ಓಡಿ ಹೋಗಿದ್ದ ಪ್ರೇಮಿಗಳನ್ನ ಕರೆತರುತ್ತಿದ್ದ ಪೊಲೀಸ್ ಜೀಪ್​ಗೆ ಅಡ್ಡಗಟ್ಟಿ ಹುಡುಗಿಯನ್ನು ಕರೆದೊಯ್ದ ಪೋಷಕರು

|

Updated on: Jun 11, 2023 | 10:56 AM

ಪ್ರೀತಿ ಎಂದರೆ ಎರಡು ಜೀವಗಳ ನಡುವಿನ ನಂಬಿಕೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರ ಜೀವನದಲ್ಲೂ ಇದು ಮಹತ್ವದ ಘಟ್ಟ. ಅದರಂತೆ ಇಲ್ಲೊಂದು ಪ್ರೇಮಿಗಳು ಪ್ರೀತಿಸಿ ಮನೆ ಬಿಟ್ಟು ಹೋಗಿದ್ದರು, ಇವರನ್ನ ಹುಡುಕಿ ಪೊಲೀಸರು ಕರೆದುಕೊಂಡು ಬರುವಾಗ ಅಡ್ಡಗಟ್ಟಿದ ಹುಡುಗಿ ಪೋಷಕರು, ಆಕೆಯನ್ನ ಕರೆದುಕೊಂಡು ಹೋಗಿ, ಪುನಃ ತಂದು ಬಿಟ್ಟಿದ್ದಾರೆ. ಏನಿದು ಅಂತೀರಾ? ಇಲ್ಲಿದೆ ನೋಡಿ.

ಓಡಿ ಹೋಗಿದ್ದ ಪ್ರೇಮಿಗಳನ್ನ ಕರೆತರುತ್ತಿದ್ದ ಪೊಲೀಸ್ ಜೀಪ್​ಗೆ ಅಡ್ಡಗಟ್ಟಿ ಹುಡುಗಿಯನ್ನು ಕರೆದೊಯ್ದ ಪೋಷಕರು
ಪ್ರೀತಿಸಿದ ಯುವಕ
Follow us on

ಕೋಲಾರ: ಪ್ರೀತಿ(Love) ಎಂದರೆ ಎರಡು ಜೀವಗಳ ನಡುವಿನ ನಂಬಿಕೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರ ಜೀವನದಲ್ಲೂ ಇದು ಮಹತ್ವದ ಘಟ್ಟ. ತಾವು ಪ್ರೀತಿಸಿದವರನ್ನ ಕೊನೆಯವರೆಗೆ ಕಾಪಾಡಿಕೊಂಡು ಮದುವೆಯಾಗಿ ಜೊತೆಯಲ್ಲಿ ಬದುಕಬೇಕೆಂಬ ಅದೆಷ್ಟೋ ಪ್ರೀತಿಗಳು ಮರೆಯಾಗಿ ಹೋಗಿವೆ. ಬೆರಳಣಿಕೆಯಷ್ಟು ಪ್ರೀತಿಗಳು ಮದುವೆ(Marriage)ಯಾಗಿ ಸುಂದರ ಜೀವನ ನಡೆಸುತ್ತಿದ್ದಾರೆ. ಅದರಂತೆ ಇಲ್ಲೊಂದು ಪ್ರೇಮಿಗಳಾದ ಜಿಲ್ಲೆಯ ಮುಡುವಾರಪಲ್ಲಿ ಪೋಜಿತ ಹಾಗೂ ಗುಡಿಸವಾರಪಲ್ಲಿ ನರೇಶ್ ಇಬ್ಬರು ಪ್ರೀತಿಸಿ ಮನೆ ಬಿಟ್ಟು ಹೋಗಿದ್ದರು.

ಬಳಿಕ ಹುಡುಗಿಯ ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಪ್ರೇಮಿಗಳನ್ನು ಹುಡುಕಿ ಖಾಸಗಿ ಕಾರೊಂದರಲ್ಲಿ ಕರೆ ತರುವ ವೇಳೆ, ಪೋಷಕರು ಅಡ್ಡಗಟ್ಟಿ ಕಾರು ಗ್ಲಾಸ್ ಒಡೆದು ಹುಡುಗಿಯನ್ನು ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಯುವಕನ ಮೇಲೆ ಕೂಡ ಹಲ್ಲೆ ಮಾಡಿದ್ದರು. ಬಳಿಕ ಮತ್ತೆ ಪೊಲೀಸ್ ಠಾಣೆಗೆ ಕರೆತಂದು ಹುಡುಗಿಯನ್ನು ಬಿಟ್ಟು ಹೋಗಿದ್ದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ದಾಖಲಿಸಿಕೊಂಡಿರುವ ರಾಯಲ್ಪಾಡು ಪೊಲೀಸರಿಂದ ಐದು ಜನರನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:Viral Story: ಪ್ರೀತಿಗಾಗಿ 60ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿದ ಮೊದಲ ಭಾರತೀಯ ವ್ಯಕ್ತಿ

