Sign In

By signing in or creating an account, you agree with Associated Broadcasting Company's Terms & Conditions and Privacy Policy.

Shakti yojana: 2ನೇ ದಿನ ಸರ್ಕಾರಿ ಬಸ್​ಗಳಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಎಷ್ಟು? ಇಲ್ಲಿದೆ ಅಂಕಿ ಅಂಶ ​

ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಭಾನುವಾರ ರಾಜ್ಯಾದ್ಯಂತ ಚಾಲನೆ ದೊರೆತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿಯೇ ಪ್ರಯಾಣಿಸಿದ್ದಾರೆ. ಹಾಗಿದ್ದರೇ 2ನೇ ದಿನ ಸರ್ಕಾರಿ ಬಸ್​​ಗಳಲ್ಲಿ ಪ್ರಯಾಣಿಸಿದ ಮಹಿಳೆಯ ಸಂಖ್ಯೆ ಎಷ್ಟು? ಒಟ್ಟು ಟಿಕೆಟ್ ದರ ಎಷ್ಟು ಇಲ್ಲಿದೆ ಓದಿ ​

Shakti yojana: 2ನೇ ದಿನ ಸರ್ಕಾರಿ ಬಸ್​ಗಳಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಎಷ್ಟು? ಇಲ್ಲಿದೆ ಅಂಕಿ ಅಂಶ ​
ಮಹಿಳಾ ಪ್ರಯಾಣಿಕರು
Follow us
ವಿವೇಕ ಬಿರಾದಾರ
|

Updated on:Jun 13, 2023 | 2:15 PM

ಬೆಂಗಳೂರು: ಶಕ್ತಿ ಯೋಜನೆ (Shakti Yojana) ಅಡಿ ಮಹಿಳೆಯರು ಸರ್ಕಾರಿ ಬಸ್ (Government Bus) ​​ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಈ ಯೋಜನೆಗೆ ಭಾನುವಾರ ರಾಜ್ಯಾದ್ಯಂತ ಚಾಲನೆ ದೊರೆತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿಯೇ ಪ್ರಯಾಣಿಸಿದ್ದಾರೆ. ಮಹಿಳೆಯರು ಅಧಿಕವಾಗಿ ಸರ್ಕಾರಿ ಬಸ್​​ಗಳಲ್ಲಿ ಪ್ರಯಾಣಿಸಲು ಆರಂಭಿಸಿದ್ದರಿಂದ ನಗರ ಸಾರಿಗೆ ಬಸ್​ಗಳು ಫುಲ್​ ರಶ್​ ಆಗಿವೆ. ನಾಲ್ಕೂ ನಿಗಮಗಳ ಬಸ್​​ಗಳಲ್ಲಿ ಮಹಿಳೆಯರೇ ಕಾಣುತ್ತಿದ್ದಾರೆ. ಉಚಿತ ಪ್ರಯಾಣಕ್ಕೆ 2ನೇ ದಿನ ಸೋಮವಾರ (ಜೂ.12) 41.34 ಲಕ್ಷ ಮಹಿಳೆಯರು ಸರ್ಕಾರಿ ಬಸ್​ನಲ್ಲಿ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ: Free Bus Travel: ಭಾನುವಾರ ಕೇವಲ ಅರ್ಧದಿನದಲ್ಲಿ 5.7 ಲಕ್ಷಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಬಸ್​ಗಳಲ್ಲಿ ಉಚಿತವಾಗಿ ಪಯಣಿಸಿದರು!

 ಪ್ರಯಾಣಿಸಿದ ಸ್ತ್ರೀ ಶಕ್ತಿ ಸಂಖ್ಯೆ (ಭಾನುವಾರ ಮಧ್ಯರಾತ್ರಿ 12.00 ರಿಂದ ಸೋಮವಾರ ಮಧ್ಯರಾತ್ರಿ 12.00 ಗಂಟೆವರೆಗೆ)

ನಿಗಮ ಪ್ರಾಯಾಣಿಕರ ಸಂಖ್ಯೆ ಒಟ್ಟು ಟಿಕೆಟ್​ ದರ
ಕೆಎಸ್​ಆರ್​ಟಿಸಿ 11,40,057 3,57,84,677
ಬಿಎಂಟಿಸಿ 17,57,887 1,75,33,234.00
ವಾಯವ್ಯ ಸಾರಿಗೆ 8,31,840 2,10,66,638.00
ಕಲ್ಯಾಣ ಕರ್ನಾಟಕ ಸಾರಿಗೆ 4,04,942 1,39,68,885.00
ಒಟ್ಟು 41,34,726 8,83,53,434.00

5.70 ಲಕ್ಷ ಮಹಿಳೆಯರು ಶಕ್ತಿ ಯೋಜನೆ ಸೌಲಭ್ಯ ಪಡೆದಿದ್ದಾರೆ: ಉಗ್ರಪ್ಪ

5.70 ಲಕ್ಷ ಮಹಿಳೆಯರು ಶಕ್ತಿ ಯೋಜನೆ ಸೌಲಭ್ಯ ಪಡೆದಿದ್ದಾರೆ. ಬಿಜೆಪಿಯವರು ಗ್ಯಾರಂಟಿಗಳನ್ನು ಈಡೇರಿಸಲು ಆಗಲ್ಲ ಅಂತಿದ್ದರೂ, ಆದರೆ ಸರ್ಕಾರ ಸಮಯ ನಿಗದಿಮಾಡಿಕೊಂಡು ಜಾರಿಗೆ ತಂದಿದೆ. ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ ಅಂತಾ ಹೇಳುತ್ತಿದ್ದರು. ರಾಜ್ಯದ ಜನ ಈಗ ಒಂದು ಇಂಜಿನ್​ನನ್ನು ಶೆಡ್​​ಗೆ ಕಳಿಸಿದ್ದಾರೆ. 2024ರಲ್ಲಿ ಇನ್ನೊಂದು ಇಂಜಿನ್​ನನ್ನೂ ಜನ ಮನೆಗೆ ಕಳಿಸುತ್ತಾರೆ ಎಂದು ಮಾಜಿ ಸಂಸದ ವಿ.ಎಸ್​.ಉಗ್ರಪ್ಪ ವಾಗ್ದಾಳಿ ಮಾಡಿದರು.

ಬಿಜೆಪಿಯವರು ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ತಮಿಳುನಾಡಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪದಾಧಿಕಾರಿಗಳ ಸಭೆ ಮಾಡಿದ್ದಾರೆ. 2 ಬಾರಿ ತಮಿಳುನಾಡಿನವರು ಪ್ರಧಾನಿ ಆಗಬೇಕಿತ್ತು ಎಂದಿದ್ದಾರೆ. ತಮಿಳುನಾಡಿನವರು ಪಿಎಂ ಆಗಲು ಹೆಚ್ಚು ಸ್ಥಾನ ಗೆಲ್ಲಿಸಿ ಎಂದಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ಓಡಾಡುತ್ತಾರೆ. ಅಂದರೆ ಇವರ ಪ್ರಧಾನಿ ಮೋದಿ ಇಮೇಜ್ ಏನಾಯ್ತು. ಇವರು ದಕ್ಷಿಣ ಭಾರತದವರು ಪ್ರಧಾನಿ ಆಗಲು ಅವಕಾಶ ಮಾಡಿಕೊಡುತ್ತಾರಾ..? ಅಂತಹ ಅಡ್ವಾಣಿ ಅವರನ್ನೇ ಮೂಲೆಗುಂಪು ಮಾಡಿದವರು ಇವರು ಎಂದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:10 pm, Tue, 13 June 23