AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppala News: ಮದುವೆಯಾದರೂ ಬಿಡದ ಪ್ರೀತಿ; ಅಕ್ರಮ ಸಂಬಂಧ ಬಿಟ್ಟು ಬದುಕದ ಇಬ್ಬರು ಆತ್ಮಹತ್ಯೆ

ಅವರಿಬ್ಬರಿಗೂ ಮದುವೆಯಾಗಿತ್ತು, ಸಾಲದಕ್ಕೆ ಸುಂದರ ಸಂಸಾರದ ಕುರುಹುಗಳಾಗಿ ಮಕ್ಕಳು ಇದ್ರು. ಆದ್ರೆ, ಇದೀಗ ಅನೈತಿಕ ಸಬಂಧಕ್ಕೆ ತಮ್ಮ ಜೀವವನ್ನೆ ಬಲಿಕೊಟ್ಡಿದ್ದಲ್ಲದೇ, ಎರಡೂ ಕುಟುಂವನ್ನು ಅನಾಥ ಮಾಡಿದ್ದಾರೆ. ಅಷ್ಟಕ್ಕೂ ಏನಾಯಿತು ಅಲ್ಲಿ, ಅವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ಇಲ್ಲಿದೆ ನೋಡಿ.

Koppala News: ಮದುವೆಯಾದರೂ ಬಿಡದ ಪ್ರೀತಿ; ಅಕ್ರಮ ಸಂಬಂಧ ಬಿಟ್ಟು ಬದುಕದ ಇಬ್ಬರು ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ರ್ದುದೈವಿಗಳು
ಕಿರಣ್ ಹನುಮಂತ್​ ಮಾದಾರ್
|

