Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಏರ್​​ ಸುವಿಧಾ ನಿಯಮ ತೆಗೆದುಹಾಕಲು ಸರ್ಕಾರದ ಚಿಂತನೆ

ಆದಾಗ್ಯೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜಾಗತಿಕವಾಗಿ ಕೊವಿಡ್-19 ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಕನಿಷ್ಠ ಎರಡು ತಿಂಗಳುಗಳ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಏರ್​​ ಸುವಿಧಾ ನಿಯಮ ತೆಗೆದುಹಾಕಲು ಸರ್ಕಾರದ ಚಿಂತನೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 19, 2022 | 2:42 PM

ದೆಹಲಿ: ದೇಶಗಳು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿರ್ಬಂಧಗಳನ್ನು ಸಡಿಲಿಸುತ್ತಿದ್ದಂತೆ, ಭಾರತವು ಏರ್ ಸುವಿಧಾ (Air Suvidha) ನಿಯಮಗಳನ್ನು ತೆಗೆದು ಹಾಕುವ ಬಗ್ಗೆ ಚಿಂತನೆ ನಡೆಸುತ್ತಿದೆ. ಏರ್ ಸುವಿಧಾ ನಿಯಮವು ವಿದೇಶದಿಂದ ಆಗಮಿಸುವ ಜನರು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುತ್ತದೆ. ಆದಾಗ್ಯೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (Ministry of Health and Family Welfare )ಜಾಗತಿಕವಾಗಿ ಕೊವಿಡ್-19 (Covid-19) ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವುದರಿಂದ ಕನಿಷ್ಠ ಎರಡು ತಿಂಗಳುಗಳ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಅಂತರಾಷ್ಟ್ರೀಯ ದಟ್ಟಣೆ ಹೆಚ್ಚಾದಂತೆ ವಿಮಾನಯಾನದ ಅನುಕೂಲತೆಯನ್ನು ಹೆಚ್ಚಿಸಬಹುದೆಂಬ ಕಾರಣದಿಂದ ಏರ್ ಸುವಿಧಾ ನಿಯಮಗಳನ್ನು ತೆಗೆದುಹಾಕುವಂತೆ ನಾವು ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ. ಆದರೆ ಆರೋಗ್ಯ ಸಚಿವಾಲಯವು ಆಗಸ್ಟ್‌ನಲ್ಲಿ ಕಾರ್ಯಕ್ರಮವನ್ನು ಪರಿಶೀಲಿಸಿ ಈ ಬಗ್ಗೆ ನಿರ್ಧರಿಸುವುದಾಗಿ ಹೇಳಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ. ಏರ್ ಸುವಿಧಾ ಪೋರ್ಟಲ್ ಅನ್ನು ಆಗಸ್ಟ್ 2020 ರಲ್ಲಿ ಕಡ್ಡಾಯ ಸ್ವಯಂ-ವರದಿ ಪೋರ್ಟಲ್ ಆಗಿ ಪರಿಚಯಿಸಲಾಯಿತು. ಈ ಪೋರ್ಟಲ್ ಮೂಲಕ ಭಾರತಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರು ತಮ್ಮ ಪ್ರಯಾಣದ ವಿವರಗಳನ್ನು ಮತ್ತು ಅವರ ಲಸಿಕೆ ಅಥವಾ ಕೊವಿಡ್ 19 ಪರೀಕ್ಷೆಯ ಸ್ಥಿತಿಯನ್ನು ಸಲ್ಲಿಸಬೇಕು.

ಒಬ್ಬ ವ್ಯಕ್ತಿಯು ಹೆಚ್ಚಿನ ಅಪಾಯದ ಪ್ರದೇಶದಿಂದ ಆಗಮಿಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪೂರ್ವ-ಆಗಮನ ನೋಂದಣಿ ಪೋರ್ಟಲ್ ಸಹಕರಿಸುತ್ತದೆ. ಕಳೆದ ವರ್ಷಾಂತ್ಯದಲ್ಲಿ ಕೊವಿಡ್ 19ನ ಒಮಿಕ್ರಾನ್ ರೂಪಾಂತರಿ ಹರಡುತ್ತಿದ್ದಂತೆ ಕೊವಿಡ್ ಪೀಡಿತ ಪ್ರದೇಶದಿಂದ ಬರುವವರು ಹಿಂದಿನ 14 ದಿನಗಳ ಪ್ರಯಾಣದಂತಹ ವಿವರಗಳನ್ನು ಸಲ್ಲಿಸುವುದು ಮತ್ತು ಪ್ರಯಾಣದ ಮೊದಲು ಏರ್ ಸುವಿಧಾ ಪೋರ್ಟಲ್‌ನಲ್ಲಿ ನಕಾರಾತ್ಮಕ RT-PCR ಪರೀಕ್ಷಾ ವರದಿಗಳನ್ನು ಅಪ್‌ಲೋಡ್ ಮಾಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯವು ಕಡ್ಡಾಯಗೊಳಿಸಿತು.

