ಪತಿಯಿಂದಲೇ ಪತ್ನಿಯ ಹತ್ಯೆ, ಜಾನುವಾರು ಕಳ್ಳತನ, ಕೋಲಾರದಲ್ಲಿ ಸೈಲೆನ್ಸರ್​ ಮೇಲೆ ಬುಲ್ಡೋಜರ್ ಓಡಿಸಿದ ಪೊಲೀಸರು

ಕಳೆದ ಒಂದೂವರೆ ತಿಂಗಳಿನಿಂದ 85 ಬೈಕ್​ಗಳನ್ನು ವಶಕ್ಕೆ ಪಡೆದು, ₹ 1.85 ಲಕ್ಷ ದಂಡ ವಿಧಿಸಿದ್ದರು. ಭಾರಿ ಸದ್ದಿನೊಂದಿಗೆ ವ್ಹೀಲಿಂಗ್ ಮಾಡುತ್ತಿದ್ದವರನ್ನು ತಡೆದು ಬೈಕ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು

ಪತಿಯಿಂದಲೇ ಪತ್ನಿಯ ಹತ್ಯೆ, ಜಾನುವಾರು ಕಳ್ಳತನ, ಕೋಲಾರದಲ್ಲಿ ಸೈಲೆನ್ಸರ್​ ಮೇಲೆ ಬುಲ್ಡೋಜರ್ ಓಡಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 09, 2022 | 4:11 PM

ಬೆಂಗಳೂರು: ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಎಚ್‌ಎಎಲ್‌ನ ಕಾಳಪ್ಪ ಲೇಔಟ್‌ನಲ್ಲಿ ನಡೆದಿದೆ. ಮೃತರನ್ನು ನಾಗಮ್ಮ (37) ಎಂದು ಗುರುತಿಸಲಾಗಿದೆ. ಈಕೆಯ ಪತಿ ನೀಲಕಂಠನೇ ಪತ್ನಿಯ ಶೀಲ ಶಂಕಿಸಿ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದ ಎಂದು ಹೇಳಲಾಗಿದೆ. ರಾಯಚೂರು ಮೂಲದ ಈ ದಂಪತಿಯ ಮದುವೆ 17 ವರ್ಷಗಳ ಹಿಂದೆ ಆಗಿತ್ತು. ನೀಲಕಂಠ ಬೆಂಗಳೂರಲ್ಲಿ ಬಂದು ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ನಾಗಮ್ಮ ಮನೆಕೆಲಸ ಮಾಡಿಕೊಂಡಿದ್ದತು. ದಂಪತಿಗೆ ಎಂಟು ಮತ್ತು ಆರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿಯ ಶೀಲ‌ ಶಂಕಿಸಿ ಆರೋಪಿಯು ಆಗಾಗ ಜಗಳ ಮಾಡುತ್ತಿದ್ದ. ಮೊನ್ನೆ ಬೆಳಿಗ್ಗೆ ಕೂಡ ಇಬ್ಬರ ಮಧ್ಯೆ ಗಲಾಟೆಯಾಗಿತ್ತು, ಈ ವೇಳೆ ಡಿವೋರ್ಸ್ ಕೊಟ್ಟು ಹೋಗು ಎಂದು ಪತ್ನಿ ತಾಕೀತು ಮಾಡಿದ್ದರು. ಕೋಪಗೊಂಡ ನೀಲಕಂಠ ಬೆಲ್ಟ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಎಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ ಆರೋಪಿ ನೀಲಕಂಠನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಜಾನುವಾರು ಕಳ್ಳತನ ಬೆಂಗಳೂರು: ನಗರದ ರಾಮಮೂರ್ತಿ ನಗರ ಬಡಾವಣೆಯ ಶೆಡ್‌ನಲ್ಲಿ ಕಟ್ಟಿಹಾಕಿದ್ದ ಮೂರು ಹಸುಗಳನ್ನು ಕಳವು ಮಾಡಲಾಗಿದೆ. ಜಾನುವಾರು ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳ ಬಂಧನಕ್ಕೆ ರಾಮಮೂರ್ತಿನಗರ ಠಾಣೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಮುನಿರಾಜು ಎನ್ನುವವರು ತಮ್ಮ ಮನೆ ಬಳಿಯ ಶೆಡ್​ನಲ್ಲಿ ಹಸುವನ್ನು ಕಟ್ಟಿದ್ದರು. ಟೆಂಪೊದಲ್ಲಿ ಬಂದಿದ್ದ ಕಳ್ಳರು ರಸ್ತೆಯವರೆಗೆ ಹಸುಗಳನ್ನು ನಡೆಸಿಕೊಂಡು ಬಂದು ಕದ್ದೊಯ್ದಿದ್ದಾರೆ. ಎಂಟು ಎಮ್ಮೆ ಹಾಗೂ ನಾಲ್ಕು ಹಸುಗಳನ್ನು ಸಾಕಿ ಈ ಕುಟುಂಬ ಜೀವನ ಸಾಗಿಸುತ್ತಿತ್ತು.

