತಿನಿಧಿಗಳ 81ನೇ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ಗ್ರಾಮದ ಹುದುಕುಳ ಸರ್ವೆ ನಂಬರ್ 256ರ ಪೈಕಿ 3.10 ಎಕರೆ ಸರ್ಕಾರಿ ಜಾಗವನ್ನು 2018ರಲ್ಲಿ ಶಾಸಕರ ತಾಯಿ ಮುನಿಯಮ್ಮ ಹೆಸರಿಗೆ ಮಂಜೂರು ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ರಾಜಣ್ಣ ಶಾಸಕ ಎಸ್ಎನ್ ನಾರಾಯಣಸ್ವಾಮಿ ವಿರುದ್ಧ ಆರೋಪಿಸಿದ್ದರು. ಅಂದಿನ ತಹಶೀಲ್ದಾರ್ ವಿಜಯಣ್ಣ, ಭೂ ಮಂಜೂರಾತಿ ಸಮಿತಿಯ ಸದಸ್ಯರಾಗಿದ್ದ ತಿಮ್ಮರಾಯಪ್ಪ, ಸೇರಿ 3 ಜನರ ವಿರುದ್ಧ ದೂರು ದಾಖಲಾಗಿತ್ತು.

ಇದನ್ನೂ ಓದಿ: ಕಾರ್ತಿಕ್ ಆಯ್ತು ಇದೀಗ ಮುರಳಿ ವಿಜಯ್; 2 ವರ್ಷಗಳ ನಂತರ ಮತ್ತೆ ಫೀಲ್ಡಿಗಿಳಿದ ತಮಿಳುನಾಡು ಕ್ರಿಕೆಟರ್

ಇದನ್ನೂ ಓದಿ
Kichch Sudeep: ಮೈದಾನದಲ್ಲಿ ಕಿಚ್ಚ ಸುದೀಪ್ ಕೀಪಿಂಗ್ ನೋಡಿ ಫ್ಯಾನ್ಸ್ ಫಿದಾ
ಬಡವರಿಗೆ ಸಹಾಯಕವಾಗುವ ಅಗತ್ಯ ಸಂಶೋಧನೆಗೆ ವಾಹನ ಉದ್ಯಮ ಮುಂದಾಗಬೇಕು: ನಿತಿನ್ ಗಡ್ಕರಿ
‘ನನ್ನ ಹೀರೋ, ನನ್ನ ಗೆಳೆಯ’: ಕಮಲ್ ಹಾಸನ್​ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟ ಖುಷ್ಬೂ ಸುಂದರ್
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಏರ್​​ ಸುವಿಧಾ ನಿಯಮ ತೆಗೆದುಹಾಕಲು ಸರ್ಕಾರದ ಚಿಂತನೆ

ಸಬ್ ರೆಜಿಸ್ಟಾರ್ ಅಂಧಾ ದರ್ಬಾರ್!
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಸಬ್ ರೆಜಿಸ್ಟಾರ್ ಅಂಧಾ ದರ್ಬಾರ್ ಮಾಡಿರುವ ಆರೋಪ ಕೇಳಿಬಂದಿದೆ. ಇಂಡಿ ಬಸ್ ರೆಜಿಸ್ಟಾರ್ ಮಹಮ್ಮದ್ ರಫಿ ಪಟೇಲ್‌ ಗೋಲ್‌ಮಾಲ್ ಮಾಡಿದ್ದಾರೆಂಬ ಆರೋಪವಿದ್ದು, ತಾಲೂಕು ಸಬ್ ರೆಜಿಸ್ಟಾರ್ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಸಬ್ ರೆಜಿಸ್ಟಾರ್​ನ ಇಬ್ಬರು ಸಹೋದರರು ಅಕ್ರಮವಾಗಿ ಬಾಂಡ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ಇಲ್ಲಿ ಯಾವುದೇ ಕೆಲಸಕ್ಕೆ ಬಂದರೂ ಲಂಚ ಪಡೆಯುತ್ತಾರಂತೆ. ಒಂದೊಂದು ಕೆಲಸಕ್ಕೂ ಒಂದೊಂದು ದರ ನಿಗದಿ ಮಾಡಿದ್ದಾರಂತೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Sun, 19 June 22