ಕೌಟುಂಬಿಕ ಕಲಹ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪತಿರಾಯ; ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಗದಗ ಜನರು

23 ಕಡೆ ಮಚ್ಚಿನಿಂದ ಹೊಡೆದು ಪತ್ನಿಯನ್ನ ಗಾಯಗೊಳಿಸಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ಮಾರಣಾಂತಿಕ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, 4 ವರ್ಷದ ಹಿಂದೆ ಹಿಂದೂ ಯುವತಿ ಅಪೂರ್ವಳನ್ನ ಇಜಾಜ್ ಮದ್ವೆಯಾಗಿದ್ದ.

ಕೌಟುಂಬಿಕ ಕಲಹ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪತಿರಾಯ; ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಗದಗ ಜನರು
ಪತ್ನಿ ಅಪೂರ್ವ, ಪತಿ ಇಜಾಜ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 10, 2022 | 3:05 PM

ಗದಗ: ಕೌಟುಂಬಿಕ ಕಲಹ (family matter)   ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ಪತ್ನಿ (wife) ಹತ್ಯೆಗೆ ಪತಿ ಯತ್ನಿಸಿರುವಂತಹ ಘಟನೆ ನಡೆದಿದೆ. ಗದಗ ನಗರದ ಮುಂಡರಗಿ ರಸ್ತೆಯ ಲಯನ್ ಸ್ಕೂಲ್ ಗ್ರೌಂಡ್ ಬಳಿ ಘಟನೆ ಸಂಭವಿಸಿದೆ. ಹಿಂದೂ ಹೆಂಡತಿಯನ್ನ ಮಚ್ಚಿನಿಂದ ಅಟ್ಟಾಡಿಸಿ ಮುಸ್ಲಿಂ ಗಂಡ ಮಾರಣಾಂತಿಕ ಹಲ್ಲೆ ಮಾಡಿದ್ದು, ಬೆಳ್ಳಂಬೆಳಗ್ಗೆ ಗದಗ ನಗರದ ಜನರು ಬೆಚ್ಚಿದಬಿದ್ದಾರೆ. ಸ್ಕೂಟಿ ಕಲೆಯುತ್ತಿದ್ದ ಅಪೂರ್ವ ಶಿರೂರ(26) ಅಲಿಯಾಸ್ ಅರ್ಫಾನ್ ಬಾನು ಎಂಬಾಕೆಯ ಮೇಲೆ ಪತಿ ಹಲ್ಲೆ ಮಾಡಿದ್ದಾನೆ. ಹುಬ್ಬಳ್ಳಿ ಕೋಲಪೆಟೆಯ ಇಜಾಜ್ (38) ಹಲ್ಲೆ ಮಾಡಿದ ವ್ಯಕ್ತಿ. 23 ಕಡೆ ಮಚ್ಚಿನಿಂದ ಹೊಡೆದು ಪತ್ನಿಯನ್ನ ಗಾಯಗೊಳಿಸಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ಮಾರಣಾಂತಿಕ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, 4 ವರ್ಷದ ಹಿಂದೆ ಹಿಂದೂ ಯುವತಿ ಅಪೂರ್ವಳನ್ನ ಇಜಾಜ್ ಮದ್ವೆಯಾಗಿದ್ದ. ಈ ಮೊದಲೇ ಮದುವೆಯಾಗಿದ್ದ ವಿಷಯ ತಿಳಿದು ಅಪೂರ್ವ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕಳೆದ 4, 5 ತಿಂಗಳಿಂದ ಗಂಡನಿಂದ ದೂರವಾಗಿದ್ದಳು. ಗಂಭೀರವಾಗಿ ಗಾಯಗೊಂಡ ಅಪೂರ್ವಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆ ಬಳಿ ಸಂಬಂಧಿಕರು ಜಮಾಯಿಸಿದ್ದಾರೆ. ಜಿಮ್ಸ್ ಆಸ್ಪತ್ರೆಗೆ ಎಸ್ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಡೆತ್​ನೋಟ್​ ಬರೆದಿಟ್ಟು ಯುವತಿ ಆತ್ಮಹತ್ಯೆ:

