ಕೋಲಾರ: ಮುನ್ಸೂಚನೆ ನೀಡದೆ ಪ್ರಮೋದ್ ಮುತಾಲಿಕ್ ಆಗಮನ; ಶ್ರೀರಾಮ ಶೋಭಾಯಾತ್ರೆಯ ಧ್ವಜಾರೋಹಣ ನಡೆಸಿ ವಾಪಸ್

ಪೊಲೀಸ್ ಬಂದೋಬಸ್ತ್​ನಲ್ಲಿ ಪೊಲೀಸರು ಗಡಿಯವರಗೆ ಕರೆದುಕೊಂಡು ಹೋಗಿದ್ದಾರೆ. ಪ್ರಮೋದ್ ಮುತಾಲಿಕ್‌ ಭಾಗಿಯಾಗಿದ್ದಕ್ಕೆ ಇಲ್ಲಿ ಶ್ರೀರಾಮ ಶೋಭಾಯಾತ್ರೆಗೆ ಪೊಲೀಸರಿಂದ ತಡೆ ಒಡ್ಡಲಾಗಿದೆ. ಹೀಗಾಗಿ ಮುತಾಲಿಕ್ ಧ್ವಜಾರೋಹಣ ನಡೆಸಿ ವಾಪಸಾಗಿದ್ದಾರೆ.

ಕೋಲಾರ: ಮುನ್ಸೂಚನೆ ನೀಡದೆ ಪ್ರಮೋದ್ ಮುತಾಲಿಕ್ ಆಗಮನ; ಶ್ರೀರಾಮ ಶೋಭಾಯಾತ್ರೆಯ ಧ್ವಜಾರೋಹಣ ನಡೆಸಿ ವಾಪಸ್
ಮುನ್ಸೂಚನೆ ನೀಡದೆ ಪ್ರಮೋದ್ ಮುತಾಲಿಕ್ ಆಗಮನ
Updated By: ganapathi bhat

Updated on: Apr 10, 2022 | 10:41 PM

ಕೋಲಾರ: ಶ್ರೀರಾಮ ಶೋಭಾಯಾತ್ರೆಯ ಧ್ವಜಾರೋಹಣ ಮಾಡಿದ ಪ್ರಮೋದ್ ಮುತಾಲಿಕ್, ಕೇವಲ ಧ್ವಜಾರೋಹಣ ನಡೆಸಿಕೊಟ್ಟು ವಾಪಸ್ ಆಗಿದ್ದಾರೆ. ಕೋಲಾರ ನಗರದ ಎಂ.ಜಿ. ರಸ್ತೆಯಲ್ಲಿ ಛತ್ರಪತಿ ಶಿವಾಜಿಗೆ ಹಾರ ಹಾಕಿ ನಂತರ, ಕೇಸರಿ ಭಾವುಟ ಹಾರಿಸಿ ಜಯ ಘೋಷ ಕೂಗಿ ಮುತಾಲಿಕ್ ವಾಪಸ್ ಆಗಿದ್ದಾರೆ. ಪೊಲೀಸ್ ಬಂದೋಬಸ್ತ್​ನಲ್ಲಿ ಪೊಲೀಸರು ಗಡಿಯವರಗೆ ಕರೆದುಕೊಂಡು ಹೋಗಿದ್ದಾರೆ. ಪ್ರಮೋದ್ ಮುತಾಲಿಕ್‌ ಭಾಗಿಯಾಗಿದ್ದಕ್ಕೆ ಇಲ್ಲಿ ಶ್ರೀರಾಮ ಶೋಭಾಯಾತ್ರೆಗೆ ಪೊಲೀಸರಿಂದ ತಡೆ ಒಡ್ಡಲಾಗಿದೆ. ಹೀಗಾಗಿ ಮುತಾಲಿಕ್ ಧ್ವಜಾರೋಹಣ ನಡೆಸಿ ವಾಪಸಾಗಿದ್ದಾರೆ.

ಮುನ್ಸೂಚನೆ ನೀಡದೆ ಪ್ರಮೋದ್ ಮುತಾಲಿಕ್ ಆಗಮನ ಹಿನ್ನೆಲೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಶೋಭಾಯಾತ್ರೆಗೆ ತಡೆ ಒಡ್ಡಲಾಗಿತ್ತು. ಪೊಲೀಸರಿಂದ ಅನುಮತಿ ಪಡೆಯದೆ ಮುತಾಲಿಕ್ ಕೋಲಾರಕ್ಕೆ ಬಂದಿದ್ದರು. ಮುನ್ಸೂಚನೆ ನೀಡದೆ ಆಗಮನ ಹಿನ್ನೆಲೆ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್‌ರನ್ನು ಪೊಲೀಸರು ಸುತ್ತುವರಿದಿದ್ದರು. ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಎಸ್‌ಪಿ ದೇವರಾಜ್‌ ಗರಂ ಆಗಿದ್ದಾರೆ. ಶ್ರೀರಾಮನಿಗೆ ಇಪ್ಪತ್ತು ನಿಮಿಷದಲ್ಲಿ ಪೂಜೆ ಸಲ್ಲಿಸಿ ವಾಪಸ್ ಹೋಗಿ ಎಂದು ಮುತಾಲಿಕ್‌ಗೆ SP ದೇವರಾಜ್‌ ಸೂಚನೆ ನೀಡಿದ್ದಾರೆ. ಡಿಜೆ ವಾಹನವನ್ನು ಕೋಲಾರ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಕಳೆದ ಎರಡು ಬಾರಿ ಮುತಾಲಿಕ್ ಆಗಮನಕ್ಕೆ‌ ನಿರ್ಬಂಧ ವಿಧಿಸಲಾಗಿತ್ತು. ಮುತಾಲಿಕ್ ಆಗಮನಕ್ಕೆ‌ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.

