Dinesh Karthik: 16 ವರ್ಷ, 36 ಪಂದ್ಯ.. 3ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ; ಇದು ದಿನೇಶ್ ಕಾರ್ತಿಕ್ ಟಿ20 ಕರಿಯರ್
Dinesh Karthik: ಕೊನೆಯ ಎರಡು ಓವರ್‌ಗಳಲ್ಲಿ ಟೀಂ ಇಂಡಿಯಾ ಗೆಲುವಿಗೆ 34 ರನ್‌ಗಳ ಅಗತ್ಯವಿತ್ತು. ದಿನೇಶ್ ಕಾರ್ತಿಕ್ ಜೊತೆಗೆ ವಿಜಯ್ ಶಂಕರ್ ಕ್ರೀಸ್‌ನಲ್ಲಿದ್ದರು. 19ನೇ ಓವರ್‌ನಲ್ಲಿ ಕಾರ್ತಿಕ್ ರುಬೆಲ್ ಹುಸೇನ್ ಅವರ ಮೂರು ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ನಂತರ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.
ನಿನ್ನೆ ನಡೆದ ದಕ್ಷಿಣ ಆಫ್ರಿಕಾ (SA) ವಿರುದ್ಧದ ಐದು ಪಂದ್ಯಗಳ T20I ಸರಣಿಯಲ್ಲಿ ಟೀಮ್ ಇಂಡಿಯಾ (IND vs SA) ಪ್ರಬಲ ಪುನರಾಗಮನ ಮಾಡಿದೆ. ಭಾರತ ನೀಡಿದ 170 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 17 ಓವರ್‌ಗಳಲ್ಲಿ 87 ರನ್ಗಳಿಗೆ ಆಲೌಟ್ ಆಯಿತು. ಈಗ ಭಾನುವಾರ ನಡೆಯಲಿರುವ ಐದನೇ ಪಂದ್ಯ ನಿರ್ಣಾಯಕವಾಗಲಿದೆ. ದಿನೇಶ್ ಕಾರ್ತಿಕ್ (Dinesh Karthik), ನಾಲ್ಕನೇ ಪಂದ್ಯದಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸಿದರು. ಅವರ ಪ್ರದರ್ಶನ ಭಾರತ ದೊಡ್ಡ ಸ್ಕೋರ್ ಗಳಿಸಲು ನೆರವಾಯಿತು. ಕಾರ್ತಿಕ್ ಅವರ ಪ್ರಬಲ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 13 ಓವರ್‌ಗಳಲ್ಲಿ 81 ರನ್ ಗಳಿಸಿ, ನಾಲ್ಕು ವಿಕೆಟ್ ಕಳೆದುಕೊಂಡಿತು. ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ನಾಯಕ ರಿಷಬ್ ಪಂತ್ (Rituraj Gaikwad, Ishan Kishan, Shreyas Iyer and captain Rishabh Pant) ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಕಾರ್ತಿಕ್ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಟೀಂ ಇಂಡಿಯಾ ಇನ್ನಿಂಗ್ಸ್ ನಿಭಾಯಿಸಿದರು. ಇವರಿಬ್ಬರು ಐದನೇ ವಿಕೆಟ್‌ಗೆ 65 ರನ್‌ಗಳ ಜೊತೆಯಾಟ ನೀಡಿದರು. ಹೀಗಾಗಿ ನಿನ್ನೆಯ ಪಂದ್ಯದಲ್ಲಿ ದಿನೇಶ್ ಮನೆಮಾತಾಗಿದ್ದರು.
16 ವರ್ಷಗಳಲ್ಲಿ 36 ಟಿ20 ಪಂದ್ಯ
ದಿನೇಶ್ ಕಾರ್ತಿಕ್ ತಮ್ಮ 16 ವರ್ಷಗಳ ಟಿ20 ವೃತ್ತಿಜೀವನದಲ್ಲಿ ಕೇವಲ ಮೂರು ಬಾರಿ ಪಂದ್ಯಶ್ರೇಷ್ಠರಾಗಿದ್ದಾರೆ. ಈ ಮೂರು ಪಂದ್ಯಗಳು ಭಾರತಕ್ಕೆ ಪ್ರಮುಖ ಅಥವಾ ಮಾಡು ಇಲ್ಲವೇ ಮಡಿ ಪಂದ್ಯಗಳಾಗಿವೆ. ಈ ಮೂರು ಪಂದ್ಯಗಳಲ್ಲಿ ಕಾರ್ತಿಕ್ ಅವರು ಟೀಮ್ ಇಂಡಿಯಾವನ್ನು ತಮ್ಮದೇ ಆಟದಿಂದ ಗೆಲುವಿನತ್ತ ಮುನ್ನಡೆಸಿದರು.
ಇದನ್ನೂ ಓದಿ:IND vs SA: ಸಿಂಗಲ್ಗೆ ಒಲ್ಲೆ ಎಂದ ಪಾಂಡ್ಯ; 26 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಉತ್ತರ ಕೊಟ್ಟ ಕಾರ್ತಿಕ್
ದಿನೇಶ್ ವೃತ್ತಿಜೀವನ
ಕಾರ್ತಿಕ್ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಪಂದ್ಯವನ್ನು 1 ಡಿಸೆಂಬರ್ 2006 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಆಡಲಾಯಿತು. ಕಾರ್ತಿಕ್ 2018 ರ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಎರಡನೇ ಬಾರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಪಂದ್ಯ ನಿದಾಹಸ್ ಟ್ರೋಫಿಯ ಅಂತಿಮ ಪಂದ್ಯವಾಗಿತ್ತು. ನಿದಾಹಸ್ ಟ್ರೋಫಿಯಲ್ಲಿ ಮೂರು ತಂಡಗಳು ಭಾಗವಹಿಸಿದ್ದವು. ಶ್ರೀಲಂಕಾ ಫೈನಲ್‌ನಿಂದ ಹೊರಬಿತ್ತು. ಬಾಂಗ್ಲಾದೇಶ ಭಾರತವನ್ನು ಎದುರಿಸಿತು. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆದಿತ್ತು. ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ 18 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ಕೊನೆಯ ಎರಡು ಓವರ್‌ಗಳಲ್ಲಿ ಟೀಂ ಇಂಡಿಯಾ ಗೆಲುವಿಗೆ 34 ರನ್‌ಗಳ ಅಗತ್ಯವಿತ್ತು. ದಿನೇಶ್ ಕಾರ್ತಿಕ್ ಜೊತೆಗೆ ವಿಜಯ್ ಶಂಕರ್ ಕ್ರೀಸ್‌ನಲ್ಲಿದ್ದರು. 19ನೇ ಓವರ್‌ನಲ್ಲಿ ಕಾರ್ತಿಕ್ ರುಬೆಲ್ ಹುಸೇನ್ ಅವರ ಮೂರು ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ನಂತರ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.
ನಿನ್ನೆ ದಿನೇಶ್ ಆಟ ಜೋರಾಗಿತ್ತು
ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿತ್ತು. ಕಾರ್ತಿಕ್ 27 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಕಾರ್ತಿಕ್ ಅವರ ಚುರುಕಿನ ಆಟವು ಕೊನೆಯ ಐದು ಓವರ್‌ಗಳಲ್ಲಿ ಭಾರತಕ್ಕೆ 73 ರನ್ ಸೇರಿಸಲು ನೆರವಾಯಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಟಿ20ಯಲ್ಲಿ ಅತ್ಯಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆಯಿತು.