ಟಿವಿ9 ಸುದ್ದಿಗೆ ಸ್ಪಂದಿಸಿದ ಸಂಸದ ಮುನಿಸ್ವಾಮಿ; ಅಂತರಗಂಗೆಗೆ ತೆರಳಿ ಕೋತಿಗಳಿಗೆ ಹಣ್ಣು, ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ರು

| Updated By: ಆಯೇಷಾ ಬಾನು

Updated on: Mar 09, 2022 | 7:34 PM

ಕೋಲಾರ ಸಂಸದ ಎಸ್.ಮುನಿಸ್ವಾಮಿ ಹಾಗೂ ಮುಖಂಡರು ನಾಮುಂದು ತಾಮುಂದು ಎಂದು ಕೋಲಾರದ ಪ್ರಸಿದ್ದ ಯಾತ್ರಾಸ್ಥಳ ಅಂತರಗಂಗೆಯಲ್ಲಿ ಕೋತಿಗಳಿಗೆ ಕಲ್ಲಂಗಡಿ, ಬಾಳೆಹಳ್ಳು, ಸೌತೇಕಾಯಿ ತರಕಾರಿಗಳನ್ನು ವಿತರಣೆ ಮಾಡಿದ್ದಾರೆ.

ಟಿವಿ9 ಸುದ್ದಿಗೆ ಸ್ಪಂದಿಸಿದ ಸಂಸದ ಮುನಿಸ್ವಾಮಿ; ಅಂತರಗಂಗೆಗೆ ತೆರಳಿ ಕೋತಿಗಳಿಗೆ ಹಣ್ಣು, ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ರು
ಕೋತಿಗಳಿಗೆ ಹಣ್ಣು, ಆಹಾರ ನೀಡುತ್ತಿರುವ ಸಂಸದ ಮುನಿಸ್ವಾಮಿ
Follow us on

ಕೋಲಾರ: ಕಾಶಿ ವಿಶ್ವೇಶ್ವರನ ಸನ್ನಿಧಿಯಲ್ಲಿ ಬತ್ತದ ಗಂಗೆ ಹರಿಯುತ್ತಿದ್ದರೂ ಕೂಡಾ ರಾಮನ ಬಂಟರಿಗೆ ಮಾತ್ರ ಅಲ್ಲಿ ಕುಡಿಯಲು ನೀರಿಲ್ಲ ತಿನ್ನಲು ಅನ್ನವಿಲ್ಲದೆ, ಆಶ್ರಯ ಪಡೆಯಲು ನೆರಳಿಲ್ಲದೆ ಪರದಾಡುತ್ತಿರುವ ದಾರುಣ ಸ್ಥಿತಿಯ ಕುರಿತು ಟಿವಿ9 ವರದಿಯ ಬೆನ್ನಲ್ಲೇ ಕೋತಿಗಳ ಹಸಿವು ನೀಗಿಸಲು ನೆರವಿನ ಮಹಾಪೂರ ಹರಿದು ಬಂದಿದೆ. ಹಸಿವೆಯಿಂದ ಬಳಲಿದ್ದ ಮಂಗಗಳು ನೆಮ್ಮದಿಯಾಗಿ ನಿಟ್ಟುಸಿರು ಬಿಟ್ಟಿವೆ.

ಅಂತರಗಂಗೆ ಬೆಟ್ಟದಲ್ಲಿ ಕೋತಿಗಳ ಹಸಿವು ನೀಗಿಸಿದ ಟಿವಿ9 ವರದಿ
ಕೋಲಾರ ಸಂಸದ ಎಸ್.ಮುನಿಸ್ವಾಮಿ ಹಾಗೂ ಮುಖಂಡರು ನಾಮುಂದು ತಾಮುಂದು ಎಂದು ಕೋಲಾರದ ಪ್ರಸಿದ್ದ ಯಾತ್ರಾಸ್ಥಳ ಅಂತರಗಂಗೆಯಲ್ಲಿ ಕೋತಿಗಳಿಗೆ ಕಲ್ಲಂಗಡಿ, ಬಾಳೆಹಳ್ಳು, ಸೌತೇಕಾಯಿ ತರಕಾರಿಗಳನ್ನು ವಿತರಣೆ ಮಾಡಿದ್ದಾರೆ. ಮಾರ್ಚ್-08 ರಂದು ಟಿವಿ9 ಅಂತರಗಂಗೆಯಲ್ಲಿನ ಕೋತಿಗಳಿಗೆ ಕುಡಿಯಲು ನೀರಿಲ್ಲದೆ ತಿನ್ನಲು ಅನ್ನವಿಲ್ಲದೆ ಪರದಾಡುತ್ತಿರುವ ಸ್ಥಿತಿಯ ಕುರಿತು ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಟಿವಿ9 ವರದಿಗೆ ಸ್ಪಂದಿಸಿರುವ ಕೋಲಾರ ಸಂಸದ ಮುನಿಸ್ವಾಮಿ ಕೂಡಲೇ ಅಂತರಗಂಗೆ ಬೆಟ್ಟಕ್ಕೆ ಭೇಟಿ ನೀಡಿ, ಬೇಸಿಗೆ ಮುಗಿಯುವವರೆಗೂ ನಿತ್ಯ ಇಲ್ಲಿರುವ ನೂರಾರು ಸಂಖ್ಯೆಯಲ್ಲಿನ ಕೋತಿಗಳಿಗೆ ಬಾಳೆ ಹಣ್ಣು, ತರಕಾರಿ, ಕಲ್ಲಂಗಡಿ, ಸೌತೇಕಾಯಿ ಸೇರಿದಂತೆ ವಿವಿಧ ಹಣ್ಣುಗಳು ಹಾಗೂ ಅನ್ನ ಆಹಾರ ನೀರು ಒದಗಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ವೈಯಕ್ತಿಕವಾಗಿ ಹಣವನ್ನು ನೀಡಿ ತಮ್ಮ ಕಾರ್ಯಕರ್ತರಿಗೆ ನಿತ್ಯ ಇಲ್ಲಿರುವ ಕೋತಿಗಳಿಗೆ ಆಹಾರ ನೀಡುವಂತೆ ತಿಳಿಸಿದ್ದಾರೆ.

