KSRTC: ಕೆಎಸ್​ಆರ್​ಟಿಸಿ ಹಳೆಯ ಬಸ್​​​ಗಳಿಗೆ ಮರುಜೀವ; ಹೊಚ್ಚಹೊಸದಾಗಿ ರಸ್ತೆಗಿಳಿಯಲಿವೆ 500 ಬಸ್​ಗಳು!

ಹೆಚ್ಚಿನ ಬಸ್‌ಗಳಲ್ಲಿ ಎಂಜಿನ್ ಒಂದೇ ಆಗಿರುತ್ತದೆ ಮತ್ತು ಅಗತ್ಯವಿದ್ದರೆ ಅದನ್ನು ನವೀಕರಿಸಲಾಗುತ್ತದೆ. ಆದರೆ, ಬಸ್‌ಗಳು ರಸ್ತೆಗಿಳಿದು 15 ವರ್ಷ ಪೂರೈಸಿದ ನಂತರ ಅವುಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ.

KSRTC: ಕೆಎಸ್​ಆರ್​ಟಿಸಿ ಹಳೆಯ ಬಸ್​​​ಗಳಿಗೆ ಮರುಜೀವ; ಹೊಚ್ಚಹೊಸದಾಗಿ ರಸ್ತೆಗಿಳಿಯಲಿವೆ 500 ಬಸ್​ಗಳು!
ಕೆಎಸ್​ಆರ್​ಟಿಸಿ ಬಸ್
Follow us
ಗಣಪತಿ ಶರ್ಮ
|

Updated on:Jul 17, 2023 | 8:54 PM

ಬೆಂಗಳೂರು, ಜುಲೈ 17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಹೊಸ ಬಸ್‌ಗಳನ್ನು ಖರೀದಿಸಿ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿರುವುದರ ಜತೆಗೆ, ಹಳೆಯ ಬಸ್‌ಗಳನ್ನು ನವೀಕರಿಸಲು ಬಸ್ ಡಿಪೋಗಳಿಗೆ ಜವಾಬ್ದಾರಿ ವಹಿಸಿದೆ. 10 ಲಕ್ಷ ಕಿಲೋಮೀಟರ್ ಕ್ರಮಿಸಿದ ಸುಮಾರು 500 ಬಸ್‌ಗಳನ್ನು ಈಗ ನವೀಕರಿಸಲಾಗಿದೆ ಮತ್ತು ಹೊಚ್ಚಹೊಸದಾಗಿ ಕಾಣುವಂತೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ (Anbu Kumar) ಹೇಳಿದ್ದಾರೆ.

