Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ನೀರು ಟ್ಯಾಂಕರ್ ಮಾಫಿಯಾ ಇದೆ, ಆದಷ್ಟು ಬೇಗ ಮೇಕೆದಾಟು ಯೋಜನೆ ತನ್ನೀ: ಶಿಡ್ಲಘಟ್ಟದಲ್ಲಿ ಡಿಕೆ ಶಿವಕುಮಾರ್ ಮನವಿ!

ಹೋಟೆಲಿನಲ್ಲಿನ ಮೆನು ಮಾದರಿಯಂತೆ ಪೊಲೀಸ್ ಇಲಾಖೆಯಲ್ಲಿ ಆಯಾ ಹುದ್ದೆಗಳಿಗೆ ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ಪತ್ರಿಕಾ ವರದಿ ಹೇಳುತ್ತಿದೆ. ವರದಿ ತಪ್ಪಾಗಿದ್ದರೆ ಅದನ್ನು ಪ್ರಕಟಿಸಿದ ಆ ದಿನಪತ್ರಿಕೆಯ ಮೇಲೆ ಕ್ರಮ ಕೈಗೊಳ್ಳಿ. ವರದಿ ನಿಜ ಆಗಿದ್ದರೆ ಸಿಎಂ ಆಗಿ ನೀವೇ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ಬೆಂಗಳೂರಲ್ಲಿ ನೀರು ಟ್ಯಾಂಕರ್ ಮಾಫಿಯಾ ಇದೆ, ಆದಷ್ಟು ಬೇಗ ಮೇಕೆದಾಟು ಯೋಜನೆ ತನ್ನೀ: ಶಿಡ್ಲಘಟ್ಟದಲ್ಲಿ ಡಿಕೆ ಶಿವಕುಮಾರ್ ಮನವಿ!
ಬೆಂಗಳೂರಲ್ಲಿ ನೀರಿನ ಟ್ಯಾಂಕರ್ ಮಾಫಿಯಾ ಇದೆ, ಆದಷ್ಟು ಬೇಗ ಮೇಕೆದಾಟು ಯೋಜನೆ ತನ್ನೀ: ಶಿಡ್ಲಘಟ್ಟದಲ್ಲಿ ಡಿಕೆ ಶಿವಕುಮಾರ್ ಮನವಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 07, 2022 | 5:09 PM

ಶಿಡ್ಲಘಟ್ಟ: ಕರ್ನಾಟಕ ಕಾಂಗ್ರೆಸ್​ ಶತಾಯಗತಾಯ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಎಡತಾಕುತ್ತಿದೆ. ಅದಕ್ಕಾಗಿ ಇತ್ತೀಚೆಗೆ ಎರಡು ಕಂತಿನಲ್ಲಿ ಪಾದಯಾತ್ರೆ ಸಹ ಹಮ್ಮಿಕೊಂಡಿತ್ತು. ಈ ಮಧ್ಯೆ ಇಂದು ದೂರದ ಶಿಡ್ಲಘಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದ್ದು, ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಕೊರತೆ ಎದುರಾಗುತ್ತಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ವಾಟರ್​ ಟ್ಯಾಂಕರ್ ಮಾಫಿಯಾ ತಲೆಯೆತ್ತಿದೆ (Water tanker mafia). ಈ ಸಮಸ್ಯೆಗಳ ಸಮ್ಮುಖದಲ್ಲಿ ಆದಷ್ಟು ಬೇಗೆ ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡಿ ಎಂದು ಆಗ್ರಹಿಸಿದ್ದಾರೆ. ಯೋಜನೆಗಳಿಗೆ ಕ್ಯಾತೆ ತೆಗೆಯುವುದೇ ತಮಿಳುನಾಡಿನ ಉದ್ದೇಶ. ಕಾವೇರಿ ವಿಚಾರದಲ್ಲಿ ತಮಿಳುನಾಡು ರಾಜಕೀಯ ಮಾಡುತ್ತೆ. ಬೇಕಿದ್ದರೆ ತಮಿಳುನಾಡು ಮತ್ತು ಕರ್ನಾಟಕ ಮುಖ್ಯಮಂತ್ರಿಗಳು ಮುಖಾಮುಖಿ ಮಾತಾಡಲಿ. ಉಭಯ ರಾಜ್ಯಗಳ ಸಿಎಂ ಮಾತಾಡಿದರೆ ನಮ್ಮ ಅಭ್ಯಂತರವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್​ ಹೇಳಿದ್ದಾರೆ.

ಇನ್ನು, ಮೇಕೆದಾಟು ಯೋಜನೆ ಕುರಿತು ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಮ್ಮ ಕಾರ್ಯಕ್ರಮವನ್ನು ಹೈಜಾಕ್ ಮಾಡಿದ್ದು ಅಂತ ಕುಮಾರಸ್ವಾಮಿ ಹೇಳಿದ್ದಾರಲ್ಲಾ, ಯಾಕೆ ಅಂತಾನೂ ಹೇಳಲಿ ಎಂದು ಸವಾಲಿನ ಧಾಟಿಯಲ್ಲಿ ಡಿಕೆ ಶಿ ಮಾತನಾಡಿದ್ದಾರೆ. ಈಗ ಅವರು ಮಾಡಲು ಹೋರಟಿರುವ ಜಲಧಾರೆಗೆ ನಮ್ಮ ಬೆಂಬಲನೂ ಕೊಡ್ತೀವಿ. ಜಲಧಾರೆ ಅರ್ಥ ಏನು ಅಂತಾ ಹೇಳಲಿ ಎಂದೂ ಶಿಡ್ಲಘಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ಜೆಡಿಎಸ್​ಗೆ ಕೇಳಿದ್ದಾರೆ.

