ಸೇತುವೆ ಮೇಲೆ ಅಪಘಾತ; ಸೇತುವೆಯಿಂದ ನದಿಗೆ ಬಿದ್ದ ಬೈಕ್ ಸವಾರನ ಮೃತ ದೇಹ ಪತ್ತೆ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆ ಬಳಿ ಕಾರು, ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಅಕ್ಷಯ್ (26), ಸುನಿಲ್ (27) ಇಬ್ಬರೂ ನದಿಗೆ ಬಿದ್ದಿದ್ದರು. ಓರ್ವ ಸವಾರ ಈಜುತ್ತಾ ದಡ ಸೇರಿದ್ದ.
ಉತ್ತರ ಕನ್ನಡ: ಸೇತುವೆ ಮೇಲೆ ಅಪಘಾತವಾಗಿ ಸೇತುವೆಯಿಂದ ಶರಾವತಿ ನದಿಗೆ ಬಿದ್ದಿದ್ದ ಬೈಕ್ ಸವಾರನ ಶವ ಪತ್ತೆಯಾಗಿದೆ. ಬೈಕ್ ಸವಾರ ಅಕ್ಷಯ್(26) ಮೃತ ದೇಹ ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆ ಬಳಿ ಕಾರು, ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಅಕ್ಷಯ್ (26), ಸುನಿಲ್ (27) ಇಬ್ಬರೂ ನದಿಗೆ ಬಿದ್ದಿದ್ದರು. ಓರ್ವ ಸವಾರ ಈಜುತ್ತಾ ದಡ ಸೇರಿದ್ದ. ಆದ್ರೆ ಅಕ್ಷಯ್ಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದ್ದು ಮೃತ ದೇಹ ಪತ್ತೆಯಾಗಿದೆ. ಹೊನ್ನಾವರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಲಿನ ವಾಹನ ಡಿಕ್ಕಿ ಹೊಡೆದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಹಿಳೆ ಪಾರು ಉಡುಪಿ: ಜಿಲ್ಲೆಯ ಪೆರಂಪಳ್ಳಿ ಮಣಿಪಾಲ ಮುಖ್ಯ ರಸ್ತೆಯಲ್ಲಿ ಸ್ಕೂಟರ್ ಮೂಲಕ ರಸ್ತೆ ದಾಟುತ್ತಿದ್ದ ಮಹಿಳೆಗೆ ಹಾಲಿನ ವಾಹನ ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಲಿನ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ರಸ್ತೆಯ ಮೇಲೆ ಬಿದ್ದಿದ್ದು ಯಾವುದೇ ರೀತಿಯ ಗಾಯಗಳಾಗಿಲ್ಲ. ರಸ್ತೆಗೆ ಮಹಿಳೆ ಬೀಳುತ್ತಿದ್ದಂತೆ ಬಸ್ ಸಿಬ್ಬಂದಿ, ಸಾರ್ವಜನಿಕರು ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿದ್ರು.
ಬೀಗ ಒಡೆದು ದುಷ್ಕರ್ಮಿಗಳಿಂದ ಸರಣಿ ಕಳ್ಳತನ ಚಿಕ್ಕಮಗಳೂರು: ಬೀಗ ಒಡೆದು ದುಷ್ಕರ್ಮಿಗಳು ಸರಣಿ ಕಳ್ಳತನ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಕೊಟ್ಟಿಗೆಹಾರದಲ್ಲಿ ಕೋಳಿ ಅಂಗಡಿ, ಗ್ಯಾರೇಜ್ನಲ್ಲಿ ಕಳ್ಳತನ ನಡೆದಿದೆ. ಪ್ರಾಥಮಿಕ ಶಾಲೆಯಲ್ಲಿ 50 ಸಾವಿರ ರೂಪಾಯಿ ಮೌಲ್ಯದ ಪ್ರೊಜೆಕ್ಟರ್ ಕೂಡ ಕಳ್ಳತನವಾಗಿದೆ. ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಕುಡಿತ ಬಿಡಲು ಪತಿ ಒಪ್ಪದ ಹಿನ್ನೆಲೆ ಪತ್ನಿ ನೇಣಿಗೆ ಶರಣು ವಿಜಯನಗರ: ಕುಡಿತ ಬಿಡಲು ಪತಿ ಶಶಿಧರ್ ಒಪ್ಪದ ಹಿನ್ನೆಲೆ ಪತ್ನಿ ನೇಣಿಗೆ ಶರಣಾದ ಘಟನೆ ಕೂಡ್ಲಗಿ ತಾಲೂಕಿನ ಬೆಳಗಟ್ಟಿ ಗ್ರಾಮದಲ್ಲಿ ನಡೆದಿದೆ. ಶ್ರುತಿ(22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಗೆ ಕುಡಿತ ಬಿಡುವಂತೆ ಹೇಳಿದಕ್ಕೆ ಪತಿ ಒಪ್ಪದ ಕಾರಣ ಮನನೊಂದ ಮಹಿಳೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಟಾಪ್ ಮಾತ್ರ ಧರಿಸಿ ಫೋಟೋ ಹಂಚಿಕೊಂಡ ಮಲ್ಲಿಕಾ ಶೆರಾವತ್
Published On - 7:09 pm, Tue, 8 March 22