ಬೆಂಗಳೂರಿನ ಐಡಿಬಿಒ ಕಂಪನಿಗೆ ಬಾಂಬ್ ಬೆದರಿಕೆ: ಸ್ಥಳಕ್ಕೆ ಶ್ವಾನ, ಬಾಂಬ್ ನಿಷ್ಕ್ರಿಯ ದಳ ದೌಡು
ನಗರದ ಬೆಳ್ಳಂದೂರಿನಲ್ಲಿರುವ ಇಕೋ ಸ್ಪೇಸ್ನ ಐಡಿಬಿಒ ಕಂಪನಿಗೆ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಮಾಡಲಾಗಿದೆ. ಬಾಂಬ್ ಇಟ್ಟಿದ್ದೇವೆ, ಕೆಲ ಹೊತ್ತಿನಲ್ಲಿ ಸ್ಫೋಟವಾಗಲಿದೆ ಎಂದು ಬೆದರಿಕೆ ಹಾಕಿದ್ದಾನೆ.
ಬೆಂಗಳೂರು: ನಗರದ ಬೆಳ್ಳಂದೂರಿನಲ್ಲಿರುವ ಇಕೋ ಸ್ಪೇಸ್ನ ಐಡಿಬಿಒ ಕಂಪನಿಗೆ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ (Bomb threat) ಮಾಡಲಾಗಿದೆ. ಬಾಂಬ್ ಇಟ್ಟಿದ್ದೇವೆ, ಕೆಲ ಹೊತ್ತಿನಲ್ಲಿ ಸ್ಫೋಟವಾಗಲಿದೆ ಎಂದು ಬೆದರಿಕೆ ಹಾಕಿದ್ದಾನೆ. ಕರೆ ಬಂದಿದ್ದೇ ತಡ ಸ್ಥಳೀಯ ಪೊಲೀಸರಿಗೆ ಕಂಪನಿಯಿಂದ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ಕಂಪನಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸ ಬಿಟ್ಟ ಉದ್ಯೋಗಿಯ ಮೇಲೆ ಅನುಮಾನ
ಈ ಹಿಂದೆ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯ ಮೇಲೆ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಕೆಲಸದಿಂದ ತೆಗೆದುಹಾಕಿದ್ದರು. ಆತನೇ ಬಾಂಬ್ ಬೆದರಿಕೆ ಕರೆ ಹಾಕಿರುವ ಶಂಕೆ ವ್ಯಕ್ತವಾಗಿದೆ. ಫೋನ್ ಕರೆ ಸ್ವೀಕರಿಸಿದ ಉದ್ಯೋಗಿಯೂ ಹಳೇ ಉದ್ಯೋಗಿಯ ಹೆಸರು ಹೇಳಿದ್ದಾರೆ. ಹೀಗಾಗಿ ಪೊಲೀಸರು ಹಳೇ ಉದ್ಯೋಗಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತನಿಂದ ಇತ್ತೀಚೆಗೆ ಬೆದರಿಕೆ ಕರೆ ಮಾಡಲಾಗಿತ್ತು. ಬೆದರಿಕೆ ಕರೆಯಿಂದ ಏರ್ಪೋರ್ಟ್ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುಂಜಾನೆ 03:30 ರ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ ಎನ್ನಲಾಗಿತ್ತು.
ಇದನ್ನೂ ಓದಿ: Shakti yojana: 2ನೇ ದಿನ ಸರ್ಕಾರಿ ಬಸ್ಗಳಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಎಷ್ಟು? ಇಲ್ಲಿದೆ ಅಂಕಿ ಅಂಶ
ಈ ಹಿನ್ನೆಲೆಯಲ್ಲಿ ಪೊಲೀಸ್, ಸಿಐಎಸ್ಎಪ್ ಭದ್ರತಾ ಪಡೆಯಿಂದ ಕೆಲ ಕಾಲ ಏರ್ ಲೈನ್ಸ್ ಗೇಟ್ಗಳು ಸೇರಿದಂತೆ ಏರ್ಪೋಟ್ ಟರ್ಮಿನಲ್ನಲ್ಲಿ ತೀವ್ರ ತಪಾಸಣೆ ಮಾಡಿದ್ದರು. 2 ಗಂಟೆಗೂ ಅಧಿಕ ಕಾಲ ತಪಾಸಣೆ ನಡೆಸಿ ಹುಸಿ ಬಾಂಬ್ ಕರೆ ಅಂತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದರು. ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದವನಿಗಾಗಿ ಪೊಲೀಸರಿಂದ ಶೋಧ ನಡೆಸಿದ್ದರು.
ಇದನ್ನೂ ಓದಿ: KSRTC ಬಸ್ ಸೌಲಭ್ಯದಿಂದ ವಂಚಿತವಾಗಿವೆ ದಕ್ಷಿಣ ಕರ್ನಾಟಕದ ಸಾವಿರಾರು ಗ್ರಾಮಗಳು
ನಕಲಿ ದಾಖಲೆ ಸೃಷ್ಟಿಸಿ ಸೈಟ್ ಮಾರಾಟ ಮಾಡಿದ್ದವರ ಬಂಧನ
ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಸೈಟ್ ಮಾರಾಟ ಮಾಡಿದ್ದ ಐವರನ್ನ ನಗರದ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಫೈಜ್ ಸುಲ್ತಾನ್, ಕಬೀರ್, ಜಗದೀಶ್, ಜಯಮ್ಮ ಹಾಗೂ ವೈಶಾಲಿ ಬಂಧಿತರು. 102 ಗ್ರಾಂ ಚಿನ್ನಾಭರಣ, 2.97 ಲಕ್ಷ ನಗದು, 1 ಕಾರು ಜಪ್ತಿ ಮಾಡಲಾಗಿದ್ದು, ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 1988 ರಲ್ಲಿ ಸುವರ್ಣಮ್ಮ ಎಂಬುವರ ಸೈಟ್ ಮಾರಿದ್ದರು. ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ 65 ಲಕ್ಷಕ್ಕೆ ಮಾರಾಟ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:28 pm, Tue, 13 June 23