ಕೋಲಾರದಲ್ಲಿ ಹಲವು ಗೊಂದಲ ವಿವಾದದ ನಡುವೆ ಶೋಭಾಯಾತ್ರೆಗೆ ಚಾಲನೆ ನೀಡಲಾಗಿದೆ. ಕೋಲಾರದಲ್ಲಿ ಶ್ರೀರಾಮ ಶೋಭಾಯಾತ್ರೆ ಆರಂಭವಾಗಿದೆ. ಅನುಮತಿ ಪಡೆಯದೆ ಪ್ರಮೋದ್ ಮುತಾಲಿಕ್ ಬಂದ ಹಿನ್ನೆಲೆ ಶೋಭಾಯಾತ್ರೆಗೆ ತಡೆ ಮಾಡಲಾಗಿತ್ತು. ಮತ್ತೆ ಪ್ರಮೋದ್ ಮುತಾಲಿಕ್ ತೆರಳಿದ ನಂತರ ಶೋಭಾಯಾತ್ರೆಗೆ ಚಾಲನೆ ನೀಡಲಾಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರ ಮನವಿ ಮೇರೆಗೆ ಚಾಲನೆ ಕೊಡಲಾಗಿದೆ.

ನನ್ನನ್ನು ತಡೆಯುವುದರ ಹಿಂದೆ ಯಾವುದೋ ಶಕ್ತಿ ಕೆಲಸ ಮಾಡುತ್ತಿದೆ: ಪ್ರಮೋದ್ ಮುತಾಲಿಕ್

ಕೋಲಾರ ಏನೂ ಪಾಕಿಸ್ತಾನದಲ್ಲಿ ಇಲ್ಲ. ಇದು ಬಹುದೊಡ್ಡ ಸೂಕ್ಷ್ಮ ಪ್ರದೇಶವು ಸಹ ಅಲ್ಲ. ನಾನು ಭಟ್ಕಳ ದಂತಹ ಪ್ರದೇಶದಲ್ಲೇ ಸಭೆ ಮಾಡಿದ್ದೇನೆ. ಕೋಲಾರದಲ್ಲಿ‌ ನನ್ನನ್ನು ತಡೆಯುವುದರ ಹಿಂದೆ ಯಾವುದೋ ಶಕ್ತಿ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ಏಕಪಕ್ಷೀಯವಾಗಿ ನಡೆದುಕೊಂಡಿದೆ. ಈ ರೀತಿ ವರ್ತನೆ ಸರಿಯಲ್ಲ. ಇದು ಮುಂದಿನ ದಿನಗಳಲ್ಲಿ ನಿಮ್ಮನ್ನ ನುಂಗಿ ಹಾಕುತ್ತದೆ. ನೀವು ದೇಶಭಕ್ತಿಯನ್ನು ತಡೆಯುತ್ತಿದ್ದೀರಾ, ನಮ್ಮ ಸ್ವಾತಂತ್ರ್ಯವನ್ನು ತಡಿಯುತ್ತಾ ಇದ್ದೀರಾ, ಸಂವಿಧಾನವನ್ನು ಸಹ ತಡೆಯುತ್ತಿದ್ದೀರಾ. ಈ ರೀತಿಯ ದಾದಾಗಿರಿಯ ಮನಸ್ಥಿತಿ ಸರಿಯಲ್ಲ. ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡ್ತೇವೆ ಎಂದು ಕೋಲಾರದಲ್ಲಿ ಹೊರಡುವ ಮುನ್ನ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.

ವಿವಿಧೆಡೆ ಶ್ರೀರಾಮ ಶೋಭಾಯಾತ್ರೆ

ಬೆಳಗಾವಿ: ರಾಮ ನವವಿ ಅಂಗವಾಗಿ ನಿಪ್ಪಾಣಿ ಪಟ್ಟಣದಲ್ಲಿ ರಾಮಸೇನಾ ಹಿಂದೂಸ್ಥಾನ ಸಮಿತಿಯಿಂದ 15 ಅಡಿ ಎತ್ತರದ ರಾಮ, ಹನುಮಂತನ ಮೂರ್ತಿ ಮೆರವಣಿಗೆ ಮಾಡಲಾಗಿದೆ. ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿವೆ.

ಚಿಕ್ಕಬಳ್ಳಾಪುರ: ಶ್ರೀರಾಮ ನವಮಿ ಅಂಗವಾಗಿ ಗೌರಿಬಿದನೂರಿನ ನದಿಗಡ್ಡೆ ಆಂಜನೇಸ್ವಾಮಿ ದೇವಸ್ಥಾನದಿಂದ ಬೆಂಗಳೂರು ವೃತ್ತದವರೆಗೆ ವಿಹೆಚ್​ಪಿ, ಬಜರಂಗದಳ ಕಾರ್ಯಕರ್ತರಿಂದ ಶೋಭಾಯಾತ್ರೆ ನಡೆಸಲಾಗಿದೆ. ಭಗವಾಧ್ವಜ ಹಿಡಿದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಶ್ರೀರಾಮ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ಪ್ರಕರಣ; ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಇದನ್ನೂ ಓದಿ: ಅಜಾನ್ ನಿರ್ಬಂಧಿಸಲು ಏಪ್ರಿಲ್ 13ರವರೆಗೆ ಕರ್ನಾಟಕ ಸರ್ಕಾರಕ್ಕೆ ಡೆಡ್​ಲೈನ್ ನೀಡಿದ ಪ್ರಮೋದ್ ಮುತಾಲಿಕ್

Published On - 5:32 pm, Sun, 10 April 22