9 ವರ್ಷದ ಆ ಪ್ರೀತಿ ಇಂದು ಯಶಸ್ವಿಯಾಗಿದ್ದು, ಇಬ್ಬರು ಸತಿ ಪತಿಗಳಾಗಿದ್ದಾರೆ

ದಾವಣಗೆರೆ: ಎಲ್ಲ ಪ್ರೀತಿಗಳು ದುರಂತ ಅಂತ್ಯ ಕಾಣಬೇಕಿಲ್ಲ, ತಮ್ಮ ಪ್ರೀತಿ ಮೇಲೆ ನಂಬಿಕೆಯಿಟ್ಟ ಕೆಲ ಜೋಡಿಗಳು ಒಂದಾಗುತ್ತವೆ ಎಂಬುದಕ್ಕೆ ಇಲ್ಲೊಂದು ನಿದರ್ಶನ. ಹೌದು ಅವರಿಬ್ಬರದ್ದು ಒಂದು ರೀತಿಯಲ್ಲಿ ನಿರ್ಮಲ ಪ್ರೀತಿ. ಓದುವಾಗಲೇ ಶುರುವಾದ ಪ್ರೀತಿ ಮರವಾಗಿ ಬೆಳೆದಿತ್ತು. ಬದುಕು ಕಟ್ಟಿಕೊಳ್ಳಲು ಬೇಕಾದ ಉದ್ಯೋಗ ಗಿಟ್ಟಿಸಿಕೊಂಡು ಮದ್ವೆ ಆಗೋಣ ಎಂದು ನಿರ್ಧರಿಸಿದ್ದರು. ಆದ್ರೆ, ಇವರ ಪ್ರೀತಿಗೆ ಜಾತಿ ಎಂಬ ಮಹಾ ಗೋಡೆಯೊಂದು ಅಡ್ಡ ಬಂದಿತ್ತು. ಇದೇ ಕಾರಣಕ್ಕೆ ಹುಡುಗಿಯನ್ನ ಪಾಲಕರು ಮನೆಯಲ್ಲಿ ಕೂಡಿ ಹಾಕಿದ್ದರು. ಆದ್ರೆ, ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಆ ಹುಡುಗಿ ದಿಟ್ಟತನ ಮಾಡಿ ತಪ್ಪಿಸಿಕೊಂಡು ಬಂದಿದ್ದಳು.‘

ಅದೇ ಪ್ರೀತಿಯಲ್ಲಿ ಹುಡುಗ ಕೂಡ ಸಂತೋಷಗೊಂಡಿದ್ದ. ಆದ್ರೆ, ಹುಡುಗಿ ಕಡೆಯವರು ಪ್ರಭಾವಿಗಳು. ಇವರ ಜೀವಕ್ಕೆ ತೊಂದರೆ ಮಾಡಬಹುದು ಎಂಬ ಆತಂಕ ಜೀವಂತವಿತ್ತು. ಆದರೀಗ ಹಸಿರು ಶಾಲು ಹಾಕುವ ರೈತರು ಈ ಅಪರೂಪದ ಜೋಡಿಯ ಲವ್ವಿಗೆ ಹಸಿರು ನಿಶಾನೆ ತೋರಿದ್ದಾರೆ. ಯಾರೇ ಬಂದರೂ ನಾವಿದ್ದೇವೆ ಎಂಬ ಧೈರ್ಯದ ಮಂತ್ರ ಹೇಳಿ, ಸಪ್ತಪದಿ ತುಳಿಸಿದ್ದಾರೆ. ಅಂದ ಹಾಗೆ ನಾವು ಕೇಳುತ್ತಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣವಿ ಬಿಳಚಿ ನಿವಾಸಿ ಛಾಯಾ ಹಾಗೂ ದಾವಣಗೆರೆ ತಿರನಹಳ್ಳಿ ಗ್ರಾಮದ ಮಾರುತಿ ಲವ್ ಸ್ಟೋರಿ ಬಗ್ಗೆ.

ಇದನ್ನೂ ಓದಿ:ಪ್ರೀತಿಯ ಬಲೆಗೆ ಬಿದ್ದು ಪ್ರಿಯಕರನೊಂದಿಗೆ ಸೇರಿ ಜಾನಪದ ಕಲಾವಿದನಾಗಿದ್ದ ಗಂಡನನ್ನೇ ಕೊಂದ ಪತ್ನಿ

ಇದೀಗ ಇಬ್ಬರೂ ಬಿಕಾಂ ಪದವಿ ಪಡೆದಿದ್ದಾರೆ. ಓದುವಾಗಲೇ ಒಂಬತ್ತು ವರ್ಷದಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಆದ್ರೆ, ಇವರು ಮೂರು ದಿನ ಮರ ಸುತ್ತಿ, ಎರಡು ದಿನ ಸಿನಿಮಾ ನೋಡಿ ಮತ್ತೆ ನಾನ್ಯಾರೋ, ನೀ ಯಾರೋ ಎನ್ನುವಂತಹ ಪ್ರೀತಿಗೆ ಜೋತು ಬೀಳಲಿಲ್ಲ. ಇಬ್ಬರದ್ದೂ ಪದವಿ ವ್ಯಾಸಂಗ ಮುಗಿದ ತಕ್ಷಣವೇ ಮಾರುತಿ ಖಾಸಗಿ ಕಂಪನಿಯ ಲೋನ್ ವಿಭಾಗದಲ್ಲಿ ಕೆಲ್ಸಕ್ಕೆ ಸೇರಿದ್ದ. ಛಾಯಾ ಸಹ ಮಹೇಂದ್ರಾ ಕಂಪನಿಯಲ್ಲಿ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳಕ್ಕೆ ನೌಕರಿಗೆ ಸೇರಿಕೊಂಡಿದ್ದಳು. ಮದುವೆ ವಿಚಾರ ಬಂದ ಕೂಡಲೇ ಜಾತಿ ಎಂಬ ಸಾಮಾಜಿಕ ತೊಡಗು ಎದುರಾಗಿತ್ತು. ಇದೀಗ ಅದನ್ನ ಭೇಧಿಸಿ ಇಬ್ಬರು ಹೊಸ ಬಾಳಿಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