ಕಾರ್ತಿಕ್ ಆಯ್ತು ಇದೀಗ ಮುರಳಿ ವಿಜಯ್; 2 ವರ್ಷಗಳ ನಂತರ ಮತ್ತೆ ಫೀಲ್ಡಿಗಿಳಿದ ತಮಿಳುನಾಡು ಕ್ರಿಕೆಟರ್

Murali Vijay: ಕ್ರಿಕೆಟ್ ಮೈದಾನದಿಂದ ದೀರ್ಘಕಾಲ ದೂರ ಉಳಿದಿದ್ದರ ಹಿಂದಿನ ಕಾರಣವನ್ನು ವಿವರಿಸಿದ ಮುರಳಿ ವಿಜಯ್, ನಾನು ಆಡಲು ಬಯಸಿದ್ದೆ, ಆದರೆ ಸ್ವಲ್ಪ ಗಾಯವಾಗಿತ್ತು. ಅದೇ ಸಮಯದಲ್ಲಿ, ನನ್ನ ವೈಯಕ್ತಿಕ ಜೀವನದ ಕಡೆ ಗಮನಹರಿಸುವ ಸಲುವಾಗಿ ಒಂದು ಹಂತದಲ್ಲಿ ನಾನು ವಿರಾಮ ತೆಗೆದುಕೊಂಡಿದ್ದೆ.

ಕಾರ್ತಿಕ್ ಆಯ್ತು ಇದೀಗ ಮುರಳಿ ವಿಜಯ್; 2 ವರ್ಷಗಳ ನಂತರ ಮತ್ತೆ ಫೀಲ್ಡಿಗಿಳಿದ ತಮಿಳುನಾಡು ಕ್ರಿಕೆಟರ್
ದಿನೇಶ್ ಕಾರ್ತಿಕ್, ಪತ್ನಿಯೊಂದಿಗೆ ಮುರುಳಿ ವಿಜಯ್Image Credit source: ದಿನೇಶ್ ಕಾರ್ತಿಕ್, ಮುರುಳಿ ವಿಜಯ್ ಇನ್ಸ್​ಟಾಗ್ರಾಮ್
Follow us
TV9 Web
| Updated By: ಪೃಥ್ವಿಶಂಕರ

Updated on:Jun 19, 2022 | 3:05 PM

IPL 2022 ರಲ್ಲಿ ಅಬ್ಬರಿಸಿದ ನಂತರ ದಿನೇಶ್ ಕಾರ್ತಿಕ್ (Dinesh Karthik) ಈಗ ಭಾರತದ ಪರ ತಮ್ಮ ಹವಾ ಸೃಷ್ಟಿಸುತ್ತಿದ್ದಾರೆ. ಕಾರ್ತಿಕ್ IPL ನ ಈ ಸೀಸನ್​ನಲ್ಲಿ ಪ್ರಬಲ ಪ್ರದರ್ಶನ ನೀಡುವ ಮೂಲಕ ಸುಮಾರು 3 ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿದರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 5 ಟಿ20 ಪಂದ್ಯಗಳ ಸರಣಿಯಲ್ಲಿ ಕಾರ್ತಿಕ್ ತಮ್ಮ ಸಾಮಥ್ರ್ಯ ತೋರಿದ್ದಾರೆ. ಭಾರತದ ಅನುಭವಿ ಆಟಗಾರ ಕಾರ್ತಿಕ್ ಸುದೀರ್ಘ ಕಾಯುವಿಕೆಯ ನಂತರ ತಂಡಕ್ಕೆ ಬಲಿಷ್ಠ ಪುನರಾಗಮನ ಮಾಡಿದರು. ಇದೀಗ ಅವರ ಸಹ ಆಟಗಾರ ಮುರಳಿ ವಿಜಯ್ (Murali Vijay) ಕೂಡ ಸುಮಾರು ಎರಡು ವರ್ಷಗಳ ಕಾಯುವಿಕೆಯ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ತಯಾರಿ ನಡೆಸಿದ್ದಾರೆ. ಕಾರ್ತಿಕ್‌ನಂತೆ ಮುರಳಿ ಕೂಡ ಬಿರುಸಿನ ಪುನರಾಗಮನ ಮಾಡಲು ಉತ್ಸುಕರಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಅವರು, ಈ ವರ್ಷ ತಮಿಳುನಾಡು ಪ್ರೀಮಿಯರ್ ಲೀಗ್ ಆಡುವುದಾಗಿ ಖಚಿತಪಡಿಸಿದ್ದಾರೆ. ಲೀಗ್‌ನ ಆರನೇ ಸೀಸನ್ ಜೂನ್ 23 ರಿಂದ ಜುಲೈ 31 ರವರೆಗೆ ನಡೆಯಲಿದೆ.

