Air India: ಬೆಂಗಳೂರಿನ ವಿಕಲಚೇತನ ಪ್ರಯಾಣಿಕನನ್ನು ವಿಮಾನ ಹತ್ತದಂತೆ ತಡೆದ ಏರ್ ಇಂಡಿಯಾ ಪೈಲಟ್

ಬೆಂಗಳೂರಿನ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಪ್ರಾಧ್ಯಾಪಕರಾದ ಕೌಶಿಕ್ ಕುಮಾರ್ ಮಜುಂದಾರ್ ಅವರು 2009ರಿಂದ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅವರು ಇದುವರೆಗೂ ಕನಿಷ್ಠ 25 ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

Air India: ಬೆಂಗಳೂರಿನ ವಿಕಲಚೇತನ ಪ್ರಯಾಣಿಕನನ್ನು ವಿಮಾನ ಹತ್ತದಂತೆ ತಡೆದ ಏರ್ ಇಂಡಿಯಾ ಪೈಲಟ್
ಏರ್ ಇಂಡಿಯಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 07, 2022 | 7:23 PM

ಬೆಂಗಳೂರು: ಬೆಂಗಳೂರಿನಿಂದ ಕೊಲ್ಕತ್ತಾಗೆ ತೆರಳುತ್ತಿದ್ದ ಏರ್ ಇಂಡಿಯಾ (Air India) ವಿಮಾನದ ಪೈಲಟ್ ತನಗೆ ಅವಮಾನ ಮಾಡಿ ವಿಮಾನಕ್ಕೆ ಹತ್ತಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವಿಕಲಚೇತನ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡುತ್ತಿರುವ ಕೌಶಿಕ್ ಕುಮಾರ್ ಮಜುಂದಾರ್ ಬೆಂಗಳೂರಿನಿಂದ ಕೊಲ್ಕತ್ತಾಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಅವರು ಮಧ್ಯರಾತ್ರಿ 2.40ಕ್ಕೆ ಕೋಲ್ಕತ್ತಾಗೆ ಟೇಕ್ ಆಫ್ ಆಗಬೇಕಿದ್ದ AI-748 ಬೆಂಗಳೂರು-ಕೋಲ್ಕತ್ತಾ ವಿಮಾನ ಹತ್ತಲು ತೆರಳಿದಾಗ ಅದರ ಪೈಲಟ್ ಅವರನ್ನು ತಡೆದು, ಅವಮಾನಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮಜುಂದಾರ್, ವಿಮಾನದ ಪೈಲಟ್ ನನ್ನ ಎಲೆಕ್ಟ್ರಿಕ್ ವೀಲ್​ಚೇರ್​ನ ಬ್ಯಾಟರಿಗಳ ಸಂಪರ್ಕ ಕಡಿತಗೊಳಿಸುವಂತೆ ಆದೇಶಿಸಿದರು. ಆದರೆ, ಹಾಗೆ ಮಾಡಿದರೆ ತನಗೆ ಕಷ್ಟವಾಗುತ್ತದೆ, ವಿಮಾನವೇರಲು ಆಗುವುದಿಲ್ಲ ಎಂದು ವಿವರಿಸಲು ಮಜುಂದಾರ್ ಪ್ರಯತ್ನಿಸಿದರೂ ಪೈಲಟ್ ಅದನ್ನು ಕೇಳದೆ ಹಠ ಹಿಡಿದರು. ಬೇರೆ ಪ್ರಯಾಣಿಕರಿಗೆ ವಿಮಾನವೇರಲು ಅನುಮತಿ ನೀಡಿದ ಪೈಲಟ್ ನನ್ನನ್ನು ತಡೆದು, ಅವಮಾನಿಸಿದ್ದಾರೆ ಎಂದು ಮಜುಂದಾರ್ ಆರೋಪ ಮಾಡಿದ್ದಾರೆ.

“ಏರ್ ಇಂಡಿಯಾದ ಪೈಲಟ್ ನನ್ನನ್ನು ವಿಮಾನ ಹತ್ತದಂತೆ ತಡೆದರು. ಅವರು ನನ್ನ ವೀಲ್​ ಚೇರ್ ಬ್ಯಾಟರಿಯ ಸಂಪರ್ಕ ಕಡಿತಗೊಳಿಸುವಂತೆ ಹೇಳಿದರು. ಒಂದುವೇಳೆ ಹಾಗೆ ಮಾಡದಿದ್ದರೆ ವಿಮಾನ ಹತ್ತಲು ಬಿಡುವುದಿಲ್ಲ ಎಂದು ಹೆದರಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನನ್ನನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ ನಂತರವೂ ನನಗೆ ವಿಮಾನವೇರಲು ಅನುಮತಿ ನೀಡಲಿಲ್ಲ” ಎಂದು ಮಜುಂದಾರ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಪೈಲಟ್ ವರ್ತನೆಗೆ ಕಿಡಿ ಕಾರಿದ್ದಾರೆ.

ಬೆಂಗಳೂರಿನ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನ ಪ್ರಾಧ್ಯಾಪಕರಾದ ಕೌಶಿಕ್ ಕುಮಾರ್ ಮಜುಂದಾರ್ ಅವರು 2009ರಿಂದ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅವರು ಇದುವರೆಗೂ ಕನಿಷ್ಠ 25 ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕೂ ಮೊದಲು ಒಮ್ಮೆ ಕೂಡ ಅವರಿಗೆ ಇದೇ ರೀತಿಯ ಅವಮಾನ ಆಗಿತ್ತು. ತಮ್ಮ ವೈದ್ಯರೊಂದಿಗೆ ಅಪಾಯಿಂಟ್‌ಮೆಂಟ್ ಹೊಂದಿದ್ದ ಮಜುಂದಾರ್ ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಮಹತ್ವದ ಮೀಟಿಂಗ್​ಗೆ ಹೊರಟಿದ್ದರು. ಪೈಲಟ್‌ನ “ಅಮಾನವೀಯ ವರ್ತನೆ”ಯಿಂದಾಗಿ ಅವರು ಮೀಟಿಂಗ್​ಗೆ ಹೋಗಲು ಸಾಧ್ಯವಾಗಲಿಲ್ಲ.

ಇದು ಎರಡನೇ ಬಾರಿಗೆ ಶ್ರೀ ಮಜುಂದಾರ್ ಅವರನ್ನು ಏರ್ ಇಂಡಿಯಾ ವಿಮಾನ ಹತ್ತದಂತೆ ತಡೆಯಲಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ಉಚಿತವಾಗಿ ಆಂಬು ಲಿಫ್ಟ್ ಸೌಲಭ್ಯ ನೀಡುತ್ತಾರೆ. ಇತರ ವಿಮಾನಗಳಲ್ಲಿ ಅವರು ಆಂಬು ಲಿಫ್ಟ್‌ಗೆ ಶುಲ್ಕ ವಿಧಿಸುತ್ತಾರೆ. ಹೀಗಾಗಿ, ನಾನು ಏರ್ ಇಂಡಿಯಾ ವಿಮಾನದಲ್ಲೇ ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?

Shocking News: ಹಸು ಕದ್ದವನ ಅರ್ಧ ತಲೆ, ಮೀಸೆ ಬೋಳಿಸಿ, ಮುಖಕ್ಕೆ ಮಸಿ ಬಳಿದು ಮೆರವಣಿಗೆ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್