ದಿನದಿಂದ ದಿನಕ್ಕೆ ಕುಸಿಯುತ್ತಿರುವ ಟೊಮೆಟೊ ಬೆಲೆ, ಕೋಲಾರ ಎಪಿಎಂಸಿಯಲ್ಲಿ ಇಂದಿನ ದರ ಎಷ್ಟು ಗೊತ್ತಾ?

| Updated By: ಆಯೇಷಾ ಬಾನು

Updated on: Sep 03, 2023 | 11:29 AM

ಕಳೆದ ಎರಡು-ಮೂರು ತಿಂಗಳ ಹಿಂದೆ ಪ್ರತಿ ಕೆಜಿಗೆ 200-300 ರೂ.ವರೆಗೆ ಏರಿಕೆ ಕಂಡಿದ್ದ ಟೊಮೆಟೊ ದರ ಈಗ ಏಕಾಏಕಿ ಕುಸಿತ ಕಾಣುತ್ತಿದೆ. ಇದರಿಂದಾಗಿ ಗೃಹಣಿಯರು ಫುಲ್ ಖುಷಿ ಆಗಿದ್ದು ರೈತರಿಗೆ ನಿರಾಸೆಯಾಗಿದೆ. ಟೊಮೆಟೊ ಬೆಳೆದಿರುವ ರೈತರು ಆತಂಕಕ್ಕೊಳಗಾಗಿದ್ದಾರೆ. ಟೊಮೆಟೊ ಬೆಳೆಯಿಂದ ಕೋಟಿ ಕೋಟಿ ಲಾಭ ಮಾಡಿದ್ದ ರೈತರು ಈಗ 15-20 ರೂಗೆ ಟೊಮೆಟೊವನ್ನು ಮಾರಾಟ ಮಾಡುತ್ತಿದ್ದಾರೆ.

ದಿನದಿಂದ ದಿನಕ್ಕೆ ಕುಸಿಯುತ್ತಿರುವ ಟೊಮೆಟೊ ಬೆಲೆ, ಕೋಲಾರ ಎಪಿಎಂಸಿಯಲ್ಲಿ ಇಂದಿನ ದರ ಎಷ್ಟು ಗೊತ್ತಾ?
ಟೊಮೆಟೊ
Follow us on

ಕೋಲಾರ, ಸೆ.03: ಕೆಜಿಗೆ 200ಕ್ಕಿಂತ ಹೆಚ್ಚು ಬೆಲೆ ಏರಿಕೆ ಕಂಡಿದ್ದ ಟೊಮೆಟೊ ದರ(Tomato Rate) ಏಕಾಏಕಿ ಕುಸಿತ ಕಾಣುತ್ತಿದೆ. ಕೋಲಾರದ APMC ಮಾರುಕಟ್ಟೆಯಲ್ಲಿ(Kolar APMC Market) 3 ತಿಂಗಳ ಹಿಂದೆ ಒಂದು ಕೆಜಿ ಟೊಮೆಟೊ ಬೆಲೆ 160 ರೂಪಾಯಿ ಇತ್ತು. ಕಳೆದ 3 ತಿಂಗಳು ಒಂದು ಬಾಕ್ಸ್ ಟೊಮೆಟೊ 2700 ರೂ.ಗೆ ಹರಾಜಾಗಿತ್ತು. ಈಗ 15 ಕೆಜಿ 1 ಬಾಕ್ಸ್ ಟೊಮೆಟೊ 150-230 ರೂ.ಗೆ ಹರಾಜಾಗುತ್ತಿದೆ. ಕೆಜಿಗೆ ಕೇವಲ 14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹೊರ ರಾಜ್ಯಗಳಿಂದ ಟೊಮೆಟೊ ಬೇಡಿಕೆ ಕುಸಿದ ಹಿನ್ನೆಲೆ ಟೊಮೆಟೊ ದರ ಏಕಾಏಕಿ ಬೆಲೆ ಇಳಿಕೆಯಾಗಿದೆ.

ಕಳೆದ ಎರಡು-ಮೂರು ತಿಂಗಳ ಹಿಂದೆ ಪ್ರತಿ ಕೆಜಿಗೆ 200-300 ರೂ.ವರೆಗೆ ಏರಿಕೆ ಕಂಡಿದ್ದ ಟೊಮೆಟೊ ದರ ಈಗ ಏಕಾಏಕಿ ಕುಸಿತ ಕಾಣುತ್ತಿದೆ. ಇದರಿಂದಾಗಿ ಗೃಹಣಿಯರು ಫುಲ್ ಖುಷಿ ಆಗಿದ್ದು ರೈತರಿಗೆ ನಿರಾಸೆಯಾಗಿದೆ. ಟೊಮೆಟೊ ಬೆಳೆದಿರುವ ರೈತರು ಆತಂಕಕ್ಕೊಳಗಾಗಿದ್ದಾರೆ. ಟೊಮೆಟೊ ಬೆಳೆಯಿಂದ ಕೋಟಿ ಕೋಟಿ ಲಾಭ ಮಾಡಿದ್ದ ರೈತರು ಈಗ 15-20 ರೂಗೆ ಟೊಮೆಟೊವನ್ನು ಮಾರಾಟ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಮಳೆಯಿಂದಾಗಿ ಟೊಮೆಟೊ ಬೆಳೆಯಲಾಗದೆ ಕೋಲಾರದ ಟೊಮೆಟೊಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಆದ್ರೆ ಈಗ ಹವಾಮಾನ ಸರಿಯಾಗಿದ್ದು ಟೊಮೆಟೊ ಬೆಳೆಯಲಾಗುತ್ತಿದೆ. ಹೀಗಾಗಿ ಟೊಮೆಟೊ ಬೇಡಿಕೆ ಕುಸಿದಿದೆ.

ಇದನ್ನೂ ಓದಿ: Tomato Price: ಗಗನಕ್ಕೇರಿದ್ದ ಟೊಮೆಟೊ ದರ ದಿಢೀರ್ ಪಾತಾಳಕ್ಕೆ ಕುಸಿತ, ಈಗ ಎಷ್ಟಿದೆ ಬೆಲೆ?

ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೆಜಿಗೆ 14 ರೂ.ಗೆ ಕುಸಿದಿದೆ. ಈಗ ಬೆಂಗಳೂರಿನಲ್ಲೂ ಕೆಜಿ ಟೊಮೆಟೊ 15-20ರೂಗೆ ಮಾರಾಟವಾಗುತ್ತಿದೆ. ಉತ್ತರದ ರಾಜ್ಯಗಳಲ್ಲಿ ಟೊಮೆಟೊ ಬೇಡಿಕೆ ಕುಸಿದಿದೆ. ಹಾಗೂ  ನೆರೆಯ ನೇಪಾಳದಿಂದಲೂ ಟೊಮೆಟೊಗಳು ಆಮದಾಗುತ್ತಿವೆ. ಉತ್ತರ ಭಾರತದಲ್ಲಿ ಈಗ ಟೊಮೆಟೊ ಯಾರಿಗೂ ಬೇಡವಾಗಿದೆ. ಟೊಮೆಟೊ ಬೇಡಿಕೆಯಷ್ಟು ಲಭ್ಯವಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಗಟು ಬೆಲೆಗಳು ಪ್ರತಿ ಕಿಲೋಗ್ರಾಂಗೆ 5 ರಿಂದ 10 ರೂ.ಗೆ ಕುಸಿಯಬಹುದು ಎಂದು ತಜ್ಞರು ಊಹಿಸಿದ್ದಾರೆ.

ಕೋಲಾರದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