ಶೇಖಾವತ್ ಮಧ್ಯಸ್ಥಿಕೆ ವಿಚಾರ ಇಟ್ಟಿದ್ದು ಯಾಕೆ?: ಮೇಕೆದಾಟು ಯೋಜನೆಯಿಂದ ನೀರು ಹರಿಯಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಹಾಗಾದರೆ ಬಜೆಟ್ ನಲ್ಲಿ ಯೋಜನೆಗೆ ಸಾವಿರ ಕೋಟಿ ಹಣ ಇಟ್ಟಿದ್ದು ಯಾಕೆ? ಕೇಂದ್ರ ಜಲಸಂಪನ್ಮೂಲ ಸಚಿವ ಶೇಖಾವತ್ ರನ್ನು ಮಧ್ಯಸ್ಥಿಕೆ ವಿಚಾರ ಇಟ್ಟಿದ್ದು ಯಾಕೆ? ಮೇಕೆದಾಟು ಯೋಜನೆ ನಮ್ಮ ನೀರು -ನಮ್ಮ ಹಕ್ಕು ಅಂತಾ ಹೇಳಬೇಕಿತ್ತು. ಅವರನ್ನು ಕೇಳಿ ಕೋಳಿ ಕೊಯ್ದು ಮಸಾಲೆ ಅರಿಯುವಂತದ್ದು ಏನಿದೆ? ಎಂದು ಖಾರವಾಗಿಯೇ ಶಿವಕುಮಾರ್ ಪ್ರಶ್ನಿಸಿದರು. ಕೇದ್ರ ಸಚಿವ ಶೇಖಾವತ್ ಬಳಿ ನಿಮ್ಮ ಬದ್ದತೆ ತೋರದಿರುವುದೇ ನಿಮ್ಮ ವೈಫಲ್ಯಕ್ಕೆ ಕಾರಣ! ಎಂದರು.

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ -ವರದಿ ತಪ್ಪಾಗಿದ್ದರೆ ಪತ್ರಿಕೆ ಮೇಲೆ ಕ್ರಮ ಕೈಗೊಳ್ಳಿ: ಇನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿರುವುದನ್ನು ಪ್ರಸ್ತಾಪಿಸಿದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಎಂದು ನಾವು ಹೇಳುತ್ತಾ ಬಂದಿದ್ದೇವೆ. ಹೋಟೆಲಿನಲ್ಲಿನ ಮೆನು ಮಾದರಿಯಂತೆ ಪೊಲೀಸ್ ಇಲಾಖೆಯಲ್ಲಿ ಆಯಾ ಹುದ್ದೆಗಳಿಗೆ ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ಪತ್ರಿಕಾ ವರದಿ ಹೇಳುತ್ತಿದೆ. ವರದಿ ತಪ್ಪಾಗಿದ್ದರೆ ಅದನ್ನು ಪ್ರಕಟಿಸಿದ ಆ ದಿನಪತ್ರಿಕೆಯ ಮೇಲೆ ಕ್ರಮ ಕೈಗೊಳ್ಳಿ. ವರದಿ ನಿಜ ಆಗಿದ್ದರೆ ಸಿಎಂ ಆಗಿ ನೀವೇ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ಕಾಂಗ್ರೆಸ್ ಡಿಜಿಟಲ್ ಅಭಿಯಾನ: ಶಿಡ್ಲಘಟ್ಟಕ್ಕೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಆಗಮನ ಇದಕ್ಕೂ ಮುನ್ನ ಕಾಂಗ್ರೆಸ್ ಡಿಜಿಟಲ್ ಅಭಿಯಾನ ಪ್ರಯುಕ್ತ ಶಿಡ್ಲಘಟ್ಟಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಶಿಡ್ಲಘಟ್ಟಕ್ಕೆ ಬಂದಾಗ ಬೃಹತ್ ಸೇಬಿನ ಹಾರ ಹಾಕಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಆ ವೇಳೆ ಹಾರದಲ್ಲಿನ ಸೇಬನ್ನು ಕಿತ್ತುಕೊಳ್ಳಲು ಕಾರ್ಯಕರ್ತರ ಮಧ್ಯೆ ನೂಕು ನುಗ್ಗಲು ಗಲಾಟೆ ನಡೆಯಿತು. ಒಬ್ಬರ ಮೇಲೊಬ್ಬರು ಬಿದ್ದು ಸೇಬು ಹಣ್ಣನ್ನು ಕಿತ್ತುಕೊಂಡರು. ಕ್ರೇನ್ ಮೂಲಕ ಸೇಬಿನ ಹಣ್ಣು ಹಾರವನ್ನು ಡಿ.ಕೆ.ಶಿವಕುಮಾರ್​ ಗೆ ಹಾಕಲಾಯಿತು. ಅಳಿದುಳಿದ ಸೇಬಿನ ಹಾರವನ್ನು ಮೇಲೆ ಎತ್ತಲು ಕ್ರೇನ್ ಚಾಲಕ ಹರಸಾಹಸ ಪಟ್ಟ. ಅಲ್ಲಿಗೂ ಕ್ರೇನ್ ಬೆನ್ನಟ್ಟಿ ಹಣ್ಣು ಕಿತ್ತುಕೊಳ್ಳಲು ಕಾರ್ಯಕರ್ತರು ಮುಗಿಬಿದ್ದರು.

DK ಶಿವಕುಮಾರ್: ಮುಖ್ಯಮಂತ್ರಿಗಳೇ ಮೇಕೆದಾಟುಗೆ ಸಾವಿರ ಕೋಟಿ ರೂ. ಕೊಟ್ಟಿದ್ಯಾಕೆ

Published On - 4:52 pm, Mon, 7 March 22