ಕೋಲಾರದ ಬಾಲಕಿಯರಿಂದ ಶಿವನ ವಿಶಿಷ್ಟ ಆರಾಧನೆ; 600 ರೂಬಿಕ್ಸ್ ಕ್ಯೂಬ್​ನಲ್ಲಿ ಅರಳಿದ ಮಹಾದೇವ

| Updated By: ಆಯೇಷಾ ಬಾನು

Updated on: Mar 06, 2022 | 6:14 PM

ರುಬಿಕ್ಸ್ ಕ್ಯೂಬ್ನಲ್ಲಿ ಗಿನ್ನಿಸ್ ಸಾಧನೆ ಮಾಡಿರುವ ಬಾಲಕಿ ಶಿವರಾತ್ರಿ ಹಬ್ಬಕ್ಕೆ ಪ್ರೇರಣೆಯಾಗಿ ರೂಬಿಕ್ಸ್ ಕ್ಯೂಬ್ನಲ್ಲಿ ಶಿವನ ಮೂರ್ತಿಯನ್ನು ಮಾಡಿದ್ದಾರೆ. ಈ ಮೂಲಕ ಈ ಇಬ್ಬರು ಬಾಲಕಿಯರು ಶಿವನಿಗೆ ತಮ್ಮ ಭಕ್ತಿಯನ್ನು ಅರ್ಪಿಸಿದ್ದಾರೆ.

ಕೋಲಾರದ ಬಾಲಕಿಯರಿಂದ ಶಿವನ ವಿಶಿಷ್ಟ ಆರಾಧನೆ; 600 ರೂಬಿಕ್ಸ್ ಕ್ಯೂಬ್​ನಲ್ಲಿ ಅರಳಿದ ಮಹಾದೇವ
600 ರೂಬಿಕ್ಸ್ ಕ್ಯೂಬ್ನಲ್ಲಿ ಅರಳಿದ ಮಹಾದೇವ
Follow us on

ಕೋಲಾರ: ಭಕ್ತರು ತಮ್ಮ ನೆಚ್ಚಿನ ಆರಾಧ್ಯ ದೇವರನ್ನು ನಾನಾ ರೀತಿಯಲ್ಲಿ ಆರಾಧಿಸುತ್ತಾರೆ. ವಿವಿಧ ರೀತಿಯಲ್ಲಿ ದೇವರಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ಆದರೆ ಇಲ್ಲೊಬ್ಬ ಶಿವನ ಭಕ್ತೆ ರುಬಿಕ್ಸ್ ಕ್ಯೂಬಿಕ್ಗಳ(Rubik’s Cubes) ಸಹಾಯದಿಂದ ಶಿವನನ್ನು ಮಾಡುವ ಮೂಲಕ ವಿಶಿಷ್ಟವಾಗಿ ಶಿವನ(Lord Shiva) ಆರಾಧನೆ ಮಾಡಿದ್ದಾಳೆ. 600 ರೂಬಿಕ್ ಕ್ಯೂಬಿಕ್ ಬಳಸಿ ಶಿವನ ರೂಪದ ಚಿತ್ರವನ್ನು ಅರಳಿಸಿದ್ದಾರೆ.

ರುಬಿಕ್ಸ್ ಕ್ಯೂಬ್ನಲ್ಲಿ ಬಾಲಕಿಯರ ವಿಶಿಷ್ಟ ಸಾಧನೆ
ರೂಬಿಕ್ ಕ್ಯೂಬಿಕ್ ಅಂದ್ರೆ ಸಾಕಷ್ಟು ಮಂದಿಗೆ ಗೊತ್ತಿರುತ್ತೆ, ಕೆಲವರಿಗೆ ತಿಳಿದಿರೋದಿಲ್ಲ. ಬಹುತೇಕರು ಅದನ್ನು ಒಂದು ಹವ್ಯಾಸವಾಗಿ, ಕಲೆಯಾಗಿ ಮನೋರಂಜನೆಗಾಗಿ ಆಡುತ್ತಾರೆ. ಕೆಲವರು ಅದರಲ್ಲೇ ಸಾಧನೆ ಕೂಡಾ ಮಾಡಿದ್ದಾರೆ. ಅದರಂತೆ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಎಲೆಮಲ್ಲಪ್ಪ ರಸ್ತೆಯ ವಿದ್ಯಾ ಮತ್ತು ಕಮಲ್ ವಿಜಯ್ ತಮ್ಮ ಪುತ್ರಿಯರಾದ ಯುಕ್ತ ಮತ್ತು ಪ್ರತೀತಿಗೆ ಈ ಕಲೆಯ ಬಗ್ಗೆ ಪ್ರೋತ್ಸಾಹ ನೀಡಿದ್ದು ಈ ಬಾಲಕಿಯರು ಮೊಸಾಯಿಕ್ ಆರ್ಟ್ನಲ್ಲಿ ಲೀಲಾಜಾಲವಾಗಿ ಚಿತ್ರಗಳನ್ನು ಬಿಡಿಸುವುದನ್ನು ಕಲಿತಿದ್ದಾರೆ. ಯುಕ್ತ ಒಂಬತ್ತನೇ ತರಗತಿ ಓದುತ್ತಿದ್ದರೆ, ಪ್ರತೀತಿ ನಾಲ್ಕನೇ ತರಗತಿ ಓದುತ್ತಿದ್ದಾರೆ, ಅಷ್ಟೆ ಅಲ್ಲ ರೂಬಿಕ್ ಕ್ಯೂಬಿಕ್ ನಲ್ಲಿ ಯಕ್ತಾ ವಿಶ್ವದಾಖಲೆ ಕೂಡಾ ಮಾಡಿದ್ದು ಗಿನ್ನಿಸ್ ದಾಖಲೆ ಮಾಡುವತ್ತ ಪ್ರಯತ್ನ ಮಾಡುತ್ತಿದ್ದಾಳೆ. ಈ ಮೂಲಕ ಈಗಾಗಲೆ ಸಾಧಕೀಯರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಯುಕ್ತ ತನ್ನ ಯೂಟ್ಯೂಬ್ ಚಾನೆಲ್ ಒಂದರ ಮೂಲಕ ರೂಬಿಕ್ ಕ್ಯೂಬಿಕ್ ನ ಕುರಿತು ಸಾವಿರಾರು ಮಂದಿಗೆ ತರಗತಿಗಳನ್ನು ಕೂಡಾ ನೀಡುತ್ತಿದ್ದಾಳೆ.

