ಕೆರೆ ತುಂಬವ ಮೊದಲೇ ಬೇರೆ ಗ್ರಾಮಕ್ಕೆ ಕೆ.ಸಿ.ವ್ಯಾಲಿ ನೀರು ಹರಿಸಿದ್ದಕ್ಕೆ ವಿರೋಧ

ಕೆರೆ ತುಂಬವ ಮೊದಲೇ ಬೇರೆ ಗ್ರಾಮಕ್ಕೆ ಕೆ.ಸಿ.ವ್ಯಾಲಿ ನೀರು ಹರಿಸಿದ್ದಕ್ಕೆ ವಿರೋಧ

ಕೋಲಾರ: ಕೆರೆ‌ ಪೂರ್ತಿಯಾಗಿ ತುಂಬುವ ಮೊದಲೇ ನೀರನ್ನು ಬೇರೆ ಗ್ರಾಮದ ಕೆರೆಗೆ ಹರಿಸಿದ್ದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಸಿ.ವ್ಯಾಲಿ ಯೋಜನೆಯ ನೀರು ಕೋಲಾರ ತಾಲೂಕಿನ ಎಸ್.ಅಗ್ರಹಾರ ಗ್ರಾಮದ ಕೆರೆಗೆ ಬರುತ್ತಿತ್ತು. ಕೆರೆ ತುಂಬುವ ಮೊದಲೇ ಜನಘಟ್ಟ ಕೆರೆಗೆ ನೀರು ಹರಿಸಲು‌ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲ ಕಾಲ ಉದ್ರಿಕ್ತ ವಾತಾವರಣ ಉಂಟಾಗಿತ್ತು. ಪೊಲೀಸರು ಗ್ರಾಮಸ್ಥರನ್ನು ಸ್ಥಳದಿಂದ ಚದುರಿಸಿದ ಬಳಿಕ ಬಿಗಿ ಬಂದೋಬಸ್ತ್ ನಡುವೆ ತಹಶೀಲ್ದಾರ್ ಶೋಭಿತಾ ಅವರು ಕೆರೆಯ ತೂಬನ್ನು ಓಪನ್ ಮಾಡಿಸಿ ನೀರನ್ನು ಹರಿಸಿದ್ದಾರೆ.

Click on your DTH Provider to Add TV9 Kannada