AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಪುರಂ ಗೋಲ್ಡ್ ಫೈನಾನ್ಸ್ ಕಂಪನಿಗೆ ಸಿಬ್ಬಂದಿಗಳಿಂದಲ್ಲೇ ಕೋಟಿ ಕೋಟಿ ವಂಚನೆ ಆರೋಪ! ನಾಲ್ವರು ಅರೆಸ್ಟ್

ಫೈನಾನ್ಸ್​ನಲ್ಲಿ ಇಟ್ಟಿದ್ದ ಅಪಾರ ಪ್ರಮಾಣದ ನಗದನ್ನು ಸಹ ಸಿಬ್ಬಂದಿಗಳು ತೆಗದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್​ಗಳು ದಾಖಲಾಗಿವೆ.

ಮಣಪುರಂ ಗೋಲ್ಡ್ ಫೈನಾನ್ಸ್ ಕಂಪನಿಗೆ ಸಿಬ್ಬಂದಿಗಳಿಂದಲ್ಲೇ ಕೋಟಿ ಕೋಟಿ ವಂಚನೆ ಆರೋಪ! ನಾಲ್ವರು ಅರೆಸ್ಟ್
ಬಂಧಿತ ಆರೋಪಿಗಳು
TV9 Web
| Updated By: sandhya thejappa|

Updated on:Mar 09, 2022 | 9:32 AM

Share

ಬೆಂಗಳೂರು: ಮಣಪುರಂ ಗೋಲ್ಡ್ ಫೈನಾನ್ಸ್​ನಲ್ಲಿ (Manappuram Gold Finance) ಬೃಹತ್ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಖುದ್ದು ಕಂಪನಿಯ ವಲಯ ಮ್ಯಾನೇಜರ್ (Manager) ದೂರು ದಾಖಲಿಸಿದ್ದಾರೆ. ಕೋಟಿ ಕೋಟಿ ವಂಚನೆ ಆರೋಪ ಹಿನ್ನೆಲೆ ಯಶವಂತಪುರ ಪೊಲೀಸರು ನಾಲ್ವರು ಕಂಪನಿ ಸಿಬ್ಬಂದಿಗಳನ್ನ ಅರೆಸ್ಟ್ ಮಾಡಿದ್ದಾರೆ. ಅಮರ್ ನಾಥ್, ಶಿವಕುಮಾರ್, ಮೋನಿಷಾ ಸೇರಿದಂತೆ ನಾಲ್ವರು ಬಂಧನಕ್ಕೊಳಗಾಗಿದ್ದಾರೆ. ಯಶವಂತಪುರ ಬ್ರ್ಯಾಂಚ್​ನ ಮಣಪುರಂ ಗೋಲ್ಡ್ ಫೈನಾನ್ಸ್ನಲ್ಲಿ ಸಿಬ್ಬಂದಿಗಳು ಅಡವಿಟ್ಟ ಚಿನ್ನವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ.

ಜೊತೆಗೆ ಫೈನಾನ್ಸ್​ನಲ್ಲಿ ಇಟ್ಟಿದ್ದ ಅಪಾರ ಪ್ರಮಾಣದ ನಗದನ್ನು ಸಹ ಸಿಬ್ಬಂದಿಗಳು ತೆಗದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್​ಗಳು ದಾಖಲಾಗಿವೆ. ಬ್ರ್ಯಾಂಚ್ ಅಧಿಕಾರಿಗಳಿಗೆ ಕೆಜಿ ಕೆಜಿ ಚಿನ್ನ ಕೊಟ್ಟು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 2 ಕೆಜಿ ಚಿನ್ನ ಪಡೆದ ಅಧಿಕಾರಿಗಳು ಬೇರೆಯವರ ಹೆಸರಿನಲ್ಲಿ ಅಡವಿಟ್ಟಿದ್ದಾಗಿ ಆರೋಪಿಸಿ ಕಲಾವತಿ ಎಂಬ ಮಹಿಳೆ ದೂರು ನೀಡಿದ್ದಾರೆ.

ಮಹಿಳೆಯಿಂದ ಪಡೆದ ಚಿನ್ನವನ್ನು ಬೇರೆಯವರ ಹೆಸರಿನಲ್ಲಿ ಕಂಪನಿಯಲ್ಲಿ ಅಡಮಾನ ಇಟ್ಟಿದ್ದಾರೆ. ಈ ಮೂಲಕ ಅಕ್ರಮ ಲಾಭ ಮಾಡಿಕೊಂಡು ಮೋಸ ಮಾಡಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿದೆ. ಬ್ರಾಂಚ್ ಹೆಡ್ ಶ್ವೇತ ಸೇರಿದಂತೆ ಆರು ಮಂದಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಯಶವಂತಪುರ ಬ್ರಾಂಚ್ ಆಡಿಟಿಂಗ್ ಮಾಡುವಾಗ ಅವ್ಯವಹಾರ ಬಯಲಾಗಿದೆ.

ಆರೋಪಿಗಳಿಂದ ಕಂಪನಿಗೆ ಬರೊಬ್ಬರಿ 2 ಕೋಟಿ ನಷ್ಟವಾಗಿದ್ದು, 18 ವಿವಿಧ ಖಾತೆಗಳ ತೆರೆದು ಅವ್ಯವಹಾರ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಸಿಸ್ಟಂನಲ್ಲಿ ಸುಳ್ಳು ಎಂಟ್ರಿ ಮಾಡುವ ಮೂಲಕ ಕಂಪನಿಗೆ ಮೋಸ ಮಾಡಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ

ವ್ಲಾಡಿಮಿರ್ ಪುಟಿನ್ ವಿರುದ್ಧ ವಿನೂತನ ಪ್ರತಿಭಟನೆ ಮಾಡುತ್ತಿರುವ ಬ್ರಿಟನ್ ಪಬ್; ಹೇಗೆ ಅಂತೀರಾ? ಇಲ್ಲಿದೆ ನೋಡಿ

ಜ್ಯೋತಿಷ್ಯ ಶಾಸ್ತ್ರದ 27 ನಕ್ಷತ್ರಗಳ ಆಧಾರದ ಮೇಲೆ ಮನುಷ್ಯನನ್ನು ಕಾಡುವ ರೋಗ, ಅದರ ಕಾಲಾವಧಿ ಹೇಳಬಹುದು! ಅದು ಹೇಗೆ? ಇಲ್ಲಿದೆ ವಿವರ ಓದಿ

Published On - 9:23 am, Wed, 9 March 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