ಆದಾಗ್ಯೂ, ಕೆಲವೊಮ್ಮೆ  ಪೋರ್ಟಲ್ ಕಾರ್ಯನಿರ್ವಹಿಸುತ್ತಿಲ್ಲ. ಏರ್ ಸುವಿಧಾ ಸ್ವೀಕೃತಿ ಪ್ರಮಾಣಪತ್ರದ ಅನುಪಸ್ಥಿತಿಯಲ್ಲಿ ವಿದೇಶಿ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ಸಂಸ್ಥೆಗಳಿಂದ ಬೋರ್ಡಿಂಗ್ ನಿರಾಕರಿಸಲಾಗಿದೆ ಎಂದು  ಪ್ರಯಾಣಿಕರು ದೂರಿದ್ದಾರೆ.  ತಾನು ಏರ್ ಸುವಿಧಾ ಫಾರ್ಮ್ ಅನ್ನು ಭರ್ತಿ ಮಾಡದೇ ಇದ್ದುದರಿಂದ ಏರ್‌ಲೈನ್‌ಗೆ ಏರ್ ಸುವಿಧಾ ಸಂಖ್ಯೆ ಸಿಕ್ಕಿಲ್ಲ. ಇದರಿಂದಾಗಿ ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಮಾಡಲು ಹೇಗೆ ಅನುಮತಿಸಲಿಲ್ಲ. ಇಡೀ ವಿಷಯವನ್ನು ಪಡೆಯಲು ನನಗೆ ಒಂದು ಗಂಟೆ ಬೇಕಾಯಿತು. ಹಾಗಾಗಿ ನನಗೆ ವಿಮಾನವೂ ಮಿಸ್ ಆಯಿತು ಎಂದು ಮ್ಯೂನಿಚ್‌ನಿಂದ ದೆಹಲಿಗೆ ಹತ್ತಿದ ಪ್ರಯಾಣಿಕನೊಬ್ಬರು ಹೇಳಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಕಳುಹಿಸಲಾದ ಇ-ಮೇಲ್ ಗೂ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಬೆಂಗಳೂರಿನಲ್ಲಿ ಮೋದಿ ಓಡಾಡುವ ರಸ್ತೆಗಳ ಕಾಲೇಜುಗಳಿಗೆ ಇಂದು ರಜೆ ಘೋಷಣೆ
Image
Swachh Bharat: ಪ್ರಗತಿ ಮೈದಾನ್ ಸುರಂಗ ಮಾರ್ಗ ಉದ್ಘಾಟನೆ ವೇಳೆ ಬರಿಗೈಲಿ ಕಸ ಹೆಕ್ಕಿ ಸ್ವಚ್ಛ ಭಾರತ್ ಸಂದೇಶ ರವಾನಿಸಿದ ಮೋದಿ
Image
Bengaluru Covid Cases: ಮುಂಬೈ ಬಳಿಕ ಭಾರತದ ಕೊವಿಡ್ ಹಾಟ್​ಸ್ಪಾಟ್​ ಆಗುತ್ತಿದೆಯಾ ಬೆಂಗಳೂರು?

ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ ಕಳೆದ ತಿಂಗಳಿನಿಂದ ಪ್ರತಿದಿನ 75,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಯಾಣಿಕರು ಭಾರತೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುತ್ತಿದ್ದಾರೆ.  ಹಲವಾರು ಪ್ರದೇಶಗಳು ಪೂರ್ವ-ಆಗಮನದ ನೋಂದಣಿ ಅಗತ್ಯವನ್ನು ಹೊಂದಿವೆ, ಇದು ಆರೋಗ್ಯ ಅಧಿಕಾರಿಗಳು ಸಂಭಾವ್ಯ ಸೋಂಕಿತ ಪ್ರಯಾಣಿಕರ ಮೇಲೆ ಕಣ್ಗಾವಲು ನಡೆಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಅಂತರರಾಷ್ಟ್ರೀಯ ಪ್ರಯಾಣವು ವಿಸ್ತರಿಸುತ್ತಿದ್ದಂತೆ, ಕೆಲವು ದೇಶಗಳು ಈ ಅಗತ್ಯವನ್ನು ರದ್ದುಗೊಳಿಸುತ್ತಿವೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 2:40 pm, Sun, 19 June 22

ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