ಚಿಕನ್ ಬಿರಿಯಾನಿಗಾಗಿ ನೂಕುನುಗ್ಗಲು; ಅಲ್ಪಸಂಖ್ಯಾತ ಸಮಾವೇಶದಲ್ಲಿ ಬಿರಿಯಾನಿಗೆ ಮುಗಿಬಿದ್ದ ಜನ
ಸುಮಾರು 2,500 ಕೆಜಿ ಚಿಕನ್ ಬಿರಿಯಾನಿ ಸಿದ್ಧಪಡಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಕೋಲಾರ: ಜಿಲ್ಲಾ ಜೆಡಿಎಸ್ ಘಟಕದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಬಿರಿಯಾನಿಗಾಗಿ ಜನರು ಮುಗಿಬಿದ್ದಿರುವಂತಹ ಘಟನೆ ನಡೆದಿದೆ. ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ನೂಕುನುಗ್ಗಲು ಉಂಟಾಗಿದೆ. ಬಿರಿಯಾನಿ ಖಾಲಿಯಾಗುತ್ತಿದ್ದಂತೆ ಕಾರ್ಯಕರ್ತರು ಆಕ್ರೋಶಗೊಂಡರು. ಕಾರ್ಯಕರ್ತರನ್ನ ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟರು. ಮತ್ತೊಂದು ಬಿರಿಯಾನಿ ಪಾತ್ರೆ ತರುವಷ್ಟರಲ್ಲಿ ಕಾರ್ಯಕರ್ತರು ಗಲಾಟೆ ಮಾಡಿದರು. ಸುಮಾರು 2,500 ಕೆಜಿ ಚಿಕನ್ ಬಿರಿಯಾನಿ ಸಿದ್ಧಪಡಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು. ಸುಮಾರು 2500 ಕೆಜಿ ಚಿಕನ್ ಬಿರಿಯಾನಿ ತಯಾರಿಸಿದ್ದು, 300 ಮಂದಿ ಅಡುಗೆ ಸಹಾಯಕರಿಂದ ಬಿರಿಯಾನಿ ತಯಾರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಇಬ್ರಾಹಿಂ ಸೇರಿದಂತೆ ಅನೇಕ ಗಣ್ಯರು ಸಮಾವೇಶದಲ್ಲಿ ಭಾಗಿಯಾಗಿದ್ದು, ಸುಮಾರು 10 ರಿಂದ 15 ಸಾವಿರ ಮಂದಿ ಅಲ್ಪಸಂಖ್ಯಾತರು ಭಾಗವಹಿಸುವ ನಿರೀಕ್ಷೆ ಇತ್ತು.
ಕೋಲಾರ ವಿಧಾನಸಭಾ ಟಿಕೆಟ್ ಆಕಾಂಕ್ಷಿಗಳಿಂದ ಜೂಸ್ ವಿತರಣೆ ಮಾಡಿದ್ದು, ಜೂಸ್ ಪಡೆಯಲು ಜನರು ಮುಗ್ಗಿ ಬಿದ್ದರು. ಕುರ್ಕಿ ರಾಜೇಶ್ವರಿ ಬೆಂಬಲಿಗರಿಂದ ಜೂಸ್ ವಿತರಣೆ ಮಾಡಿದ್ದು, ಜೂಸ್ ಪಡೆಯಲು ನಾ ಮುಂದು ತಾ ಮುಂದು ಎಂದು ಜನರು ಮುಗ್ಗಿ ಬಿದಿದ್ದಾರೆ.