ಕಿಡ್ನ್ಯಾಪ್​: ನನ್ನ ಮಕ್ಕಳಾಣೆ ನಾನು ಹೇಳಿದ್ದೆಲ್ಲಾ ನಿಜ ಎಂದ ಮಾಜಿ ಸಚಿವ ವರ್ತೂರು ಪ್ರಕಾಶ್

ತನಿಖೆ ಚುರುಕುಗೊಳಿಸುವಂತೆ ಕೋರಲು ಹಾಗೂ ಅಗತ್ಯ ಮಾಹಿತಿ ನೀಡಲು ವರ್ತೂರು ಪ್ರಕಾಶ್​ ಪೊಲೀಸ್​ ಠಾಣೆಗೆ ಆಗಮಿಸಿದ್ದರು. ಎಸ್​ಪಿ ಭೇಟಿಯಾದ ಬಳಿಕ ಅವರು ಮಾಧ್ಯಮದ ಎದುರು ಈ ವಿಚಾರ ಹೇಳಿಕೊಂಡಿದ್ದಾರೆ.

ಕಿಡ್ನ್ಯಾಪ್​: ನನ್ನ ಮಕ್ಕಳಾಣೆ ನಾನು ಹೇಳಿದ್ದೆಲ್ಲಾ ನಿಜ ಎಂದ ಮಾಜಿ ಸಚಿವ ವರ್ತೂರು ಪ್ರಕಾಶ್
ವರ್ತೂರು ಪ್ರಕಾಶ್​
Edited By:

Updated on: Dec 04, 2020 | 5:14 PM

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್​ ಅಪಹರಣ ಪ್ರಕರಣ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ವಿಚಾರಕ್ಕೆ ಸಂಬಂಧಿಸಿ ವರ್ತೂರು ಪ್ರಕಾಶ್​ ಮತ್ತೊಮ್ಮೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ನನ್ನ ರಾಜಕೀಯ ಭವಿಷ್ಯವನ್ನು ದಯವಿಟ್ಟು ಹಾಳು ಮಾಡಬೇಡಿ. ನನ್ನನ್ನು ಹಣಕ್ಕಾಗಿಯೇ ಕಿಡ್ನ್ಯಾಪ್​ ಮಾಡಲಾಗಿತ್ತು ಎಂದು ಮತ್ತೊಮ್ಮೆ ಅವರು ಹೇಳಿದ್ದಾರೆ.

ನನ್ನ ಕಾರು ಚಾಲಕ ತಪ್ಪಿಸಿಕೊಳ್ಳದಿದ್ದರೆ ನನ್ನ ಕೊಲೆ ಆಗುತ್ತಿತ್ತು

ತನಿಖೆ ಚುರುಕುಗೊಳಿಸುವಂತೆ ಕೋರಲು ಹಾಗೂ ಅಗತ್ಯ ಮಾಹಿತಿ ನೀಡಲು ವರ್ತೂರು ಪ್ರಕಾಶ್​ ಪೊಲೀಸ್​ ಠಾಣೆಗೆ ಆಗಮಿಸಿದ್ದರು. ಎಸ್​ಪಿ ಭೇಟಿಯಾದ ಬಳಿಕ ಮಾತನಾಡಿದ ಅವರು, “ಹೆಣ್ಣು, ಜಮೀನು, ಹಸು ಸಾಲದ ವಿಚಾರಕ್ಕೆ ನನ್ನ ಕಿಡ್ನ್ಯಾಪ್ ಆಗಿರಲಿಲ್ಲ. ನನ್ನ ಅಪಹರಣ​ ಆಗಿದ್ದು ಹಣಕ್ಕಾಗಿ. ನನ್ನ ಕಾರು ಚಾಲಕ ತಪ್ಪಿಸಿಕೊಳ್ಳದಿದ್ದರೆ ನನ್ನ ಕೊಲೆ ಆಗುತ್ತಿತ್ತು,” ಎಂದರು.

ನನ್ನ ಬಗ್ಗೆ ತಪ್ಪಾಗಿ ಸುದ್ದಿ ಪ್ರಸಾರ ಮಾಡಬೇಡಿ ಎಂದಿರುವ ಪ್ರಕಾಶ್​, “ಕೈ‌ಮುಗಿದು ಕೇಳಿ‌ಕೊಳ್ಳುತ್ತೇನೆ, ನನ್ನ ಭವಿಷ್ಯ ಹಾಳು ಮಾಡಬೇಡಿ. ಮತ್ತೊಮ್ಮೆ ನಾನು ಶಾಸಕನಾಗಬೇಕೆಂದುಕೊಂಡಿದ್ದೇನೆ. ಏನೇನೋ ಹೇಳಿ ನನ್ನ ತೇಜೋವಧೆ ಮಾಡಬೇಡಿ. ನನ್ನ ಮಕ್ಕಳಾಣೆ ನಾನು ಹೇಳಿರೋದೆಲ್ಲಾ ನಿಜ. ನೂರಕ್ಕೆ ನೂರರಷ್ಟು ಹಣಕ್ಕಾಗಿ ನನ್ನ ಅಪಹಣ ನಡೆದಿದೆ,” ಎಂದು ಅವರು ಅಳಲು ತೋಡಿಕೊಂಡರು.

ಮೂರು ದಿನಗಳಲ್ಲಿ ಸುಳಿವು ಸಿಗಲಿದೆ:

ಈಗಾಗಲೇ ಎಸ್​ಪಿ ಅವರನ್ನು ಭೇಟಿಯಾಗಿ ತನಿಖೆ ಚುರುಕುಗೊಳಿಸುವಂತೆ ಕೇಳಿದ್ದೇನೆ. ಅವರಿಗೆ ಎಲ್ಲಾ ರೀತಿಯ ಸಹಕಾರಕ್ಕೆ ನಾನು ಸಿದ್ಧ. ಅವರಿಗೆ ಅಗತ್ಯವಾಗಿ ಬೇಕಿರುವ ಮಾಹಿತಿ ಕೂಡ ನೀಡುತ್ತೇನೆ. ಎರಡು ಮೂರು ದಿನಗಳಲ್ಲಿ ಅಹರಣಕಾರರ ಸುಳಿವು ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವರ್ತೂರು ಪ್ರಕಾಶ್​ ಕಿಡ್ನ್ಯಾಪ್ ಕೇಸ್​: ಕಾರ್​ನಲ್ಲಿ ಪತ್ತೆಯಾದ ವೇಲ್ ಬಟ್ಟೆ ಬಿಚ್ಚಿಟ್ಟ ರಹಸ್ಯವೇನು?

Published On - 5:13 pm, Fri, 4 December 20