75 ವರ್ಷಗಳಿಂದ ಡಾಂಬರ್ ಮುಖ ನೋಡದ ರಸ್ತೆ; ರಸ್ತೆ ಸರಿಪಡಿಸುವಂತೆ ಗ್ರಾಮಸ್ಥರ ಒತ್ತಾಯ
ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ನಡೆದಿದೆ. ಮಧುಗಿರಿ ತಾಲೂಕಿನ ಐಡಿಹಳ್ಳಿಯಲ್ಲಿ ರೈತ ಶ್ರೀನಿವಾಸ್ ರೆಡ್ಡಿಗೆ ಸೇರಿದ ಕರು ಮೇಲೆ ಚಿರತೆ ದಾಳಿ ಮಾಡಿದೆ.
ತುಮಕೂರು: ರಸ್ತೆ (road) ಸರಿಪಡಿಸುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ. ಜಿಲ್ಲೆಯ ಪಾವಗಡ ತಾಲೂಕಿನ ಸಾಸಲಕುಂಟೆ ಗ್ರಾಮಸ್ಥರಿಂದ ಒತ್ತಾಯ ಮಾಡಲಾಗಿದ್ದು, ಸಾಸಲಕುಂಟೆ ಗ್ರಾಮದಿಂದ ಲಿಂಗದಹಳ್ಳಿಗೆ ಸುಮಾರು 8 ಕಿಲೋಮೀಟರ್ವರೆಗೂ ರಸ್ತೆ ಸರಿಯಿಲ್ಲ. ಸುಮಾರು 75 ವರ್ಷಗಳಿಂದ ರಸ್ತೆಗೆ ಡಾಂಬರು ಹಾಕಿಲ್ಲ, ಈಗಲಾದ್ರೂ ಹಾಕುವಂತೆ ಆಗ್ರಹಿಸಿದ್ದಾರೆ. ಮಕ್ಕಳು ವೃದ್ದರು ಗರ್ಭಿಣಿಯರು ಇದೇ ರಸ್ತೆಯಲ್ಲಿ ಓಡಾಡುವ ಹಿನ್ನೆಲೆ ತೀವ್ರ ಪರದಾಟ ಉಂಟಾಗುತ್ತಿದ್ದು, ಡಾಂಬರು ಹಾಕುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.
ಮುಖ್ಯಾಧಿಕಾರಿಗೆ ನಿಂದಿಸಿ ಪ್ರಾಣ ಬೆದರಿಕೆ:
ಹುಳಿಯಾರು ಪಟ್ಟಣ ಪಂಚಾಯಿತಿ ಸದಸ್ಯ ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆಂದು ಮುಖ್ಯಾಧಿಕಾರಿ ಎಲ್.ವಿ. ಮಂಜುನಾಥ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹುಳಿಯಾರು ಪಟ್ಟಣ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಸಾಕಷ್ಟು ಕಟ್ಟಡ ಗಳು ನಿರ್ಮಾಣ ವಾಗುತ್ತಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಅರ್ಜಿ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಪ. ಪಂ. ಸದಸ್ಯರೊಬ್ಬರು ಮುಖ್ಯಾಧಿಕಾರಿಗೆ ನಿಂದಿಸಿ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರು ಮೇಲೆ ಚಿರತೆ ದಾಳಿ:
ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ನಡೆದಿದೆ. ಮಧುಗಿರಿ ತಾಲೂಕಿನ ಐಡಿಹಳ್ಳಿಯಲ್ಲಿ ರೈತ ಶ್ರೀನಿವಾಸ್ ರೆಡ್ಡಿಗೆ ಸೇರಿದ ಕರು ಮೇಲೆ ಚಿರತೆ ದಾಳಿ ಮಾಡಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಐಡಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಶ್ರೀನಿವಾಸ್ ರೆಡ್ಡಿ ಎಂಬುವರಿಗೆ ಸೇರಿದ ಹಸವಿನ ಕರು. ಮಲಗಿದ್ದ ವೇಳೆ ಚಿರತೆ ದಾಳಿ ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ಮಾಡಿದ್ದಾರೆ.
ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ:
ಕೆರೆಗೆ ಹಾರಿ ಮಹಿಳೆ ಒಬ್ಬರು ಆತ್ಮಹತ್ಯೆಗೆ ಶರಣಾದಂತಹ ಘಟನೆ ಸಂಭವಿಸಿದೆ. ಮಧುಗಿರಿ ತಾಲೂಕಿನ ಲಕ್ಷ್ಮೀಪುರ ಗೊಲ್ಲರಹಟ್ಟಿಯಲ್ಲಿ ಕೆರೆಗೆ ಹಾರಿ ಮಂಜುಳಾ (35) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಲಕ್ಷ್ಮೀ ಪುರ ಗೊಲ್ಲರಹಟ್ಟಿ ಯಲ್ಲಿ ಘಟನೆ ನಡೆದಿದ್ದು, ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೋನಿಗೆ ಬಿದ್ದ ಹೆಣ್ಣು ಚಿರತೆ:
ರೈತರಪಾಳ್ಯ ಗ್ರಾಮದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಹೆಣ್ಣು ಚಿರತೆ ಬಿದ್ದಿದೆ. ತುಮಕೂರು ತಾಲೂಕಿನ ರೈತರಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ. ಹಲವಾರು ದಿನಗಳಿಂದ ಕಾಟ ನೀಡುತ್ತಿದ್ದ ಚಿರತೆ, ದನ ಕರುಗಳ ಮೇಲೆ ದಾಳಿ ಮಾಡಿತ್ತು. ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದಿದ್ದು, ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಗುಡಿಸಿಲಿಗೆ ಬಿತ್ತು ಆಕಸ್ಮಿಕ ಬೆಂಕಿ:
ಗುಡಿಸಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಅಪಾರ ಪ್ರಮಾಣದ ಹಾನಿಯಾಗಿರುವಂತಹ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗುಟ್ಟೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ನಾಗರತ್ನಮ್ಮ ಗಂಗಾಧರಪ್ಪಗೆ ಸೇರಿದ ಗುಡಿಸಲಿನಲ್ಲಿ ಆಕಸ್ಮಿಕ ಅಗ್ನಿ ಕಾಣಿಸಿಕೊಂಡಿದೆ. ಗುಡಿಸಲಿನಲ್ಲಿದ್ದ ಬೀರು, ಸೋಪಾ, ಅಕ್ಕಿ, ರಾಗಿ, ಜೋಳ, 48 ಸಾವಿರ ನಗದು ಹಾಗೂ ಮಕ್ಕಳ ವಿದ್ಯಾಭ್ಯಾಸದ ದಾಖಲೆ ಪತ್ರ ಸೇರಿದಂತೆ ಹಲವು ಬೆಂಕಿಗಾಹುತಿಯಾಗಿವೆ. ಸುಮಾರು 2 ಲಕ್ಷದಷ್ಟು ನಾಶವಾಗಿರುವ ಮಾಹಿತಿಯಿದ್ದು, ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
ತನ್ನ ಮುಖ್ಯಸ್ಥ ಮೃತಪಟ್ಟಿದ್ದನ್ನು ದೃಢಪಡಿಸಿದ ಐಸಿಸ್; ಹೊಸ ಮುಖ್ಯಸ್ಥನ ಹೆಸರು ಬಹಿರಂಗ ಪಡಿಸಿದ ಉಗ್ರ ಸಂಘಟನೆ
Published On - 9:35 am, Fri, 11 March 22