KSRTC ಬಸ್​ ಸೌಲಭ್ಯದಿಂದ ವಂಚಿತವಾಗಿವೆ ದಕ್ಷಿಣ ಕರ್ನಾಟಕದ ಸಾವಿರಾರು ಗ್ರಾಮಗಳು

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಅಡಿ ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಕರ್ನಾಟಕದ ಅದೆಷ್ಟೋ ಹಳ್ಳಿಗಳು ಕೆಎಸ್​ಆರ್​ಟಿಸಿ ಬಸ್​​ ಸೌಲಭ್ಯ ಕಾಣದೆ ವಂಚಿತವಾಗಿವೆ. ದಕ್ಷಿಣ ಕರ್ನಾಟಕದ 15 ಜಿಲ್ಲೆಗಳ ಸಾವಿರಾರು ಊರುಗಳು ಇನ್ನುವರೆಗು ಕೆಎಸ್​ಆರ್​ಟಿಸಿ ಬಸ್​ ಕಂಡಿಲ್ಲ.

KSRTC ಬಸ್​ ಸೌಲಭ್ಯದಿಂದ ವಂಚಿತವಾಗಿವೆ ದಕ್ಷಿಣ ಕರ್ನಾಟಕದ ಸಾವಿರಾರು ಗ್ರಾಮಗಳು
ಕೆಎಸ್​ಆರ್​ಟಿಸಿ
Follow us
ವಿವೇಕ ಬಿರಾದಾರ
|

Updated on: Jun 13, 2023 | 3:39 PM

ಮೈಸೂರು: ರಾಜ್ಯ ಸರ್ಕಾರದ (Karnataka Government) ಶಕ್ತಿ ಯೋಜನೆ (Shakti yojana) ಅಡಿ ಸರ್ಕಾರಿ ಬಸ್​​ಗಳಲ್ಲಿ (Government Bus) ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಕರ್ನಾಟಕದ ಅದೆಷ್ಟೋ ಹಳ್ಳಿಗಳು ಕೆಎಸ್​ಆರ್​ಟಿಸಿ (KSRTC) ಬಸ್​​ ಸೌಲಭ್ಯ ಕಾಣದೆ ವಂಚಿತವಾಗಿವೆ. ಕೆಎಸ್‌ಆರ್‌ಟಿಸಿ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕರ್ನಾಟಕದ 15 ಜಿಲ್ಲೆಗಳ 17,794 ಗ್ರಾಮಗಳ ಪೈಕಿ 2,570 ಗ್ರಾಮಗಳಿಗೆ ಇನ್ನೂ ಕೆಎಸ್‌ಆರ್‌ಟಿಸಿ ಬಸ್​​ ಸೇವೆ ದೊರೆತಿಲ್ಲ. ಇದರಿಂದಾಗಿ ಈ ಗ್ರಾಮಗಳ ಮಹಿಳೆಯರು ಶಕ್ತಿ ಯೋಜನೆಯಿಂದ ವಂಚಿತರಾಗಿದ್ದು, ಶೀಘ್ರದಲ್ಲೇ ನಮ್ಮ ಹಳ್ಳಿಗಳಿಗೂ ಬಸ್​​ ಸೇವೆ ಒದಗಿಸಿ ಎಂದು ಒತ್ತಾಯಿಸಿದ್ದಾರೆ.

2023ರ ಫೆ.24ರಂದು ಶಿವಮೊಗ್ಗ ಎಂಎಲ್‌ಸಿ ಡಿ.ಎಸ್ ಅರುಣ ಅವರು ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಾರಿಗೆ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆಯ 600 ಹಳ್ಳಿಗಳು, ತುಮಕೂರು ಜಿಲ್ಲೆಯ 484, ಶಿವಮೊಗ್ಗ ಜಿಲ್ಲೆಯ 434, ದಾವಣಗೆರೆ ಜಿಲ್ಲೆಯ 356, ಚಿಕ್ಕಮಗಳೂರು ಜಿಲ್ಲೆಯ 331, ಉಡುಪಿ ಜಿಲ್ಲೆಯ 101, ದಕ್ಷಿಣ ಕನ್ನಡ ಜಿಲ್ಲೆಯ 99, ಮಂಡ್ಯ ಜಿಲ್ಲೆಯ 53, ಕೊಡಗು ಜಿಲ್ಲೆಯ 45 ಹಳ್ಳಿಗಳು ಕೆಎಸ್​ಆರ್​ಟಿಸಿ ಬಸ್​ ಸೌಲಭ್ಯ ಹೊಂದಿಲ್ಲ ಎಂದು ತಿಳಿಸಿದ್ದರು.