ಧಾರವಾಡ: ಐಎಎಸ್ ಕೋಚಿಂಗ್​ಗೆ ಬಂದಿದ್ದ ಯುವತಿ ಡೆತ್​ನೋಟ್ (Death Note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಗರದ ಸಪ್ತಾಪುರ ಬಡಾವಣೆಯಲ್ಲಿರೋ ಅಶ್ವಿನಿ ಪಿಜಿಯಲ್ಲಿ ಘಟನೆ ನಡೆದಿದೆ. ಗೀತಾ ಹೆಗ್ಗಣ್ಣವರ್ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಗೀತಾ, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ ನಿವಾಸಿಯಾಗಿದ್ದು, ಕೆಎಎಸ್ ಕೋಚಿಂಗ್​ಗೆ ಬಂದಿದ್ದಳು. ಕ್ಲಾಸಿಕ್ ಸಂಸ್ಥೆಯಲ್ಕಿ ಕೋಚಿಂಗ್ ಪಡೆಯುತ್ತಿದ್ದಳು. ಇಬ್ಬರು ಹುಡುಗರು ವೀಡಿಯೋ ಮಾಡಿರೋ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಸಂಸ್ಥೆಯ ಸಿಬ್ಬಂದಿಯ ಕುಮ್ಮಕ್ಕೂ ಇರೋದಾಗಿ ಉಲ್ಲೇಖಿಸಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರ ಭೇಟಿ ನೀಡಿ ಡೆತ್ ನೋಟ್ ವಶಕ್ಕೆ ಪಡೆದುಕೊಂಡಿದ್ದಾರೆ.

ಕ್ಯಾಬ್​ ಚಾಲಕನಿಂದ ಯುವತಿ ಜೊತೆ ಅಸಭ್ಯ ವರ್ತನೆ:

ಬೆಂಗಳೂರು: ಕ್ಯಾಬ್ ಚಾಲಕ (cab driver) ನಿಂದ ಯುವತಿ ಜೊತೆಗೆ ಅಸಭ್ಯ ವರ್ತನೆ ಆರೋಪ ಮಾಡಲಾಗಿದ್ದು, ಜೀವನಭೀಮನಗರ ಠಾಣೆ ಪೊಲೀಸರಿಂದ ಆರೋಪಿ ಮಂಜುನಾಥ್ ಬಂಧನ ಮಾಡಲಾಗಿದೆ. ಮಾರ್ಚ್ 9 ಮಧ್ಯರಾತ್ರಿ 1 ರಿಂದ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಯುವಕ‌ , ಯುವತಿ ಇಬ್ಬರು ಕುಡಿದು ಚಿತ್ತಾಗಿದ್ದು, ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಾರೆ. ಇಳಿಯುವಾಗ ಚಾಲಕನ ಸಹಾಯ ಕೇಳಿದ್ದಾರೆ. ಈ ವೇಳೆ ಖಾಸಗಿ‌ ಅಂಗ ಸ್ಪರ್ಶಿಸಿದ್ದಾನೆಂದು ಯುವತಿ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ‌ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ.

ನಾಲ್ಕು ಜನ ನಟೋರಿಯಸ್ ಬೈಕ್ ಕಳ್ಳರು ಅಂದರ್:

