ಅಪ್ರಾಪ್ತ ವಯಸಿನ ಬಾಲಕಿ-ಯುವಕ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

| Updated By: ಸಾಧು ಶ್ರೀನಾಥ್​

Updated on: Mar 07, 2022 | 7:09 PM

ಗಂಗಾಧರ್ ಹಾಗೂ ಲಿಖಿತ ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರ ಭೇಟಿ ನೀಡಿದ್ದಾರೆ.

ಅಪ್ರಾಪ್ತ ವಯಸಿನ ಬಾಲಕಿ-ಯುವಕ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಅಪ್ರಾಪ್ತ ವಯಸಿನ ಬಾಲಕಿ-ಯುವಕ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
Follow us on

ಕೋಲಾರ: ಯುವಕ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಯಲವಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಗಂಗಾಧರ್ ಹಾಗೂ ಲಿಖಿತ ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪತ್ನಿ ಮೇಲೆ ಅನುಮಾನಗೊಂಡ ಪತಿ ಆಕೆ ಮಲಗಿದ್ದಾಗ ಬೆಂಕಿ ಹಚ್ಚಿ ಕೊಲೆಗೆ ಯತ್ನ
ಹಾಸನ: ಅನುಮಾನ ಎಂಬುವುದು ಜೀವನವನ್ನು ಹೇಗೆ ನರಕ ಮಾಡುತ್ತೆ ಎಂಬುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ. ಪ್ರೀತಿಸಿ ಮದುವೆಯಾದವಳಿಗೆ(Love Marriage) ಪತಿಯೇ ಸೀಮೆ ಎಣ್ಣೆ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮರಡಿಕೆರಿ ಗ್ರಾಮದಲ್ಲಿ ನಡೆದಿದೆ. ಮಹಿಳೆ ದೇಹ ಬಹುತೇಕ ಸುಟ್ಟು ಹೋಗಿದ್ದು ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಗ್ರಾಮದ ಸತೀಶ್ ಎಂಬಾತ ಪತ್ನಿ ಭವ್ಯ(22) ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಮಡದಿ ಮೇಲಿನ ಅನುಮಾನದಿಂದ ಆಕೆ ಮಲಗಿದ್ದ ವೇಳೆ ಮೈ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾನೆ.

ಮಹಿಳೆ ದೇಹ ಶೇಕಡಾ 70 ರಷ್ಟು ಸುಟ್ಟು ಹೋಗಿದೆ. ಐದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಸತೀಶ್ ಮತ್ತು ಭವ್ಯ ಇಬ್ಬರೂ ಮದುವೆಯಾಗಿದ್ದರು. ಮದುವೆಯಾದ ಕೆಲವೇ ವರ್ಷದಲ್ಲಿ ಪತ್ನಿ ಮೇಲೆ ಪತಿಗೆ ಅನುಮಾನ ಹುಟ್ಟುಕೊಂಡಿದೆ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಮಾರ್ಚ್ 5 ರ ಶನಿವಾರ ಪತ್ನಿ ಹತ್ಯೆಗೆ ಸತೀಶ್ ಸಂಚು ರೂಪಿಸಿದ್ದಾನೆ. ಪತ್ನಿ ಮಲಗಿದ್ದಾಗ ಬೆಂಕಿ ಹಚ್ಚಿ ಕೊಲೆ ಮಾಡಲು ಮುಂದಾಗಿದ್ದಾನೆ. ಅದೃಷ್ಟವಶಾತ್ ಆಕೆ ಉಸಿರಾಡುತ್ತಿದ್ದು ಆಕೆ ಬದುಕುಳಿದಾಗ ಗ್ಯಾಸ್ ಲೀಕ್ ಆಗಿ ಬೆಂಕಿ ಬಿದ್ದಿದ್ದಾಗಿ ಹೇಳಿಕೆ ನೀಡುವಂತೆ ಪತ್ನಿಯನ್ನು ಬೆದರಿಸಿ ಹೇಳಿಕೆ ಕೊಡಿಸಿದ್ದಾನೆ.

ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಬಗ್ಗೆ ಭವ್ಯ ಹೇಳಿಕೆ ನೀಡಿದ್ದರು. ಆದ್ರೆ ಘಟನೆ ಬಗ್ಗೆ ಅನುಮಾನದಿಂದ ತನಿಖೆ ನಡೆಸಿದಾಗ ಪೊಲೀಸರಿಗೆ ಘಟನೆ ಹಿಂದಿನ ಮರ್ಮದ ಸತ್ಯ ತಿಳಿದಿದೆ. ಅನುಮಾನದ ಪತಿಯ ರಹಸ್ಯ ಬಯಲಾಗಿದೆ. ಸದ್ಯ ಆರೋಪಿ ಪತಿ ಸತೀಶ್ನನ್ನ ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಐಷಾರಾಮಿ ಕಾರು-ಬೈಕುಗಳ ಕಳ್ಳತನ
ಬೆಂಗಳೂರು: ಐಷಾರಾಮಿ ಕಾರುಗಳನ್ನು ಕದ್ದು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಗೂ ಬಂಧಿತರಿಂದ 1 ಕೋಟಿ 55 ಲಕ್ಷ ರೂ. ಮೌಲ್ಯದ 6 ಇನೋವಾ ಕಾರು, 1 ಟೊಯೋಟಾ ಇಟಿಯೋಸ್ ಕಾರು ಜಪ್ತಿ ಮಾಡಲಾಗಿದೆ. ಆರೋಪಿಗಳು ಆಕ್ಸಿಡೆಂಟ್ ಆದ ವಾಹನಗಳ ಚಾರ್ಸಿ ನಂಬರ್, ವಾಹನದ ನಂಬರ್ ಕದ್ದ ಕಾರಿಗೆ ಬದಲಿಸಿ ಮಾರಾಟ ಮಾಡುತ್ತಿದ್ದರು. ತಮಿಳುನಾಡು ಮತ್ತು ಬೇರೆ ಬೇರೆ ರಾಜ್ಯದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಸದ್ಯ ಬೇಗೂರು ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಬೈಕ್ ಕಳ್ಳರು ಅರೆಸ್ಟ್
ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಬೈಕ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಉದಯ್ ಕುಮಾರ್(19), ಅಸ್ಲಂ ಸೊಲೇಜಾ(37) ಬಂಧಿತರು. ಆರೋಪಿಗಳಿಂದ 30.45 ಲಕ್ಷ ರೂಪಾಯಿ ಮೌಲ್ಯದ 40 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಬೆಂಗಳೂರು, ಕೋಲಾರ ಸೇರಿದಂತೆ ಹೊರವಲಯದ ವ್ಯಾಪ್ತಿಯಲ್ಲಿ ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬೇಡಿಕೆ ಇರುವ ಡಿಯೋ ಬೈಕ್ಗಳನ್ನೇ ಕದ್ದು ಆರೋಪಿಗಳು ಮಾರಾಟ ಮಾಡುತ್ತಿದ್ದರು.

Also Read:
ಬೆಂಗಳೂರಲ್ಲಿ ನೀರು ಟ್ಯಾಂಕರ್ ಮಾಫಿಯಾ ಇದೆ, ಆದಷ್ಟು ಬೇಗ ಮೇಕೆದಾಟು ಯೋಜನೆ ತನ್ನೀ: ಶಿಡ್ಲಘಟ್ಟದಲ್ಲಿ ಡಿಕೆ ಶಿವಕುಮಾರ್ ಮನವಿ!

Also Read:
ಚಿರಂಜೀವಿ ಸಿನಿಮಾ ಪ್ರೇರಣೆಯಿಂದ ಉಕ್ರೇನ್​ನಲ್ಲಿ ಪ್ರಾಣಿಗಳ ಸಾಕುತ್ತಿರುವ ಹೈದರಾಬಾದ್ ವೈದ್ಯ ಜಪ್ಪಯ್ಯ ಅಂದರೂ ವಾಪಸ್​ ಬರೋಲ್ವಂತೆ!

Published On - 6:20 pm, Mon, 7 March 22