Updated on: Jun 01, 2023 | 7:40 AM

Share

ಕೊಪ್ಪಳ: ಆಸ್ಪತ್ರೆಯ ಶವಾಗಾರದ ಎದುರು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ, ಮತ್ತೊಂದೆಡೆ ಗ್ರಾಮದೆಲ್ಲೆಡೆ ತುಂಬಿರೋ ನೀರವ ಮೌನ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳ(Koppala)ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ. ಹೌದು ಹೀಗೆ ಹೊಲದಲ್ಲಿ ಶವವಾಗಿ ಬಿದ್ದಿರುವುದು ಇದೆ ಗ್ರಾಮದ ಶಾರವ್ವ ಹಾಗೂ ಫೀರ್​ಸಾಬ್. ಈ ಪೀರ್​ಸಾಭ್ ಹಾಗೂ ಶಾರವ್ವ ಇಬ್ಬರ ಶವಗಳು ನಿನ್ನೆ(ಮೇ.31) ಬೆಳಿಗ್ಗೆ ಗ್ರಾಮದ ಜಮೀನಿನಲ್ಲಿ ವಿಷದ ಬಾಟಲಿಯೊಂದಿಗೆ ಪತ್ತೆಯಾಗಿವೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಇಬ್ಬರು ಮಧ್ಯೆ ಅನೈತಿಕ(Affair)ಸಂಬಂಧ ಇತ್ತಂತೆ. ಇಬ್ಬರ ಅನೈತಿಕ ಸಂಬಂಧ ಇವರ ಮನೆಯಲ್ಲಿ ಗೊತ್ತಾಗಿ ಹಲವು ಬಾರಿ ಗಲಾಟೆಯಾಗಿತ್ತು. ಅಲ್ಲದೆ ಗ್ರಾಮದಲ್ಲಿ ಹಿರಿಯರು ಇಬ್ಬರಿಗೂ ಬುದ್ದಿವಾದ ಕೂಡ ಹೇಳಲಾಗಿತ್ತು, ಇಷ್ಟಾದ್ರು ಅವರು ಮಾತ್ರ ಅವರ ಸಂಬಂಧ ಮುಂದುವರೆಸಿದ್ದರು. ನಿನ್ನೆ(ಮೇ.30) ಸಂಜೆ ಪೀರ್​ಸಾಬ್ ಪತ್ನಿ ತನ್ನ ಗಂಡನ ಜೊತೆಗಿನ ಸಂಬಂಧ ಬಿಡುವಂತೆ ಶಾರವ್ವಳಿಗೆ ಎಚ್ಚರಿಕೆ ನೀಡಿದ್ದಳು. ನಂತರ ಶಾರವ್ವ ಹಾಗೂ ಫೀರ್​ಸಾಬ್ ಮನೆಯಲ್ಲಿ ಗಲಾಟೆ ನಡೆದಿದೆ. ಗಲಾಟೆಯ ನಂತರ ಮನೆಯಿಂದ ಹೊರ ಹೋದ ಇಬ್ಬರು, ಗ್ರಾಮದ ಜಮೀನಿನಲ್ಲಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಿಗ್ಗೆ ಗ್ರಾಮಸ್ಥರು ಜಮೀನಿನ ಕಡೆಗೆ ಹೋದಾಗ ವಿಷಯ ಗೊತ್ತಾಗಿದೆ.‌ ಈ ಶಾರವ್ವ ಹಾಗೂ ಫೀರ್​ಸಾಬ್ ಒಂದೆ ಗ್ರಾಮದವರು, ಇಬ್ಬರು ಮದುವೆಯಾಗಿ ಇಬ್ಬರಿಗೂ ಇಬ್ಬರು ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಇಬ್ಬರದ್ದು ಸುಂದರ ಸಂಸಾರ, ಆದ್ರೂ, ಕೂಡ ಇದೆಲ್ಲವನ್ನೂ ಬಿಟ್ಟು ಕೇವಲ ಪರ ಪುರುಷನ ಆಸೆಗೆ ಬಿದ್ದ ಹೆಣ್ಣು, ಹಾಗೂ ಇನ್ನೊಬ್ಬನ ಹೆಂಡತಿಯ ಮೇಲಿನ ಆಸೆಗೆ ಬಿದ್ದ ಫೀರ್​ಸಾಬ್​ ಇಬ್ಬರು ಜೊತೆಯಾಗಿಯೇ ವಿಷ ಕುಡಿದು ಜೀವ ಬಿಟ್ಟಿದ್ದಾರೆ. ಶವಗಳ ಜೊತೆಯಲ್ಲಿ ವಿಷದ ಬಾಟಲ್ ಕೂಡಾ ಪತ್ತೆಯಾಗಿದ್ದು, ಅಕ್ರಮ ಸಂಬಂಧ ಬಿಟ್ಟು ಬದುಕದ ಇಬ್ಬರು ಶವವಾಗಿದ್ದಾರೆ‌. ಸ್ಥಳಕ್ಕೆ ಹನುಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕಲಬುರಗಿ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವಕ, ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆ; ಕೊಲೆ ಎಂದು ಆರೋಪಿಸಿದ ತಾಯಿ

ಸಧ್ಯ ಗ್ರಾಮದಲ್ಲಿ ಎಲ್ಲವೂ ಮೌನ ಮನೆ ಮಾಡಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದ್ರು ಏನಾಗುತ್ತೆ ಎನ್ನೋ ಭಯ. ಯಾಕಂದ್ರೆ ಹಿಂದೂ- ಮುಸ್ಲಿಂ ಸಂಬಂಧ ಎನ್ನೋ ಆತಂಕ ಕಾಡುತ್ತಿದೆ. ಪೊಲೀಸರು ಬಿಗಿ ಭದ್ರತೆಯ ಮಧ್ಯೆ‌ ಸದ್ಯ ಇಬ್ಬರ ಶವಗಳನ್ನ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಶವಗಳ ಹಸ್ತಾಂತರ ಮಾಡಿದ್ದಾರೆ. ಆದ್ರೆ, ಅಕ್ರಮ ಸಂಬಂಧದ ಆಸೆಗೆ ಬಿದ್ದು ಇಬ್ಬರು ಹೆಣವಾಗಿರೋದಂತೂ ದುರಂತವೇ ಸರಿ.

ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