Malur BJP: ಮೋದಿ ಹುಟ್ಟುಹಬ್ಬದ ಪ್ರಯುಕ್ತ ಮಾಲೂರು ಆಸ್ಪತ್ರೆಗಳಲ್ಲಿ ಇಂದು ಜನಿಸಿದ 14 ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ!

| Updated By: ಸಾಧು ಶ್ರೀನಾಥ್​

Updated on: Sep 17, 2022 | 6:35 PM

PM Narendra Modi Birthday celebration: ಮೂಲೂರಿನ ಮುಸ್ಲಿಂ ಬಿಜೆಪಿ ಮುಖಂಡ ಅಸ್ಗರ್ ಹಾಗೂ ಚಂದ್ರಶೇಖರ್ ಉಂಗುರ ಉಡುಗೊರೆ ನೀಡಿದ್ದು, ಮಾಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಿಗೆ ಉಂಗುರ ಉಡುಗೊರೆ ನೀಡುವುದರ ಜೊತೆಗೆ, ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರಿಗೆ ಉಂಗುರ ನೀಡಿ, ಹಣ್ಣು ಹಂಪಲು ನೀಡಿದ್ದಾರೆ.

Malur BJP: ಮೋದಿ ಹುಟ್ಟುಹಬ್ಬದ ಪ್ರಯುಕ್ತ ಮಾಲೂರು ಆಸ್ಪತ್ರೆಗಳಲ್ಲಿ ಇಂದು ಜನಿಸಿದ 14 ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ!
ಮೋದಿ ಹುಟ್ಟುಹಬ್ಬದ ಪ್ರಯುಕ್ತ ಮಾಲೂರು ಆಸ್ಪತ್ರೆಗಳಲ್ಲಿ ಇಂದು ಜನಿಸಿದ 10 ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ!
Follow us on

ಮಾಲೂರು: ಇಂದು ಪ್ರಧಾನಿ ನರೇಂದ್ರ ಮೋದಿಯವರ (PM Narendra Modi Birthday) ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಣೆ ಮಾಡ್ತಿದ್ದಾರೆ. ಇನ್ನೂ ವಿಶೇಷವಾಗಿ ಕೋಲಾರದಲ್ಲಿ ಮುಸ್ಲಿಂ ಮುಖಂಡರು ಹಾಗೂ ಮಾಲೂರು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅಭಿಮಾನಿಗಳು (Malur BJP) ವಿಭಿನ್ನವಾಗಿ ಮೋದಿ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಇಂದು ಜನಿಸಿದ ಮಕ್ಕಳಿಗೆ ಚಿನ್ನದ ಉಂಗುರ (Golden Ring) ಉಡುಗೊರೆ ನೀಡಿದ್ದಾರೆ.

ಮೂಲೂರಿನ ಮುಸ್ಲಿಂ ಬಿಜೆಪಿ ಮುಖಂಡ ಅಸ್ಗರ್ ಹಾಗೂ ಚಂದ್ರಶೇಖರ್ ರಿಂದ ಉಂಗುರ ಉಡುಗೊರೆ ನೀಡಿದ್ದು, ಮಾಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಿಗೆ ಉಂಗುರ ಉಡುಗೊರೆ ನೀಡುವುದರ ಜೊತೆಗೆ, ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರಿಗೆ ಉಂಗುರ ನೀಡಿ, ಹಣ್ಣು ಹಂಪಲು ನೀಡಿದ್ದಾರೆ. ಜೊತೆಗೆ, ಮಾಲೂರು ತಾಲೂಕಿನಾದ್ಯಂತ ಜನಿಸಿದ 14 ಮಕ್ಕಳಿಗೆ ಬಿಜೆಪಿಯ ಮುಸ್ಲಿಂ ಮುಖಂಡ ಅಸ್ಗರ್ ಉಂಗುರ ವಿತರಣೆ ಮಾಡಿ, ಪ್ರಧಾನಿ ಮೋದಿಯವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.