AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಸಿಂಜೆಂಟಾ ವಿರುದ್ಧ ರೈತರ ವಿನೂತನ ಪ್ರತಿಭಟನೆ, ಸೂರ್ಯಕಾಂತಿ ಎಸ್​ಬಿ-293 ಹೈಬ್ರಿಡ್ ಬೀಜ ಮಾರಾಟಕ್ಕೆ ತಡೆ

Gadag News: ಕಳಪೆ ಬೀಜ ವಿತರಿಸಿದ ಸಿಜೆಂಟಾ ಕಂಪನಿ ವಿರುದ್ಧ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದ ರೈತರು ಪರಿಹಾರಕ್ಕಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ಜಂಟಿ ಕೃಷಿ ನಿರ್ದೇಶಕರು, ಕಂಪನಿಯ ಸೂರ್ಯಕಾಂತಿ ಎಸ್​ಬಿ-293 ಬೀಜಗಳ (Sunflower SB 293 Seeds) ಮಾರಾಟಕ್ಕೆ ತಡೆಯಾಜ್ಞೆ ನೀಡಿದ್ದಾರೆ.

ಗದಗ: ಸಿಂಜೆಂಟಾ ವಿರುದ್ಧ ರೈತರ ವಿನೂತನ ಪ್ರತಿಭಟನೆ, ಸೂರ್ಯಕಾಂತಿ ಎಸ್​ಬಿ-293 ಹೈಬ್ರಿಡ್ ಬೀಜ ಮಾರಾಟಕ್ಕೆ ತಡೆ
ಕಳಪೆ ಸೂರ್ಯಕಾಂತಿ ಎಸ್​ಬಿ-293 ಹೈಬ್ರಿಡ್ ಬೀಜ ನೀಡಿದ ಸಿಂಜೆಂಟಾ ಕಂಪನಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಗದಗದಲ್ಲಿ ರೈತರಿಂದ ಪ್ರತಿಭಟನೆ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi|

Updated on:Jul 17, 2023 | 7:53 PM

Share

ಗದಗ, ಜುಲೈ 17: ಕಳಪೆ ಬೀಜ ವಿತರಿಸಿ ಮೋಸ ಮಾಡಿದ ಸಿಜೆಂಟಾ ಕಂಪನಿ (Syngenta) ವಿರುದ್ಧ ರೈತರಿಂದ ಆಕ್ರೋಶ ಹೊರಬೀಳುತ್ತಿದ್ದಂತೆ ಎಚ್ಚೆತ್ತ ಗದಗದ ಜಂಟಿ ಕೃಷಿ ನಿರ್ದೇಶಕರು, ಕಂಪನಿಯ ಸೂರ್ಯಕಾಂತಿ ಎಸ್​ಬಿ-293 ಬೀಜಗಳ (Sunflower SB 293 Seeds) ಮಾರಾಟಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಕಳಪೆ ಬೀಜ ವಿತರಿಸಿದ ಸಿಜೆಂಟಾ ಕಂಪನಿ ವಿರುದ್ಧ ಗದಗ (Gadag) ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದ ರೈತರು ಪರಿಹಾರಕ್ಕಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿದ್ದಾರೆ.

ರೈತರು ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎತ್ತುಗಳನ್ನ ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕಳಪೆ ಬೀಜಗಳಿಂದಾಗಿ ತಾಲೂಕಿನೆಲ್ಲೆಡೆ ರೈತರು ಬೆಳೆದಿದ್ದ ಸೂರ್ಯಕಾಂತಿ ಬೆಳೆ‌ ಹಾಳಾಗಿವೆ. ನಷ್ಟವಾಗಿರುವ ಸೂರ್ಯಕಾಂತಿ ಬೆಳೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ವರದಿ ಆಧರಿಸಿ ಎಸ್​ಬಿ 293 ಸೂರ್ಯಕಾಂತಿ ಹೈಬ್ರೀಡ್ ಬೀಜ ಮಾರಟಕ್ಕೆ ತಡೆ

ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಪೇಠಾಲೂರ, ಬರದೂರ ಹಾಗೂ ಇತರೆ ಗ್ರಾಮದಲ್ಲಿ ಎಸ್​ಬಿ 293 ಸೂರ್ಯಕಾಂತಿ ಹೈಬ್ರಿಡ್ ತಳಿ ಬೆಳೆದ ರೈತರ ಸಮಸ್ಯಾತ್ಮಕ ಕ್ಷೇತ್ರಗಳಿಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಜೂನ್ 26 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಜುಲೈ 14 ರಂದು ವೈಜ್ಞಾನಿಕ ವರದಿಯನ್ನು ಸಲ್ಲಿಸಿದೆ.

ಇದನ್ನೂ ಓದಿ: ಗದಗ: ಸಾರಿಗೆ ಬಸ್​ ಕಿಟಕಿ ಮೇಲೆ ಕುಳಿತು ಅಪಾಯಕಾರಿ ಪ್ರಯಾಣ ಮಾಡಿದ ಮಹಿಳೆ

ಸಿಂಜೆಂಟಾ ಸಂಸ್ಥೆಯ ಎಸ್​ಬಿ 293 ಸೂರ್ಯಕಾಂತಿ ಹೈಬ್ರಿಡ್ ಬೀಜಗಳು ಶೇ.30 ರಿಂದ ಶೇ.50 ರಷ್ಟು ಜೊಳ್ಳು ಹಾಗೂ ಗೊಡ್ಡುರೋಗ (Phyllody) ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಕುರಿತು ಚರ್ಚಿಸಲು ಜುಲೈ 15 ರಂದು ಜಂಟಿ ಕೃಷಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮುಂಡರಗಿ ರೈತ ಮುಖಂಡರು ಹಾಗೂ ಸಿಂಜೆಂಟಾ ಸಂಸ್ಥೆಯ ಪ್ರಾಂತೀಯ ವ್ಯವಸ್ಥಾಪಕರನ್ನೊಳಗೊಂಡು ಸಭೆಯನ್ನು ನಡೆಸಲಾಗಿದೆ.

ಸಿಂಜೆಂಟಾ ಸಂಸ್ಥೆಯ ಎಸ್​ಬಿ 293 ಸೂರ್ಯಕಾಂತಿ ಸಮಸ್ಯಾತ್ಮಕ ಬೆಳೆಯ ವರದಿಯಾಗಿರುವ ಕಾರಣ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಪೇಠಾಲೂರ, ಬರದೂರ ಹಾಗೂ ಇತರೆ ಗ್ರಾಮದ ರೈತ ಮುಖಂಡರು ಸಿಂಜೆಂಟಾ ಸಂಸ್ಥೆಯ ಸೂರ್ಯಕಾಂತಿ ಬೀಜಗಳನ್ನು ಮಾರಾಟ ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ.

ಮನವಿ ಮೇರೆಗೆ ಸಿಂಜೆಂಟಾ ಸಂಸ್ಥೆಯ ಎಸ್​ಬಿ 293 ಸೂರ್ಯಕಾಂತಿ ಹೈಬ್ರಿಡ್ ಬೀಜಗಳನ್ನು ಮುಂದಿನ ಆದೇಶದವರೆಗೆ ಬೀಜ ಅಧಿನಿಯಮ 1966 (7)ರ ಪ್ರಕಾರ ಮಾರಾಟ ಮಾಡದಂತೆ ತಡೆಯಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಗದಗದ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Mon, 17 July 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