ದಂಡ ಪರಿಶೀಲನೆಯ ಕಿರಿ ಕಿರಿ ತಪ್ಪಿಸಲು ಹೊಸ ಪ್ಲಾನ್; ಪೊಲೀಸರಿಗೆ ಅಳವಡಿಸುವ ಬಾಡಿ ಕ್ಯಾಮರಾ ಹೇಗೆ ಕೆಲಸ ಮಾಡುತ್ತೆ?
ಟ್ರಾಫಿಕ್ ಪೊಲೀಸರು ANPR ಕ್ಯಾಮರಾ ಅಳವಡಿಸಿದ್ದಾರೆ. ANPR ಎಂದರೆ ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೈಸೇಶನ್ ಕ್ಯಾಮರಾ. ಈ ಹಿಂದೆ 150 ಬಾಡಿ ಕ್ಯಾಮರಾ ಸಂಚಾರ ವಿಭಾಕ್ಕೆ ನೀಡಲಾಗಿತ್ತು. ಪಾರದರ್ಶಕತೆ ತರಲು ಮುಖ್ಯಮಂತ್ರಿ ಸೂಚನೆ ನೀಡದ್ದರು.
ಬೆಂಗಳೂರು: ಎಲ್ಲಾ ವಾಹನಗಳನ್ನು ನಿಲ್ಲಿಸಿ ದಂಡ ಪರಿಶೀಲನೆಯ ಕಿರಿ ಕಿರಿ ತಪ್ಪಿಸಲು ಬೆಂಗಳೂರು ಸಂಚಾರ ಪೊಲೀಸರು (Traffic Police) ಮತ್ತೊಂದು ಪ್ಲಾನ್ ಮಾಡಿದ್ದಾರೆ. ಸುಗಮ ಸಂಚಾರ ನಿರ್ವಹಣೆಗೆ ಬೆಂಗಳೂರು ಸಂಚಾರ ಪೊಲೀಸರು ತಂತ್ರಜ್ಙಾನ ಬಳಕೆ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ (Ravikanthe Gowda), ಏಪ್ರಿಲ್ ಅಂತ್ಯದೊಳಗೆ 5 ಸಾವಿರ ಬಾಡಿ ಕ್ಯಾಮರಾ ನೀಡಲು ಪ್ಲಾನ್ ಮಾಡಲಾಗಿದೆ ಅಂತ ತಿಳಿಸಿದ್ದಾರೆ.
ಟ್ರಾಫಿಕ್ ಪೊಲೀಸರು ANPR ಕ್ಯಾಮರಾ ಅಳವಡಿಸಿದ್ದಾರೆ. ANPR ಎಂದರೆ ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೈಸೇಶನ್ ಕ್ಯಾಮರಾ. ಈ ಹಿಂದೆ 150 ಬಾಡಿ ಕ್ಯಾಮರಾ ಸಂಚಾರ ವಿಭಾಕ್ಕೆ ನೀಡಲಾಗಿತ್ತು. ಪಾರದರ್ಶಕತೆ ತರಲು ಮುಖ್ಯಮಂತ್ರಿ ಸೂಚನೆ ನೀಡದ್ದರು. ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್, ಎಎಸ್ಐ, ಪಿಎಸ್ಐ, ಇನ್ಸ್ಪೆಕ್ಟರ್ಗಳಿಗೂ ಬಾಡಿ ಕ್ಯಾಮರಾ ನೀಡುವ ಯೋಜನೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ 1,020 ಬಾಡಿ ಕ್ಯಾಮೆರಾ ನೀಡಲಾಗಿದೆ. 250 ಬಾಡಿ ಕ್ಯಾಮರಾಗಳಿಗೆ ಸಿಮ್ ಕಾರ್ಡ್ ನೀಡಲಾಗಿದೆ. ಫೀಲ್ಡ್ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಟಿಎಂಸಿನಲ್ಲಿ ವೀಕ್ಷಿಸಬಹುದಾಗಿದೆ ಅಂತ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಬರುವ ಒಂದು ತಿಂಗಳ ಒಳಗೆ ಮತ್ತೆ 2,500 ಬಾಡಿ ಕ್ಯಾಮರಾ ನೀಡಲಿದ್ದೇವೆ. ನಾಗರಿಕರು ಮಾತಾಡೋದನ್ನ ರೆಕಾರ್ಡ್ ಮಾಡುತ್ತಿರಲಿಲ್ಲ. ನಮ್ಮ ಅಧಿಕಾರಿಗಳು ಮಾತಾಡೋದನ್ನ ರೆಕಾರ್ಡ್ ಮಾಡಿ, ಎಡಿಟ್ ಮಾಡುತ್ತಿದ್ದರು. ಅದನ್ನ ಸಾಮಾಜಿಕ ಜಾಲತಾಣದಲ್ಲಿ ಮುಖಭಂಗ ಮಾಡುವ ಸಂದರ್ಭ ನೋಡಿದ್ದೀವಿ. ಬಾಡಿ ಕ್ಯಾಮರಾದಿಂದ ಅದೂ ಕೂಡ ತಪ್ಪುತ್ತದೆ. ಏಪ್ರಿಲ್ ಒಳಗೆ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಕ್ಯಾಮರಾ ನೀಡಲಾಗುತ್ತದೆ. ಬಾಡಿ ಕ್ಯಾಮರಾ ಬ್ಯಾಟರಿ 8 ಗಂಟೆ ಬರುತ್ತದೆ. ಎಕ್ಸ್ಟ್ರಾ ಬ್ಯಾಟರಿ ಕೂಡ ನೀಡಲಾಗಿದೆ. ರಾತ್ರಿ ಕೂಡ ಇದು ಉತ್ತಮ ಕ್ವಾಲಿಟಿಯ ವಿಡಿಯೋ ರೆಕಾರ್ಡ್ ಮಾಡಲಿದೆ ಅಂತ ರವಿಕಾಂತೇಗೌಡ ತಿಳಿಸಿದ್ದಾರೆ.
ಬಾಡಿ ಕ್ಯಾಮೆರಾ ಬಂದ ಬಳಿಕ ಸಿಬ್ಬಂದಿ ವರ್ತನೆಯಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಮಾತನಾಡಿದ ರವಿಕಾಂತೇಗೌಡ, ನಮ್ಮ ಸಿಬ್ಬಂದಿಗಳಿ ಆತ್ಮ ವಿಶ್ವಾಸ ಜಾಸ್ತಿಯಾಗಿದೆ. ಸಾರ್ವಜನಿಕರು ಕೆಲವು ಸಂದರ್ಭದಲ್ಲಿ ಅನುಚಿತ ವರ್ತನೆ ಮಾಡುತ್ತಿದ್ದರು. ಅದೂ ಕೂಡ ಈಗ ಕಡಿಮೆ ಆಗಿದೆ . ಬಾಡಿ ಕ್ಯಾಮೆರಾ ಒಂದು ಗೇಮ್ ಚೇಂಜರ್ ಎನ್ನಬಹುದು. ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಗುಣಾತ್ಮಕ ಬದಲಾವಣೆ ತಂದಿದೆ ಎಂದರು.
ಇದನ್ನೂ ಓದಿ
2016ರಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ದಿನ ಜಯಲಲಿತಾ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು; ಅಪೋಲೋ ವೈದ್ಯರ ವರದಿ
Women’s Day Special : ತಾಯಿಯಂತಹ ರೂಮ್‌ಮೇಟ್ ದೊರೆತಾಗ…
Published On - 9:38 am, Tue, 8 March 22