ಹೊಸ ಬಸ್‌ನ ಬೆಲೆ ಸುಮಾರು 40 ಲಕ್ಷ ರೂಪಾಯಿ ಇದೆ. ಆದರೆ ನಮ್ಮ ಸಿಬ್ಬಂದಿ ಕೇವಲ 3 ಲಕ್ಷ ರೂಪಾಯಿಗಳಿಗೆ ಹಳೆಯ ಬಸ್‌ಗಳನ್ನು ಹೊಸದಾಗಿ ಕಾಣುವಂತೆ ಮಾಡುತ್ತಿದ್ದಾರೆ ಎಂದು ಅವರು ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಿಗಮವು ಭಾರೀ ನಷ್ಟವನ್ನು ಅನುಭವಿಸಿತ್ತು ಮತ್ತು ಈಗ ಚೇತರಿಸಿಕೊಳ್ಳುತ್ತಿದೆ. ಕೋವಿಡ್ ಕಾರಣದಿಂದ, ಕೆಎಸ್‌ಆರ್‌ಟಿಸಿಗೆ ಯಾವುದೇ ಹೊಸ ಬಸ್‌ಗಳನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ ಮತ್ತು ಹಳೆಯ ಬಸ್‌ಗಳನ್ನು ನವೀಕರಿಸಿ ಹೊಚ್ಚ ಹೊಸ ರೂಪದಲ್ಲಿ ಪುನರ್​​ ರೂಪಿಸುವ ಯೋಚನೆ ಹೊಳೆಯಿತು. ಒಂದು ವರ್ಷದಲ್ಲಿ ಸುಮಾರು 500 ಹಳೆಯ ಬಸ್‌ಗಳನ್ನು ನವೀಕರಿಸಿದ್ದೇವೆ ಮತ್ತು ಪ್ರತಿ ವಾರ ಇದಕ್ಕೆ ಮತ್ತಷ್ಟು ಸೇರ್ಪಡಯಾಗುತ್ತಿವೆ ಎಂದು ಕುಮಾರ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಸುಮಾರು 10 ವರ್ಷಗಳಷ್ಟು ಹಳೆಯದಾದ ಮತ್ತು 10 ಲಕ್ಷ ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ಸಂಚಾರ ಮಾಡಿರುವ ಬಸ್‌ಗಳನ್ನು ನವೀಕರಿಸಲು ಆಯ್ಕೆ ಮಾಡುತ್ತೇವೆ. ಬಸ್ ಅನ್ನು ಆಯ್ಕೆ ಮಾಡಿದ ನಂತರ, ಚಾಸಿಸ್ ಹೊರತುಪಡಿಸಿ, ಅದನ್ನು ಸಂಪೂರ್ಣವಾಗಿ ಕಿತ್ತುಹಾಕಲಾಗುತ್ತದೆ. ಚಾಸಿಸ್ ಸವೆದು ಹೋದರೆ, ಅದನ್ನು ಕೂಡ ಸರಿಪಡಿಸಲಾಗುತ್ತದೆ ಮತ್ತು ಆಸನಗಳಿಂದ ಕಿಟಕಿಗಳವರೆಗೆ ಎಲ್ಲವನ್ನೂ ಬದಲಾಯಿಸಲಾಗುತ್ತದೆ. ಹೊರಭಾಗವನ್ನು ಸಹ ಮರುನಿರ್ಮಾಣ ಮಾಡಲಾಗುತ್ತದೆ. ಬಣ್ಣ ಬಳಿದ ನಂತರ ನವೀಕರಿಸಿದ ಬಸ್ ಹೊಚ್ಚಹೊಸ ಬಸ್‌ನಂತೆಯೇ ಉತ್ತಮವಾಗಿ ಕಾಣಿಸುತ್ತದೆ ಎಂದು ನವೀಕರಣಕ್ಕಾಗಿ ಬಸ್‌ಗಳನ್ನು ಆಯ್ಕೆ ಮಾಡುವ ಮಾನದಂಡವನ್ನು ಕುಮಾರ್ ವಿವರಿಸಿದ್ದಾರೆ.

ಇದನ್ನೂ ಓದಿ: KSRTC ಬಸ್​ ಸೌಲಭ್ಯದಿಂದ ವಂಚಿತವಾಗಿವೆ ದಕ್ಷಿಣ ಕರ್ನಾಟಕದ ಸಾವಿರಾರು ಗ್ರಾಮಗಳು

ಹೆಚ್ಚಿನ ಬಸ್‌ಗಳಲ್ಲಿ ಎಂಜಿನ್ ಒಂದೇ ಆಗಿರುತ್ತದೆ ಮತ್ತು ಅಗತ್ಯವಿದ್ದರೆ ಅದನ್ನು ನವೀಕರಿಸಲಾಗುತ್ತದೆ. ಆದರೆ, ಬಸ್‌ಗಳು ರಸ್ತೆಗಿಳಿದು 15 ವರ್ಷ ಪೂರೈಸಿದ ನಂತರ ಅವುಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಹಳೆ ಬಸ್​ಗಳ ನವೀಕರಣದ ಮೂಲಕ ನಿಗಮಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯ ಮಾಡಲು ಸಾಧ್ಯವಾಗಿದ್ದು, ಹಳೆಯ ಬಸ್‌ಗಳನ್ನು ನವೀಕರಿಸಲು ಬಸ್ ಡಿಪೋಗಳ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಕುಮಾರ್ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Mon, 17 July 23

ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್