ಕಟ್ಟಡದಿಂದ ಬಿದ್ದ ಕಾರ್ಮಿಕ ಸಾವು ಬೆಂಗಳೂರು: ನಾಗರಬಾವಿಯ ಎನ್​​ಜಿಇಎಫ್ ಲೇಔಟ್​ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಕಾಲುಜಾರಿ ಬಿದ್ದು ತಮಿಳುನಾಡು ಮೂಲದ ಕಾರ್ಮಿಕ ಏಳುಮಲೈ (47) ಮೃತಪಟ್ಟಿದ್ದಾರೆ. ಕಟ್ಟಡ ಮಾಲೀಕ ಮುನಿರಾಜು ಬಾಬು, ಶಿವಶಂಕರ್ ಚೌಧರಿ, ಗುತ್ತಿಗೆದಾರರಾದ ಶಕ್ತಿವೇಲು, ವಾದಿವೇಲು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಮೃತ ವ್ಯಕ್ತಿಯು ತನ್ನ ಸಹೋದ್ಯೋಗಿಗಳ ಜೊತೆ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತಿದ್ದರು. ರಾತ್ರಿ 7 ಗಂಟೆಗೆ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮೆಟ್ಟಿಲ ಬಳಸಿ ಇಳಿಯುತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿ ಆಗಿರಲಿಲ್ಲ. ಘಟನೆ ಸಂಬಂಧ ನಾಲ್ವರ ವಿರುದ್ಧ ಎಫ್​ಐಆರ್ ಮಾಡಲಾಗಿದೆ.

ಕರ್ಕಶ ಧ್ವನಿ ಮಾಡುತ್ತಿದ್ದ ಸೈಲೆನ್ಸರ್ ನಾಶ ಕೋಲಾರ: ಕರ್ಕಶ ಶಬ್ದ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಸೈಲೆನ್ಸರ್‌ಗಳನ್ನು ಪೊಲೀಸರು ನಾಶಪಡಿಸಿದ್ದಾರೆ. ನಗರದ ಸರ್ಕಾರಿ ಬಾಲಕರ ಕಾಲೇಜು ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ನೇತೃತ್ವದಲ್ಲಿ ಸೈಲೆನ್ಸರ್‌ಗಳನ್ನು ನಾಶಪಡಿಸಲಾಯಿತು. ಕಳೆದ ಒಂದೂವರೆ ತಿಂಗಳಿನಿಂದ 85 ಬೈಕ್​ಗಳನ್ನು ವಶಕ್ಕೆ ಪಡೆದು, ₹ 1.85 ಲಕ್ಷ ದಂಡ ವಿಧಿಸಿದ್ದರು. ಭಾರಿ ಸದ್ದಿನೊಂದಿಗೆ ವ್ಹೀಲಿಂಗ್ ಮಾಡುತ್ತಿದ್ದವರನ್ನು ತಡೆದು ಬೈಕ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ನಂತರ ಸೈಲೆನ್ಸರ್​ಗಳನ್ನು ಸಾಲಾಗಿ ಇರಿಸಿ, ಅದರ ಮೇಲೆ ರೋಡ್​ ರೋಲರ್ ಓಡಿಸಲಾಯಿತು. ಕೆಟ್ಟ ಸದ್ದಿನೊಂದಿಗೆ ಬೈಕ್ ಓಡಿಸುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Bengaluru Crime: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬೈಕ​ನ್ನೇ ಕದ್ದ ಕಳ್ಳ, ತಡರಾತ್ರಿ ನಡೆದ ಕೊಲೆ ಪ್ರಕರಣದ 5 ಆರೋಪಿಗಳು ಅರೆಸ್ಟ್

ಇದನ್ನೂ ಓದಿ: crime news: ಸೇತುವೆ ಮೇಲೆ ಕಾರ್ ಮತ್ತು ಬೈಕ್ ನಡುವೆ ಅಪಘಾತ; ನದಿಗೆ ಹಾರಿ ಬಿದ್ದ ಬೈಕ್ ಸವಾರರು

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