TV9 Impact: ಬೀದಿಪಾಲಾದ ವೃದ್ಧ ದಂಪತಿಗೆ ಮನೆ ಕಲ್ಪಿಸಿಕೊಟ್ಟ ಕೋಲಾರ ಎಸ್​​ಪಿ ನಾರಾಯಣ್

ಕೋಲಾರ ತಾಲ್ಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಅಣ್ಣ ತಮ್ಮಂದಿರ ನಡುವೆ ನಡೆದ ಅದೊಂದು ಜಗಳದಿಂದ ವೃದ್ಧ ದಂಪತಿಯ ಬದುಕು ಬೀದಿ ಪಾಲಾಗಿತ್ತು. ಈ ಬಗ್ಗೆ ಟಿವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೇ ನೆರವಿಗೆ ದಾವಿಸಿದ ಕೋಲಾರ ಎಸ್​ಪಿ, ವೃದ್ಧ ದಂಪತಿಗೆ ಮನೆ ಕಲ್ಪಿಸಿ ನ್ಯಾಯ ಒದಗಿಸಿಕೊಟ್ಟಿದ್ದಾರೆ.

TV9 Impact: ಬೀದಿಪಾಲಾದ ವೃದ್ಧ ದಂಪತಿಗೆ ಮನೆ ಕಲ್ಪಿಸಿಕೊಟ್ಟ ಕೋಲಾರ ಎಸ್​​ಪಿ ನಾರಾಯಣ್
ಕೋಲಾರ ಎಸ್​ಪಿ ಎಂ.ನಾರಾಯಣ (ಎಡಚಿತ್ರ) ಮತ್ತು ಮನೆ ಸೇರಿದ ದಂಪತಿ (ಬಲಚಿತ್ರ)
Follow us
|

Updated on:Mar 16, 2023 | 4:04 PM

ಕೋಲಾರ: ತಾಲ್ಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಅಣ್ಣ ತಮ್ಮಂದಿರ ನಡುವೆ ನಡೆದ ಅದೊಂದು ಜಗಳದಿಂದ  (Family dispute) ವೃದ್ಧ ದಂಪತಿಯ ಬದುಕು ಬೀದಿ ಪಾಲಾಗಿತ್ತು. ಈ ಬಗ್ಗೆ ಟಿವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೇ ನೆರವಿಗೆ ದಾವಿಸಿದ ಕೋಲಾರ ಎಸ್​ಪಿ ಎಂ. ನಾರಾಯಣ್ (Kolar SP M. Narayan) ಅವರು ವೃದ್ಧ ದಂಪತಿ ಪಾಪಣ್ಣ ಹಾಗೂ ಲಕ್ಷ್ಮಮ್ಮ ಅವರಿಗೆ ಮನೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಜನ್ನಘಟ್ಟ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸ್ ವರಿಷ್ಠಾಧಿಕಾರಿ, ಮನೆಯಿಂದ ಹೊರಹಾಕಿದ್ದ ಪುತ್ರ ವೆಂಕಟೇಶ್ ಮನವೋಲಿಸುವಲ್ಲಿ ಯಶ್ವಿಯಾಗಿದ್ದು, ಅದೇ ಮನೆಯಲ್ಲೇ ಉಳಿದುಕೊಳ್ಳಲು ದಂಪತಿಗೆ ಅವಕಾಶ ಕಲ್ಪಿಸಿದ್ದಾರೆ. ಮಾತ್ರವಲ್ಲದೆ, ಗ್ರಾಮ ಪಂಚಾಯಿತಿ ವತಿಯಿಂದ ನೂತನ ಮನೆ ನಿರ್ಮಿಸಿ ಶಾಶ್ವತ ವ್ಯವಸ್ಥೆ ಮಾಡುವಂತೆ ಕೋಲಾರ ಜಿಲ್ಲಾಡಳಿತ ಸೂಚನೆ ನೀಡಿದೆ.