ಕೋತಿಗಳಿಗೆ ಹಣ್ಣು, ಆಹಾರ ನೀಡುತ್ತಿರುವ ಸಂಸದ ಮುನಿಸ್ವಾಮಿ

ಕೋತಿಗಳ ಆರೋಗ್ಯ ತಪಾಸಣೆಗೂ ಸೂಚನೆ
ಬೇಸಿಗೆ ಆರಂಭವಾಗಿದ್ದು ಬಿರು ಬಿಸಿಲಿನಿಂದ ಬೆಂದು ಹೋಗಿರುವ ಕೆಲವು ಕೋತಿಗಳು ನಿತ್ರಾಣ ಸ್ಥಿತಿ ತಲುಪಿವೆ. ಕೆಲವು ಕೋತಿಗಳಲ್ಲಿ ಮುಖದ ಮೇಲೆ ಹಾಗೂ ಮೈಮೇಲೆ ಕೆಂಪು ಬಣ್ಣದ ಗುಳ್ಳೆಗಳಾಗಿ ಗಾಯಗಳಾಗಿ ರೋಗ ಬಂದಂತೆ ಕಾಣಿಸುತ್ತಿವೆ. ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಕರೆ ಮಾಡಿದ ಸಂಸದರು ಕೋತಿಗಳ ಆರೋಗ್ಯ ತಪಾಸಣೆ ನಡೆಸಿ ಕೋತಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ತಿಳಿಸಿದ್ದಾರೆ.

ಮೂಕ ಪ್ರಾಣಿಗಳಿಗೆ ಸ್ಪಂದಿಸಿದ ಸಂಸದರ ಕಾರ್ಯಕ್ಕೆ ಪ್ರಾಣಿ ಪ್ರಿಯರ ಶ್ಲಾಘನೆ
ಸಂಸದ ಮುನಿಸ್ವಾಮಿ ಕಳೆದ ಹಲವು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಅಂತರಗಂಗೆಯಲ್ಲಿನ ಕೋತಿಗಳಿಗೆ ಅನ್ನ ನೀರು ಹಣ್ಣು ಹಂಪಲುಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಬೇಸಿಗೆ ಆರಂಭದಲ್ಲೇ ಮಿತಿ ಮೀರಿದ ತಾಪಮಾನ ಕೋಲಾರದಲ್ಲಿ ದಾಖಲಾಗಿದೆ. ಈ ಪರಿಣಾಮವಾಗಿ ಬೆಟ್ಟದಲ್ಲಿನ ಮರಗಳು ಒಣಗಿದ್ದು ಕೋತಿಗಳು ಆಶ್ರಯ ಪಡೆಯಲು ನೆರಳು ಇಲ್ಲದಂತಾಗಿದೆ. ಸದ್ಯ ಕೋತಿಗಳ ದಾರುಣ ಪರಿಸ್ಥಿತಿಯ ಕುರಿತು ಟಿವಿ9 ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಂಸದ ಮುನಿಸ್ವಾಮಿ ಸದ್ಯ ಬೇಸಿಗೆ ಕಳೆಯುವವೆರೆಗೆ ಕೋತಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಾಗಾಗಿ ಸಂಸದರ ಈ ಕ್ರಮಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂತರಗಂಗೆ ಬೆಟ್ಟದಲ್ಲಿ ವರ್ಷದ 365 ದಿನಗಳು ಗಂಗೆ ಹರಿದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಇಲ್ಲಿರುವ ಪ್ರಾಣಿ ಪಕ್ಷಿಗಳು ಹಸಿವಿನಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪ್ರಾಣಿಪ್ರಿಯರು ಹಾಗೂ ದಾನಿಗಳ ನೆರವಿನಿಂದ ಇಲ್ಲಿರುವ ಪ್ರಾಣಿಗಳಿಗೆ ಜೀವ ಬಂದಿದೆ ಆದರೂ ಅರಣ್ಯ ಇಲಾಖೆ ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಅನ್ನೋದು ಸ್ಥಳೀಯರ ಆಗ್ರಹ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ

ಕೋತಿಗಳಿಗೆ ಹಣ್ಣು, ಆಹಾರ ನೀಡುತ್ತಿರುವ ಸಂಸದ ಮುನಿಸ್ವಾಮಿ

ಇದನ್ನೂ ಓದಿ:ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ; ನಿಲ್ಲೋಕೆ ನೆರಳಿಲ್ಲ ಕುಡಿಯೋಕೆ ನೀರಿಲ್ಲ, ಅಂತರಗಂಗೆಯಲ್ಲಿ ಕೋತಿಗಳ ಪರದಾಟ

HPCL Recruitment 2022: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