600 ರೂಬಿಕ್ಸ್ ಕ್ಯೂಬ್ನಲ್ಲಿ ಅರಳಿದ ಮಹಾದೇವ

ರುಬಿಕ್ಸ್ ಕ್ಯೂಬ್ನಲ್ಲಿ ಅರಳಿದ ಶಿವ
ಹೀಗೆ ರುಬಿಕ್ಸ್ ಕ್ಯೂಬ್ನಲ್ಲಿ ಗಿನ್ನಿಸ್ ಸಾಧನೆ ಮಾಡಿರುವ ಬಾಲಕಿ ಶಿವರಾತ್ರಿ ಹಬ್ಬಕ್ಕೆ ಪ್ರೇರಣೆಯಾಗಿ ರೂಬಿಕ್ಸ್ ಕ್ಯೂಬ್ನಲ್ಲಿ ಶಿವನ ಮೂರ್ತಿಯನ್ನು ಮಾಡಿದ್ದಾರೆ. ಈ ಮೂಲಕ ಈ ಇಬ್ಬರು ಬಾಲಕಿಯರು ಶಿವನಿಗೆ ತಮ್ಮ ಭಕ್ತಿಯನ್ನು ಅರ್ಪಿಸಿದ್ದಾರೆ. ಈ ಮೊಸಾಯಿಕ್ ಆರ್ಟ್ ನೋಡಿದಷ್ಟು ಸುಲಭವಲ್ಲ ಒಂದು ಕ್ಯೂಬಿಕ್ ನ್ನು ಬಣ್ಣದ ಪ್ರಕಾರವಾಗಿ ನಾಲ್ಕು ಭಾಗಗಳನ್ನು ಸರಿಯಾಗಿ ಜೋಡಿಸಿಕೊಂಡು ಚಿತ್ರದ ಬಣ್ಣಕ್ಕೆ ಸರಿಹೊಂದುವ ಭಾಗವನ್ನು ಒಂದೆಡೆ ಜೋಡಿಸುವ ಕಲೆ ಇದು. ಈ ಮೂಲಕ ತಮ್ಮ ಇಷ್ಟದ ಚಿತ್ರವನ್ನು ಬಿಡಿಸುವುದು ಸವಾಲಿನ ಕೆಲಸ. ಇದನ್ನು ಈ ಇಬ್ಬರು ಸಹೋದರಿಯರು ತಮ್ಮ ಪೋಷಕರ ಸಹಾಯದೊಂದಿಗೆ 600 ರೂಬಿಕ್ ಕ್ಯೂಬಿಕ್ ಬಳಸಿ ಈ ಶಿವನ ರೂಪದ ಚಿತ್ರವನ್ನು ಅರಳಿಸಿದ್ದಾರೆ. ಮಹಾ ಶಿವರಾತ್ರಿಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಶಿವನಿಗೆ ಪೂಜೆ ಸಲ್ಲಿಸಿದರೆ, ಈ ಬಾಲಕಿಯರು ತಮ್ಮ ಇಷ್ಟದ ರುಬಿಕ್ಸ್ ಕ್ಯೂಬ್ ಮೂಲಕವೇ ಶಿವನನ್ನು ಆರಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: ಬಿಜೆಪಿ ಯಾವುದೇ ಮುಸಲ್ಮಾನನಿಗೆ ಬೇಕಾದರೂ ದಾವೂದ್ ಇಬ್ರಾಹಿಂ ನಂಟು ಕಲ್ಪಿಸುತ್ತದೆ: ಶರದ್​ ಪವಾರ್​ ಆರೋಪ

Puneeth Rajkumar: ರೂಬಿಕ್ಸ್ ಕ್ಯೂಬ್​ನಿಂದ ಅಪ್ಪು ಕಲಾಕೃತಿ ರಚಿಸಿದ 9ನೇ ತರಗತಿ ವಿದ್ಯಾರ್ಥಿ; ನೆಚ್ಚಿನ ನಟನಿಗೆ ವಿಶೇಷ ನಮನ