ರಾಷ್ಟ್ರೀಯ ಭದ್ರತೆಗೆ ಸಂಚಕಾರ ಪಿತೂರಿ: ಶಿವಮೊಗ್ಗ ಬಜರಂಗ ದಳ ಕಾರ್ಯಕರ್ತನ ಹತ್ಯೆಯಲ್ಲಿ ಹತ್ತೂ ಆರೋಪಿಗಳ ವಿರುದ್ಧ UAPA ಜಾರಿ
Shivamogga murder : ಗಮನಾರ್ಹವೆಂದರೆ ಈ ಮಧ್ಯೆ, ಶಿವಮೊಗ್ಗ ಹಿಂಸಾಚಾರದ ಹಿನ್ನೆಲೆಯಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ನಿಷೇಧದ ಮಾತು ಕೇಳಿಬಂದಿತ್ತು. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ 2 ವಾರಗಳ ಹಿಂದೆ ಹತ್ಯೆಗೀಡಾದ ಬಜರಂಗ ದಳ (Bajrang Dal) ಕಾರ್ಯಕರ್ತ, 24 ವರ್ಷದ ಹರ್ಷ ಎಂಬ ಯವಕನ ಹತ್ಯೆ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರ ವಶದಲ್ಲಿರುವ ಹತ್ತೂ ಮಂದಿ ಆರೋಪಿಗಳ ವಿರುದ್ಧ ಕಠಿಣವಾದ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆ -ಯುಎಪಿಎ ಅನ್ನು (Unlawful Activities Prevention Act -UAPA) ಜಾರಿಗೊಳಿಸಲಾಗಿದೆ. ಗಮನಾರ್ಹವೆಂದರೆ ಈ ಮಧ್ಯೆ, ಶಿವಮೊಗ್ಗ ಹಿಂಸಾಚಾರದ ಹಿನ್ನೆಲೆಯಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳ ನಿಷೇಧದ ಮಾತು ಕೇಳಿಬಂದಿತ್ತು. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಭದ್ರತೆಯನ್ನು ಗುರಿಯಾಗಿಸಿಕೊಂಡು ಪಿತೂರಿ ನಡೆಸಿದ ಆರೋಪ, ಘಟನೆ ನಡೆದಾಗ ಸಾಮಾನ್ಯವಾಗಿ ಅಂತಹ ಆರೋಪಿಗಳ ವಿರುದ್ಧ ಯುಎಪಿಎ (UAPA) ಅನ್ನು ಜಾರಿಗೊಳಿಸಲಾಗುವುದು. ಹತ್ಯೆಯ ಹಿಂದಿನ ಪರದೆ ವಿಶಾಲವಾಗಿದೆ. ಅದರ ಅಗಲ ವಿಸ್ತಾರವಾಗಿದೆ. ಹಾಗಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೂ (National Investigation Agency -NIA) ವಹಿಸುವ ಸಾಧ್ಯತೆಯಿದೆ ಎಂದು ಟಿವಿ9 ಕನ್ನಡ ಸೋದರ ಸಂಸ್ಥೆ News 9 ವರದಿ ಮಾಡಿದೆ.
ಫೆಬ್ರವರಿ 20 ರ ಭಾನುವಾರ ರಾತ್ರಿ ಹರ್ಷನನ್ನು ಗುಂಪೊಂದು ಇರಿದು ಸಾಯಿಸಿತ್ತು. ಅದಾದ ಮೇಲೆ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ನಗರದಲ್ಲಿ ಕರ್ಫ್ಯೂ ಸಹ ಜಾರಿಗೆಗೊಳಿಸಲಾಗಿತ್ತು. ಇದು ಪೂರ್ವನಿಯೋಜಿತ, ವ್ಯವಸ್ಥಿತ ಹತ್ಯೆ. ಹರ್ಷನ ಚಲನವಲನ ಗಮನಿಸಯೇ ಸಾವಕಾಶವಾಗಿ ಹತ್ಯೆಗೆ ಮುಹೂರ್ತವಿಟ್ಟಿದ್ದರು. ಎಂದು ಶಿವಮೊಗ್ಗದ ಜನತೆ ಮಾತನಾಡಿಕೊಂಡಿದ್ದರು.
ಹತ್ಯೆಗೀಡಾದ ಹರ್ಷ ಸುಮಾರು ಆರು ವರ್ಷಗಳಿಂದ ಬಜರಂಗ ದಳ ಸಕ್ರಿಯ ಕಾರ್ಯಕರ್ತನಾಗಿದ್ದ. ಆತನ ಮೇಲೆ ಹತ್ಯಾ ಪ್ರಯತ್ನಗಳು ನಡೆದಿದ್ದವು. ಆದಾಗ್ಯೂ ಹರ್ಷ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ. 2016ರಲ್ಲಿ ಮುಸ್ಲಿಂ ವಿರೋಧಿ ಭಿತ್ರಪತ್ರಗಳನ್ನು ಅಂಟಿಸಿದ ಆರೋಪ ಎದುರಿಸಿದ್ದ. ಈ ಸಂಬಂಧ ಅವನ ವಿರುದ್ಧ ದೂರು ಸಹ ದಾಖಲಾಗಿತ್ತು. ಪ್ರಮುಖ ಆರೋಪಿ ಖಾಸಿಫ್ ಮತ್ತು ಹರ್ಷ ಮಧ್ಯೆ 2020 ರಲ್ಲಿ ಜೈಲಿನಲ್ಲಿಯೇ ಜಗಳಗಳಾಗಿದ್ದವು.
ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಸ್ಥಳೀಯ ಶಾಸಕ ಕೆ ಎಸ್ ಈಶ್ವರಪ್ಪ ಮತ್ತು ಕೇಂದ್ರ ಸಚಿವೆ ನೆರೆಯ ಜಿಲ್ಲೆಯ ಸಂಸದೆ ಶೋಭಾ ಕರಂದ್ಲಾಜೆ ಅವರುಗಳು ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿ, ಪ್ರಕರಣವನ್ನು NIA ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಹತ್ಯೆಯು ಕೇರಳ ಭಯೋತ್ಪಾದನೆ ಮಾದರಿಯಲ್ಲಿ ನಡೆದಿದೆ ಎಂದು ಬಣ್ಣಿಸಿದ್ದರು. Popular Front of India (PFI), Socialist Democratic Party of India (SDPI) ಮತ್ತು Campus Front of India ಅಂತಹವು ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ ನಡೆಯುವ ಇಂತಹ ಘಟನೆಗಳ ಹಿಂದಿರುವ ಸಂಘಟನೆಗಳಾಗಿವೆ ಎಂದು ಜರಿದಿದ್ದರು.
ಹರ್ಷ ಹತ್ಯೆ ಪ್ರಕರಣವು ಕೊಲೆ ಯತ್ನವಲ್ಲ; ಬದಲಿಗೆ ಅದೊಂದು ಭಯೋತ್ಪಾದಕ ಕೃತ್ಯ. ಹಾಗಾಗಿ ಅದೊಂದು ಹತ್ಯಾ ಪ್ರಕರಣವೆಂದು ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 302 ಅಡಿ ತನಿಖೆ ನಡೆಸಬಾರದು. ಯುಎಪಿಎ (UAPA) ಅನುಸಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು -ಯುಎಪಿಎ (Unlawful Activities Prevention Act -UAPA) 2019ರ ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ಅನುಮೋದಿಸಲಾಗಿದೆ.