AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

crime news: ಸೇತುವೆ ಮೇಲೆ ಕಾರ್ ಮತ್ತು ಬೈಕ್ ನಡುವೆ ಅಪಘಾತ; ನದಿಗೆ ಹಾರಿ ಬಿದ್ದ ಬೈಕ್ ಸವಾರರು

ಕಾರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ರಭಸಕ್ಕೆ ಯುವಕರು ನದಿಗೆ ಬಿದಿದ್ದಾರೆ. ಈಜುತ್ತಾ ದಡಕ್ಕೆ ಬಂದ ಓರ್ವ ಸುನೀಲ್, ಇನ್ನೋರ್ವ ನಾಪತ್ತೆಯಾಗಿದ್ದು, ನಾಪತ್ತೆಯಾದ ಅಕ್ಷಯಗಾಗಿ ಹುಡಕಾಟ ನಡೆಸಲಾಗುತ್ತಿದೆ.

crime news: ಸೇತುವೆ ಮೇಲೆ ಕಾರ್ ಮತ್ತು ಬೈಕ್ ನಡುವೆ ಅಪಘಾತ; ನದಿಗೆ ಹಾರಿ ಬಿದ್ದ ಬೈಕ್ ಸವಾರರು
ಕಾರ್ ಮತ್ತು ಬೈಕ್ ಮಧ್ಯೆ ಅಪಘಾತ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 08, 2022 | 10:00 AM

Share

ಕಾರವಾರ: ಸೇತುವೆ ಮೇಲೆ ಕಾರ್ ಮತ್ತು ಬೈಕ್ (car and bike accident)   ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರು ನದಿಗೆ ಬಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆಯಲ್ಲಿ ಘಟನೆ ನಡೆದಿದೆ. ಅಕ್ಷಯ್ (26), ಸುನೀಲ್ (27) ನದಿಗೆ ಬಿದ್ದ ಬೈಕ್ ಸವಾರರು. ಕಾರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ರಭಸಕ್ಕೆ ಯುವಕರು ನದಿಗೆ ಬಿದಿದ್ದಾರೆ. ಈಜುತ್ತಾ ದಡಕ್ಕೆ ಬಂದ ಓರ್ವ ಸುನೀಲ್, ಇನ್ನೋರ್ವ ನಾಪತ್ತೆಯಾಗಿದ್ದು, ನಾಪತ್ತೆಯಾದ ಅಕ್ಷಯಗಾಗಿ ಹುಡಕಾಟ ನಡೆಸಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಈಜು ತಜ್ಞರು, ಪೊಲೀಸರ ಬೇಟಿ ನೀಡಿ ಪರಿಶೀಲನೆ ಮಾಡಿದ್ದು, ಹೊನ್ನಾವರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ವಿಷ ಸೇವಿಸಿ ಮಹಿಳೆಯರಿಬ್ಬರು ಆತ್ಮಹತ್ಯೆಗೆ ಯತ್ನ; ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು:

ಗದಗ: ವಿಷ ಸೇವಿಸಿ ಮಹಿಳೆಯರಿಬ್ಬರು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೇಲೂರಿನಲ್ಲಿ ಘಟನೆ ನಡೆದಿದೆ. ವಿಷ ಸೇವಿಸಿದ್ದ ಓರ್ವ ರೈತ ಮಹಿಳೆ ಚಿಕಿತ್ಸೆ ಫಲಿಸದೆ ನಿರ್ಮಲಾ ಪಾಟೀಲ್(34) ಸಾವನ್ನಪ್ಪಿದ್ದಾರೆ. ಮತ್ತೋರ್ವ ರೈತ ಮಹಿಳೆ ಸರೋಜಾ ಸ್ಥಿತಿ ಗಂಭೀರವಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ರೈತ ಮಹಿಳೆ ಸರೋಜಾಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಕೇಲೂರ ಗ್ರಾಮದಲ್ಲಿ ಇನ್ನು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನಿರ್ಮಲಾ ಸಾವಿನ ಸುದ್ದಿ ಕೇಳುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ವಾಹನಗಳು ಬಿಟ್ಟು ಅರಣ್ಯ ಹಾಗೂ ಪೊಲೀಸ್ ಇಲಾಖೆ ಬಚಾವ್ ಆಗಿದ್ದಾರೆ. ಮುಂಡರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

500 ರೂ. ಒಂದು ಕೀ ಪ್ಯಾಡ್ ಫೋನ್​ಗಾಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ:

ಬೆಂಗಳೂರು: 500 ರೂಪಾಯಿ, ಒಂದು ಕೀ ಪ್ಯಾಡ್ ಫೋನ್​ಗಾಗಿ ಕೊಲೆ ನಡೆದಿದೆ. ಕಾಮಾಕ್ಷಿಪಾಳ್ಯ ಬಾರ್ ಮುಂದೆ ಈ ಘಟನೆ ನಡೆದಿದೆ. ಕುಡಿದು ಬೀದಿ ಬದಿ ಮಲಗಿದ್ದವರನ್ನ ಟಾರ್ಗೆಟ್ ಮಾಡ್ತಾಯಿದ್ದ ಆರೋಪಿಗಳು, ಕುಡಿದ ನಶೆಯಲ್ಲಿ ಮಲಗಿದ್ದವರ ಜೇಬಿನಿಂದ ಹಣ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಅದೇ ರೀತಿ ಮೃತ ಸತೀಶ್ ಬಳಿ ಕಳ್ಳತನ ಮಾಡಲು ಯತ್ನಿಸಿದ್ದು, ಈ ವೇಳೆ ಎಚ್ಚರಗೊಂಡಿದ್ದ ಸತೀಶ್ ವಿರೋಧಿಸಿದ್ದಾನೆ. ಈ ಹಿನ್ನಲೆ ಸಿಮೆಂಟ್ ಹಾಲೊ ಬ್ಲಾಕ್​ನ ತಲೆ ಮೇಲೆ ಎತ್ತಿ ಹಾಕಿ ಆರೋಪಿಗಳು ಕೊಲೆಗೈದಿದ್ದಾರೆ. ಸದ್ಯ ಆರೋಪಿಯನ್ನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೂಜು ಅಡ್ಡೆ ಮೇಲೆ ಪೋಲಿಸರ ದಾಳಿ; ನಾಲ್ವರ ಬಂಧನ: ತುಮಕೂರು: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ ಮಾಡಿದ್ದು, ನಾಲ್ವರನ್ನ ಸೆರೆ ಹಿಡಿದಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗುಬ್ಬಿ ಸಿಪಿಐ ನದಾಪ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ನಾಲ್ವರ ಬಂಧನ ಮಾಡಿದ್ದಾರೆ. ಉಳಿದ ನಾಲ್ವರು ಪರಾರಿಯಾಗಿದ್ದು, ಬಂಧಿತರಿಂದ 10.580 ರೂ ಹಾಗೂ 4 ಮೊಬೈಲ್ 5 ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:

ಎಲ್ಲಾ ವಾಹನಗಳನ್ನು ನಿಲ್ಲಿಸಿ ದಂಡ ಪರಿಶೀಲನೆಯ ಕಿರಿ ಕಿರಿ ತಪ್ಪಿಸಲು ಹೊಸ ಪ್ಲಾನ್; ಬಾಡಿ ಕ್ಯಾಮರಾ ಹೇಗೆ ಕೆಲಸ ಮಾಡುತ್ತೆ?

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!