AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ -ಐ ಡೋಂಟ್ ವಾಂಟ್ ಸರ್ಟಿಫಿಕೇಟ್ ಫ್ರಂ ಯು: ಅಸೆಂಬ್ಲಿಯಲ್ಲಿ ಗುಡುಗಿದ ಸಿದ್ದರಾಮಯ್ಯ

V Somanna: 1970 ಕ್ಕಿಂತ ಮೊದಲು ರಾಜಕಾರಣ ಬೇರೆ. ಅಂದು ಜನರು ಪ್ರಾಮಾಣಿಕರಾಗಿದ್ದರು, ಈಗ ಪರಿಸ್ಥಿತಿ ಬದಲಾಗಿದೆ. ಚುನಾವಣೆ ನ್ಯಾಯಯುತವಾಗಿ ಎದುರಿಸುತ್ತೇವೆಂದು ಯಾರೇ ಹೇಳಲಿ ಅದು ಆತ್ಮವಂಚನೆ ಮಾಡಿಕೊಂಡು ರಾಜಕಾರಣ ಮಾಡಿದಂತೆ ಎಂದು ಸಿದ್ದರಾಮಯ್ಯ ವಸ್ತುಸ್ಥಿತಿ ವಿವರಿಸಿದರು.

ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ -ಐ ಡೋಂಟ್ ವಾಂಟ್ ಸರ್ಟಿಫಿಕೇಟ್ ಫ್ರಂ ಯು: ಅಸೆಂಬ್ಲಿಯಲ್ಲಿ ಗುಡುಗಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ -ಐ ಡೋಂಟ್ ವಾಂಟ್ ಸರ್ಟಿಫಿಕೇಟ್ ಫ್ರಂ ಯೂ: ವಿಧಾನಸಭೆಯಲ್ಲಿ ಗುಡುಗಿದ ಸಿದ್ದರಾಮಯ್ಯ
TV9 Web
| Edited By: |

Updated on:Mar 08, 2022 | 5:09 PM

Share

ಬೆಂಗಳೂರು: ಇಂದು ವಿಧಾನಸಭೆ ಕಲಾಪದ ವೇಳೆ ಸಚಿವ ವಿ. ಸೋಮಣ್ಣ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನುದ್ದೇಶಿಸಿ, ಸಿದ್ದರಾಮಯ್ಯನವರು ಬಿಜೆಪಿಯನ್ನು ಟೀಕಿಸುವುದು ಬೇಡ. ಬದಲಿಗೆ ದೇವರಾಜ ಅರಸು, ಬಂಗಾರಪ್ಪ, ಗೋಪಾಲಗೌಡ, ಸಾಹುಕಾರ್ ಚೆನ್ನಯ್ಯನವರ ದಾರಿಯಲ್ಲಿ ಸಾಗಲಿ. ಅವರ ರೀತಿ ಚಿಂತನೆ ಮಾಡಬೇಕು, ಮಾತಾಡಬೇಕು ಎಂದು ಸಲಹೆ ನೀಡಿದರು. ಆಗ ವಸತಿ ಸಚಿವ ಸೋಮಣ್ಣ ಸಲಹೆಗೆ ಕೆರಳಿ ಕೆಂಡವಾದ ಆದ ಸಿದ್ದರಾಮಯ್ಯ ನಾನು ನಾನೇ, ನಾನು ಸಿದ್ದರಾಮಯ್ಯ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಾನು ಗಾಂಧಿ, ಅಂಬೇಡ್ಕರ್​ರನ್ನ ಹೋಲಿಸಿಕೊಳ್ಳಲು ಆಗುತ್ತಾ? ನನ್ನ ವ್ಯಕ್ತಿತ್ವ ಬೇರೆ, ಬೇರೆಯವರ ವ್ಯಕ್ತಿತ್ವ ಬೇರೆ ಎಂದು ಗರಂ ಆಗಿಯೇ ಅಸಮಾಧಾನ ಹೊರಹಾಕಿದರು.

ತೀಟೆ ಮಾಡೋದಕ್ಕೆ ಸಿದ್ದರಾಮಯ್ಯ ಒಬ್ಬರೇ ಸಾಕು ಎಂದು ಸಚಿವ ಸೋಮಣ್ಣ ಏನೋ ಹೇಳಲು ಹೋದರು ಆಗ ಮತ್ತೆ ಸಿದ್ದರಾಮಯ್ಯ ಸಿಟ್ಟು ಕಂಡು ಸೋಮಣ್ಣ ಸ್ಪಷ್ಟನೆಗೆ ಮುಂದಾದರು. ಆಗಲೂ ಸೋಮಣ್ಣ ಮೇಲೆ ಸಿದ್ದರಾಮಯ್ಯ ಕಿಡಿಕಾರಿದರು. ಕೂತ್ಕೊಳ್ರಿ ಸಾಕು, ನಿಮ್ಮಿಂದ ನಮಗೆ ಸರ್ಟಿಫಿಕೆಟ್ ಬೇಡ. ಐ ಆ್ಯಮ್ ಸಿದ್ದರಾಮಯ್ಯ, ನಾನು ಯಾರಂತೆಯೂ ಆಗಲ್ಲ. ಗೊತ್ತಿಲ್ವಾ ನನಗೆ ನೀನು ಏನ್ ಹೇಳ್ತಿದೀಯಾ ಎಂದು ಗರಂ ಆದರು.

ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ. 1970 ಕ್ಕಿಂತ ಮೊದಲು ರಾಜಕಾರಣ ಬೇರೆ. ಅಂದು ಜನರು ಪ್ರಾಮಾಣಿಕರಾಗಿದ್ದರು, ಈಗ ಪರಿಸ್ಥಿತಿ ಬದಲಾಗಿದೆ. ಚುನಾವಣೆ ನ್ಯಾಯಯುತವಾಗಿ ಎದುರಿಸುತ್ತೇವೆಂದು ಯಾರೇ ಹೇಳಲಿ ಅದು ಆತ್ಮವಂಚನೆ ಮಾಡಿಕೊಂಡು ರಾಜಕಾರಣ ಮಾಡಿದಂತೆ ಎಂದು ಸಿದ್ದರಾಮಯ್ಯ ವಸ್ತುಸ್ಥಿತಿ ವಿವರಿಸಿದರು.

Somanna ನಿನ್ನಿಂದ ನನಗೆ ಸರ್ಟಿಫಿಕೇಟ್ ಬೇಕಾಗಿಲ್ಲ.. ಏಯ್​ ಕೂತ್ಕೊಳ್ರಿ ಎಂದ ಗುಡುಗಿದ ಸಿದ್ದು

Published On - 5:04 pm, Tue, 8 March 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