ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಬಿಕಾಂ ಪರೀಕ್ಷೆ ಬರೆಯಲು ಅನುಮತಿ ಕೊಟ್ಟ ಹೈಕೋರ್ಟ್
ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ದರ್ಶನ್ಗೆ ಪ್ರತ್ಯೇಕ ಕೊಠಡಿಯಲ್ಲಿ ಬಿಕಾಂ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದೆ. ಕೊಠಡಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು.
ಬೆಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಬಿಕಾಂ ಪರೀಕ್ಷೆ(B.Com Exam) ಬರೆಯಲು ಹೈಕೋರ್ಟ್(Karnataka High Court) ಅನುಮತಿ ನೀಡಿದೆ. ಆರೋಪಿ ದರ್ಶನ್ಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ದರ್ಶನ್ಗೆ ಪ್ರತ್ಯೇಕ ಕೊಠಡಿಯಲ್ಲಿ ಬಿಕಾಂ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ ನೀಡಿದೆ. ಕೊಠಡಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಪರೀಕ್ಷೆ ಬರೆಯಲು ಜೈಲಿನಿಂದಲೇ ಕರೆತರಬೇಕು. ಪರೀಕ್ಷೆ ಬರೆದ ನಂತರ ಜೈಲಿಗೆ ಕರೆದೊಯ್ಯಬೇಕು. ಈ ವೇಳೆ ಆರೋಪಿಗೆ ಕೈಗೆ ಬೇಡಿ ಹಾಕಬಾರದು. ಭದ್ರತಾ ಸಿಬ್ಬಂದಿ ಪೊಲೀಸ್ ಸಮವಸ್ತ್ರ ಹಾಕಬಾರದು. ಭದ್ರತೆಯ ವೆಚ್ಚ ಆರೋಪಿಯೇ ಭರಿಸಬೇಕೆಂದು ಷರತ್ತುಗಳನ್ನು ಹಾಕಿ ನ್ಯಾ. ವಿ.ಶ್ರೀಷಾನಂದರವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಕೇಸ್ ಇನ್ನೂ ತನಿಖಾ ಹಂತದಲ್ಲಿದೆ, ಹಾಗಾಗಿ ಆರೋಪಿ ವಿದ್ಯಾರ್ಥಿಯ ಭವಿಷ್ಯ ಡೋಲಾಯಮಾನವಾಗಿಡಲು ಆಗದು: ಜನವರಿ ತಿಂಗಳಲ್ಲಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪರ ವಕೀಲರು ಇದೊಂದು ಲವ್ ಪ್ರಕರಣ, ಬಲವಂತದ ಅತ್ಯಾಚಾರವಲ್ಲ ಎಂದು ವಾದಿಸಿದ್ದರು. ಮಾ.15 ರಿಂದ 31 ರವರೆಗೆ ಬಿಕಾಂ ಪರೀಕ್ಷೆ ನಡೆಯುತ್ತಿದೆ. ಈ ಅವಧಿಗೆ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಕೇಸ್ ಇನ್ನೂ ತನಿಖಾ ಹಂತದಲ್ಲಿದೆ. ಕೇಸ್ ಬಾಕಿ ಇರುವ ಕಾರಣಕ್ಕೆ ಆರೋಪಿ ವಿದ್ಯಾರ್ಥಿಯ ಭವಿಷ್ಯವನ್ನು ಡೋಲಾಯಮಾನವಾಗಿಡಲು ಸಾಧ್ಯವಿಲ್ಲ. ಹೀಗಾಗಿ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಆದೇಶಿಸುತ್ತಿದ್ದೇನೆಂದು ನ್ಯಾ.ವಿ.ಶ್ರೀಷಾನಂದ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಹೀಗೊಂದು ನವರತ್ನ ವಿಚಾರ -ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!
ಸುಮಿಯಲ್ಲಿ ಸಿಲುಕಿರುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ: ಕೇಂದ್ರ ಸರ್ಕಾರ
Published On - 7:36 pm, Tue, 8 March 22