ಅಭಿವೃದ್ಧಿಯಾಗದ ಹಳ್ಳಿಗಳು ತಮ್ಮ ಆರೋಗ್ಯ, ಶಿಕ್ಷಣ ಮತ್ತು ಇತರ ಜೀವನೋಪಾಯದ ಅಗತ್ಯಗಳಿಗಾಗಿ ಹೆಚ್ಚಾಗಿ ನಗರಗಳನ್ನು ಅವಲಂಬಿಸಿವೆ. ಆದರೆ ಈ ಹಳ್ಳಿಗಳಿಗೆ ಕೆಎಸ್​ಆರ್​​ಟಿಸಿ ಬಸ್​​ಗಳ ಸೌಲಭ್ಯ ಇನ್ನುವರೆಗು ದೊರೆತಿಲ್ಲ. ಇನ್ನು ಕರಾವಳಿ ಕರ್ನಾಟಕ, ಮೈಸೂರು ಮತ್ತು ಬೆಂಗಳೂರನ್ನು ಹೆಚ್ಚು ಅವಲಂಬಿಸಿರುವ ರಾಜ್ಯದ ಮಲೆನಾಡು ಪ್ರದೇಶಗಳಲ್ಲಿನ ದೂರದ ಹಳ್ಳಿಗಳು ಸಾರಿಗೆ ಸೌಲಭ್ಯವನ್ನು ಕಂಡಿಲ್ಲ. ಅಲ್ಲದೇ ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಕೇವಲ ಶೇ 10 ರಷ್ಟು ಮಾತ್ರೆ ಕೆಎಸ್​​ಆರ್​ಟಿಸಿ ಬಸ್​ ಸೌಲಭ್ಯ ದೊರೆತಿದೆ.

ಇದನ್ನೂ ಓದಿ: 2ನೇ ದಿನ ಸರ್ಕಾರಿ ಬಸ್​ಗಳಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಎಷ್ಟು? ಇಲ್ಲಿದೆ ಅಂಕಿ ಅಂಶ ​

ಚಿಕ್ಕಮಗಳೂರಿನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ದಟ್ಟಕಾಡು, ಗುಡ್ಡಗಾಡುಗಳಿಂದ ಕೂಡಿದ ಜಿಲ್ಲೆಯಲ್ಲಿ ನೂರಾರು ಹಳ್ಳಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವಿಲ್ಲ. ಎನ್​ಆರ್​ಪುರ ತಾಲೂಕಿನ 58 ಗ್ರಾಮಗಳ ಪೈಕಿ 10 ಗ್ರಾಮಗಳಿಗೆ ಮಾತ್ರ ಸರಕಾರಿ ಬಸ್ ಸೌಲಭ್ಯವಿದೆ. ಅದೇ ರೀತಿ 80 ಗ್ರಾಮಗಳಿರುವ ಕೊಪ್ಪದಲ್ಲಿ 52 ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲ.

ಮೂಡಿಗೆರೆ ತಾಲೂಕಿನ 42, ಚಿಕ್ಕಮಗಳೂರಿನ 39, ಕಡೂರಿನ 41 ಗ್ರಾಮಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್​​ ಸೇವೆ ದೊರೆತಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರಿನಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಾರೆ. ಆದರೂ ಕೂಡ ಬಸ್​ ಸೌಲಭ್ಯ ಇಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಕೆಎಸ್‌ಆರ್‌ಟಿಸಿ ಜನಪ್ರಿಯ ಮಾರ್ಗಗಳಲ್ಲಿಯೂ ಸೀಮಿತ ಬಸ್‌ಗಳನ್ನು ಓಡಿಸುತ್ತಿದೆ. ಆದರೆ ಖಾಸಗಿ ನಿರ್ವಾಹಕರು ಸೇವೆಗಳನ್ನು ಒದಗಿಸುತ್ತಾರೆ. ಜಿಲ್ಲೆಯಲ್ಲಿ ಒಟ್ಟು 280 ಖಾಸಗಿ ಬಸ್‌ಗಳು ಗ್ರಾಮಸ್ಥರ ಅಗತ್ಯತೆಗಳನ್ನು ಪೂರೈಸುತ್ತಿವೆ. ಕೊಪ್ಪ ಮತ್ತು ಎನ್‌ಆರ್‌ ಪುರ ತಾಲೂಕಿನ ರಸ್ತೆಗಳಲ್ಲಿ ಸುಮಾರು 130 ಖಾಸಗಿ ಬಸ್‌ಗಳು ಸಂಚರಿಸುತ್ತಿವೆ ಎಂದು ಉದ್ಯಮಿ ನಾಗೇಶ ನಾಯ್ಕ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದ ಪ್ರತಿ ಹಳ್ಳಿಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಜನಜೀವನ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಾರ್ಯೋನ್ಮುಖವಾಗಬೇಕಿದೆ ಎಂದು ಒತ್ತಾಯಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್