ವೈಯಕ್ತಿಕ ಜೀವನದತ್ತ ಗಮನಹರಿಸಲು ಬ್ರೇಕ್

38 ವರ್ಷದ ಮುರಳಿ ಅವರು ಐಪಿಎಲ್ 2020 ರಲ್ಲಿ ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈಗ ಅವರು ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ರೂಬಿ ತಿರುಚಿ ವಾರಿಯರ್ಸ್ ಪರ ಆಡಲಿದ್ದಾರೆ. ಕ್ರಿಕೆಟ್ ಮೈದಾನದಿಂದ ದೀರ್ಘಕಾಲ ದೂರ ಉಳಿದಿದ್ದರ ಹಿಂದಿನ ಕಾರಣವನ್ನು ವಿವರಿಸಿದ ಮುರಳಿ ವಿಜಯ್, ನಾನು ಆಡಲು ಬಯಸಿದ್ದೆ, ಆದರೆ ಸ್ವಲ್ಪ ಗಾಯವಾಗಿತ್ತು. ಅದೇ ಸಮಯದಲ್ಲಿ, ನನ್ನ ವೈಯಕ್ತಿಕ ಜೀವನದ ಕಡೆ ಗಮನಹರಿಸುವ ಸಲುವಾಗಿ ಒಂದು ಹಂತದಲ್ಲಿ ನಾನು ವಿರಾಮ ತೆಗೆದುಕೊಂಡಿದ್ದೆ. ಈಗ ತಮಿಳುನಾಡು ಪ್ರೀಮಿಯರ್ ಲೀಗ್ ನನ್ನ ಸ್ಥಿತಿಯನ್ನು ಅರ್ಥಮಾಡಿಕೊಂಡು ಮರಳಿ ಬರಲು ವೇದಿಕೆ ಕಲ್ಪಿಸಿದ್ದು ನನ್ನ ಅದೃಷ್ಟ ಎಂದಿದ್ದಾರೆ.

ಇದನ್ನೂ ಓದಿ
Image
T20 World Cup: ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದ ಆಯ್ಕೆ ಪ್ರಕ್ರಿಯೆ ಯಾವಾಗ? ಗಂಗೂಲಿ ನೀಡಿದ್ರು ಬಿಗ್​ ಅಪ್​ಡೇಟ್
Image
IND vs ENG: ಏಕದಿನ ಕ್ರಿಕೆಟ್​ನಲ್ಲಿ ಸುನಾಮಿ ಎಬ್ಬಿಸಿರುವ ಇಂಗ್ಲೆಂಡ್ ಮಣಿಸಲು ಸಮರಾಭ್ಯಾಸ ಪ್ರಾರಂಭಿಸಿದ ಭಾರತ
Image
IND vs SA 5th T20 Match Preview: ಬೆಂಗಳೂರಿನಲ್ಲಿ ಸರಣಿ ನಿರ್ಧಾರ; ಭಾರತಕ್ಕೆ ಇತಿಹಾಸ ಸೃಷ್ಟಿಸುವ ಅವಕಾಶ

ಇದನ್ನೂ ಓದಿ:IND vs SA: ಕಾರ್ತಿಕ್- ಹಾರ್ದಿಕ್ ಅಬ್ಬರ.. ಅವೇಶ್- ಹರ್ಷಲ್ ಮಾರಕ ದಾಳಿ; ಭಾರತಕ್ಕೆ 82 ರನ್ ಜಯ

ಅಸಾಧ್ಯವಾದುದ್ದನ್ನು ಸಾಧ್ಯವಾಗಿಸಿದ ಕಾರ್ತಿಕ್

ದಿನೇಶ್ ಕಾರ್ತಿಕ್ ಬಗ್ಗೆ ಮಾತನಾಡುವುದಾದರೆ, ಅವರು 2019 ರ ಏಕದಿನ ವಿಶ್ವಕಪ್ ನಂತರ ಭಾರತದ ಪರ ಯಾವುದೇ ಪಂದ್ಯವನ್ನು ಆಡಿರಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದಲ್ಲೂ ಅವರ ಬ್ಯಾಟ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಎಲ್ಲರೂ ಅವರ ವೃತ್ತಿಜೀವನ ಮುಗಿದಿದೆ ಎಂದು ಪರಿಗಣಿಸುತ್ತಿದ್ದರು, ಆದರೆ ಈ ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅವರು 16 ಪಂದ್ಯಗಳಲ್ಲಿ 183 ಸ್ಟ್ರೈಕ್ ರೇಟ್‌ನಲ್ಲಿ 330 ರನ್ ಗಳಿಸಿದರು.ಜೊತೆಗೆ RCB ಗಾಗಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದರು. ಈಗ ಭಾರತಕ್ಕೆ ಟಿ20 ವಿಶ್ವಕಪ್​ನಲ್ಲಿ ಫಿನಿಶರ್ ಅಗತ್ಯವಿದ್ದು, ಕಾರ್ತಿಕ್​ ಈ ಸ್ಥಾನಕ್ಕೆ ಜೀವ ತುಂಬುತ್ತಿದ್ದಾರೆ. ಕಾರ್ತಿಕ್ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ, ಅವರ ಮೊದಲ ಮದುವೆ ನಿಕಿತಾ ಅವರೊಂದಿಗೆ ಆಗಿತ್ತು. ಆದರೆ ಕಾರ್ತಿಕ್ ಅವರ ತಮಿಳುನಾಡಿನ ತಂಡದ ಸಹ ಆಟಗಾರರಾದ ಮುರಳಿ ವಿಜಯ್ ಮತ್ತು ನಿಕಿತಾ ಪರಸ್ಪರ ಪ್ರೀತಿಸುತ್ತಿರುವ ವಿಚಾರ ಜಗಜ್ಜಾಹೀರಾಗಿತ್ತು. ಇದರ ನಂತರ, ಕಾರ್ತಿಕ್ ನಿಕಿತಾಗೆ ವಿಚ್ಛೇದನ ನೀಡಿದರು. ನಂತರ ಕಾರ್ತಿಕ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ವಿವಾಹವಾದರು. ಇತ್ತ ಕಾರ್ತಿಕ್ ಮೊದಲ ಪತ್ನಿ ನಿಕಿತಾ ವಿಜಯ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

Published On - 3:05 pm, Sun, 19 June 22

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