ರಾಯಚೂರು: ಹ್ಯಾಂಡ್​ಲಾಕ್​ ಮುರಿದು ಬೈಕ್ ಕದಿಯುತ್ತಿದ್ದ ಆರೋಪಿಗಳನ್ನು ನೇತಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಜನೇಯ, ಮಹೇಶ್, ಭಗತ್ ಸಿಂಗ್, ಬಾಲಕೃಷ್ಣ ಬಂಧಿತ ಆರೋಪಿಗಳು. ಬಂಧಿತರಿಂದ 10ಕ್ಕೂ ಹೆಚ್ಚು ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹ್ಯಾಂಡ್ ಲಾಕ್ ಮಾಡಿರದ ಬೈಕ್​ಗಳೇ ಈ ಕಳ್ಳರ ಟಾರ್ಗೆಟ್. ಬಾರ್​ವೊಂದರಲ್ಲಿ ಆರೋಪಿಗಳ ಪರಸ್ಪರ ಪರಿಚಯವಾಗಿದ್ದು, ಬಳಿಕ ತಮ್ಮದೇ ಟೀಂ ಮಾಡಿ ಜೂಜು, ಮದ್ಯಪಾನಕ್ಕಾಗಿ ಕಳ್ಳತನ ಮಾಡುತ್ತಿದ್ದರು. ರಾಯಚೂರಿನ ನೇತಾಜಿ ನಗರ ಪೊಲೀಸರ ಬಲೆಗೆ ಬಿದ್ದ, ನಾಲ್ಕು ಜನ ನಟೋರಿಯಸ್ ಬೈಕ್ ಕಳ್ಳರು ಅಂದರ್​ ಆಗಿದ್ದಾರೆ. ಬೈಕ್ ಪಾರ್ಕಿಂಗ್ ಜಾಗಗಳಲ್ಲಿ ವಾಚ್ ಮಾಡಿ ಹ್ಯಾಂಡ್ ಲಾಕ್ ಮಾಡಿರದ ಬೈಕ್ ಪರಿಶೀಲಿಸಿ ಬಳಿಕ ಕಳ್ಳತನ ಮಾಡುತ್ತಿದ್ದರು. ರಾಯಚೂರು ನಗರದಲ್ಲಿ ಕದ್ದ ಬೈಕ್​ಗಳನ್ನು ಆಂದ್ರ, ತೆಲಂಗಾಣದಲ್ಲಿ ಮಾರಾಟ ಮಾಡುತ್ತಿದ್ದರು. ಬೆಳಗಿನ ಜಾವ ನೇತಾಜಿ ನಗರ ಪೊಲೀಸರಿಂದ ವಾಹನಗಳ ತಪಾಸಣೆ ನಡೆಯುತ್ತಿದ್ದು, ಸಿಲ್ಲಿಯಾಗಿ ನಾಲ್ಕು ಜನ ಬೈಕ್ ಕಳ್ಳರು ಸಿಕ್ಕಿಬಿದಿದ್ದಾರೆ. ಆರೋಪಿಗಳ ಬೈಕ್ ಹಿಡಿದು ದಾಖಲೆ ಕೇಳಿದ್ದ ಖಾಕಿ, ಆಗ ಎರಡು ಬೈಕ್ ಬಿಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ನಂತರ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಿದ್ದು, ಸದ್ಯ ಬಂಧಿತ ರಿಂದ ಲಕ್ಷಾಂತರ ಮೌಲ್ಯದ 10 ಬೈಕ್ ಜಪ್ತಿ ಮಾಡಲಾಗಿದೆ. ಇದೇ ಆರೋಪಿಗಳು ರಾಯಚೂರು ಜಿಲ್ಲೆಯಾದ್ಯಂತ ಬೈಕ್ ಕಳ್ಳತನ ಮಾಡಿರೊ ಮಾಹಿತಿ ಬೆಳಕಿಗೆ ಬಂದಿದೆ. 2 -3 ವರ್ಷ ಹಳೆಯ ಬೈಕ್ ಕಳ್ಳತನ ಕೇಸ್​ಗಳು ಪತ್ತೆಯಾಗಿದ್ದು, ಸದ್ಯ ನೇತಾಜಿ ನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ:

ರಷ್ಯಾ ದಾಳಿಯ ಬಳಿಕ ಹಾನಿಗೊಳಗಾದ ಉಕ್ರೇನ್​ ನಗರದ ಕಟ್ಟಡಗಳು: ಫೋಟೋಗಳಲ್ಲಿ ನೋಡಿ

Published On - 1:59 pm, Thu, 10 March 22

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