ಅಷ್ಟಕ್ಕೂ ಏನಿದು ಘಟನೆ?: ಪಾಪಣ್ಣ ಹಾಗೂ ಲಕ್ಷ್ಮಮ್ಮ ಎಂಬ ದಂಪತಿಗೆ ಮಕ್ಕಳಿಲ್ಲ, ಹೀಗಾಗಿ ಸುಮಾರು ಹದಿನೈದು ವರ್ಷಗಳಿಂದ ತನ್ನ ದೊಡ್ಡಪ್ಪನ ಮಗ ವೆಂಕಟೇಶ್​ ಎಂಬುವರ ಮನೆಯಲ್ಲಿಯೇ ವಾಸವಿದ್ದರು. ಹೊಲದ ಕೆಲಸ, ಮನೆಯ ಕೆಲಸ ಎಲ್ಲವನ್ನೂ ಮಾಡಿಕೊಡುತ್ತಾ ಅವರ ಕಷ್ಟಸುಖಗಳಿಗಾಗುತ್ತಿದ್ದರು ಅನ್ನೋ ಕಾರಣಕ್ಕೆ ವೆಂಕಟೇಶ್​ ತನ್ನ ಮನೆಯನ್ನು ಇರುವುದಕ್ಕೆ ಬಿಟ್ಟು ಕೊಟ್ಟಿದ್ದರು. ಆದರೆ ಕಳೆದ ಕೆಲವು ದಿನಗಳ ಹಿಂದೆ ವೆಂಕಟೇಶ್​ ಹಾಗೂ ಪಾಪಣ್ಣ ಅವರ ನಡುವೆ ಹೊಲದಲ್ಲಿ ಬದು ಹಾಕುವ ವಿಚಾರದಲ್ಲಿ ಜಗಳವಾಗಿತ್ತು. ವೇಳೆ ಪಾಪಣ್ಣ ವೆಂಕಟೇಶ್​ಗೆ ಒಂದು ಏಟು ಹೊಡೆದರಂತೆ ಅದೇ ಕಾರಣಕ್ಕೆ ವೆಂಕಟೇಶ್​, ತನ್ನ ಅಣ್ಣ ಅತ್ತಿಗೆ ಅನ್ನೋದನ್ನು ನೋಡದೆ ತನ್ನ ಕಷ್ಟ ಸುಖಕ್ಕಾಗಿದ್ದವರನ್ನೇ ಮನೆಯಿಂದ ಹೊರ ಹಾಕಿದ್ದನು.

ಟಿವಿ9 ವರದಿ: ಮಾನವೀಯತೆ ಮರೆತು ಬೀದಿಗೆ ತಳ್ಳಿದ ಸೋದರ, ನಡು ರಸ್ತೆಯಲ್ಲಿ ವೃದ್ಧ ದಂಪತಿಯ ಕಣ್ಣೀರು

ಮನೆಯಿಂದ ಹೊರ ಹಾಕಿ ಅವರ ಪಾತ್ರೆ ಸಾಮಾನುಗಳನ್ನು ಹೊರ ಹಾಕಿರುವ ಹಿನ್ನಲೆಯಲ್ಲಿ ಈ ವೃದ್ಧ ದಂಪತಿ ಕಳೆದ ಐದು ದಿನಗಳಿಂದಲೂ ಹೀಗೆ ಮನೆಯ ಹೊರಗೆ ಬೀದಿಯಲ್ಲೇ ಅಡುಗೆ ಮಾಡಿಕೊಂಡು ಅಲ್ಲೇ ಮನೆಯ ಪಾತ್ರೆ ಸಾಮಾನುಗಳನ್ನು ಹಾಕಿಕೊಂಡು ರಸ್ತೆ ಬದಿಯಲ್ಲೇ ಜೀವನ ಮಾಡುತ್ತಿದ್ದರು. ಹಾವು ಇನ್ನಿತರ ಜಂತುಗಳು ಓಡಾಡುವ ಸ್ಥಳದಲ್ಲಿ ಅವರು ಭಯದಲ್ಲೇ ಬದುಕು ಸವೆಸುತ್ತಿದ್ದರು.

ಅವರಿಗೆ ಬೇರೆ ಮನೆ ಇದೆ, ಅಲ್ಲಿಗೆ ಹೋಗಲಿ ಎಂದು ಕುರಿ ಶೆಡ್​ ಅನ್ನು ತೋರಿಸಿದ್ದ ವೆಂಕಟೇಶ್, ನಾನು ಕಳೆದ ನಾಲ್ಕೈದು ತಿಂಗಳಿಂದ ಅವರಿಗೆ ಹೇಳಿದ್ದೆ. ಆದರೂ ಅವರು ಖಾಲಿ ಮಾಡಿಲ್ಲ ಎಂದು ಅವರ ಮೇಲೆಯೇ ಬೊಟ್ಟು ಮಾಡಿದ್ದರು. ಒಟ್ಟಾರೆ ವೆಂಕಟೇಶ್​ ಅವರ ಕ್ರಮಕ್ಕೆ ಗ್ರಾಮದಲ್ಲೂ ಕೂಡಾ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಗ್ರಾಮದ ಹಲವು ಜನರು ಅಧಿಕಾರಿಗಳಿಗೆ ದೂರು ನೀಡಿದ್ದರೂ ಅವರಿಗೆ ನ್ಯಾಯ ಸಿಕ್ಕಿರಲಿಲ್ಲ. ಇದೀಗ ಟಿವಿ9 ವರದಿ ಬೆನ್ನಲ್ಲೇ ಕೋಲಾರದ ಎಸ್​ಪಿಯವರು ಸ್ಪಂದನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Thu, 16 March 23

ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