Kolar News: ನಕಲಿ ವೈದ್ಯರುಗಳ ಮೇಲೆ ಅಧಿಕಾರಿಗಳ ತಂಡ ದಾಳಿ: 3 ಕ್ಲಿನಿಕ್​ ಸೀಜ್​

| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2023 | 9:18 PM

ಸಂಬಂಧಿಸಿದ ದಾಖಲಾತಿಗಳನ್ನು ತೋರಿಸದ ಹಿನ್ನೆಲೆ ನಕಲಿ ವೈದ್ಯರುಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, 3 ನಕಲಿ ಕ್ಲಿನಿಕ್​ಗಳನ್ನು ಸೀಜ್​ ಮಾಡಿದ್ದಾರೆ.

Kolar News: ನಕಲಿ ವೈದ್ಯರುಗಳ ಮೇಲೆ ಅಧಿಕಾರಿಗಳ ತಂಡ ದಾಳಿ: 3 ಕ್ಲಿನಿಕ್​ ಸೀಜ್​
ನಕಲಿ ಕ್ಲಿನಿಕ್​ಗಳನ್ನು ಸೀಜ್ ಮಾಡಿದ ಅಧಿಕಾರಿಗಳು
Follow us on

ಕೋಲಾರ,ಜುಲೈ 17: ನಕಲಿ ವೈದ್ಯರುಗಳ (fake doctors) ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, 3 ನಕಲಿ ಕ್ಲಿನಿಕ್​ಗಳನ್ನು ಸೀಜ್​ ಮಾಡಿದ್ದಾರೆ. ಕೋಲಾರ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಇಂದು ದಾಳಿ ಮಾಡಿದ್ದು, ಚಿಟ್ನಹಳ್ಳಿ, ಶೆಟ್ಟಿಮಾದಮಂಗಲ, ಮದನಹಳ್ಳಿ ಕ್ರಾಸ್​ ಬಳಿಯ ಗೋಕುಲ್​ ಕ್ಲಿನಿಕ್​, ವೆಂಕಟೇಶ್ವರ ಕ್ಲಿನಿಕ್​, ಆನಂದ್​ ಕ್ಲಿನಿಕ್​ ಜಪ್ತಿ ಮಾಡಿದ್ದಾರೆ. ಸಂಬಂಧಿಸಿದ ದಾಖಲಾತಿಗಳನ್ನು ತೋರಿಸದ ಹಿನ್ನೆಲೆ ದಾಳಿ ಮಾಡಿ ಸೀಜ್​ ಮಾಡಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

1 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಉಪ ಖಜಾನೆ ಸಹಾಯಕ ಅಧಿಕಾರಿ, FDA

ಹಾವೇರಿ: ಪಶು ಚಿಕಿತ್ಸಾಲಯದ ಬಿಲ್​ ಪಾಸ್ ಮಾಡಲು 1 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಹಾಯಕ ಖಜನಾಧಿಕಾರಿ ಮತ್ತು ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: KSRTC: ಕೆಎಸ್​ಆರ್​ಟಿಸಿ ಹಳೆಯ ಬಸ್​​​ಗಳಿಗೆ ಮರುಜೀವ; ಹೊಚ್ಚಹೊಸದಾಗಿ ರಸ್ತೆಗಿಳಿಯಲಿವೆ 500 ಬಸ್​ಗಳು!

ರಟ್ಟೀಹಳ್ಳಿ ಉಪ ಖಜಾನೆ ಸಹಾಯಕ ಅಧಿಕಾರಿ ಬಸವರಾಜ ಕಡೇಮನಿ, ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಬಾವಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ನಕಲಿ ಕಂಪನಿ ಹೆಸರಲ್ಲಿ ಗುಟ್ಕಾ ತಯಾರಿಕೆ

ಕಲಬುರಗಿ: ನಗರದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ, ಅನಧಿಕೃತವಾಗಿ ಗುಟ್ಕಾ ತಯಾರಿಕೆ ಮಾಡುತ್ತಿರುವದು ಪತ್ತೆಯಾಗಿತ್ತು. ದಾಲ್ ಮಿಲ್ ನೊಳಗೆ, ಮಾಣಿಕಚಂದ ಅನ್ನೋ ನಕಲಿ ಕಂಪನಿ ಹೆಸರಲ್ಲಿ ದುಷ್ಕರ್ಮಿಗಳು ನಕಲಿ ಗುಟ್ಕಾ ತಯಾರಿಕೆ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಬ್ ಅರ್ಬನ್ ಠಾಣೆ ಪೊಲೀಸರು ದಾಳಿ ಮಾಡಿ, 20 ಲಕ್ಷಕ್ಕೂ ಅಧಿಕ ಮೌಲ್ಯದ ಗುಟ್ಕಾ ತಯಾರಿಕೆ ವಸ್ತುಗಳನ್ನು ಜಪ್ತಿ ಮಾಡಿದ್ದರು.

ಇದನ್ನೂ ಓದಿ: ಸೇವಾ ನ್ಯೂನ್ಯತೆ ಎಸಗಿದ ಬಿಲ್ಡರ್‌ಗೆ ಧಾರವಾಡ ಜಿಲ್ಲಾ ಗ್ರಾಹಕರ ನ್ಯಾಯಾಲಯದಿಂದ ದಂಡ

ಗುಟ್ಕಾ ತಯಾರಿಕೆಗೆ ಉತ್ತರಪ್ರದೇಶ, ಬಿಹಾರ್​ದಿಂದ ಇಪ್ಪತ್ತು ಕಾರ್ಮಿಕರನ್ನು ಕರೆದುಕೊಂಡು ಬಂದಿದ್ದು, ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಗುಟ್ಕಾ ತಯಾರ ಮಾಡಿ ಮಾರಾಟ ಮಾಡಲು ಅವಕಾಶವಿಲ್ಲಾ. ಆದರೆ ದುಷ್ಕರ್ಮಿಗಳು ಕಲಬುರಗಿ ನಗರದಲ್ಲಿ ಬಂದ್ ಬಿದ್ದಿರೋ ದಾಲ್ ಮಿಲ್ ನೊಳಗೆ ಅನಧಿಕೃತ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಮಾಲೀಕರನ್ನು ಪತ್ತೆ ಮಾಡಿ, ಅವರ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:13 pm, Mon, 17 July 23