ಯುವತಿಯನ್ನು ಚುಡಾಯಿಸಿದಕ್ಕೆ ಗುಂಪುಗಳ ನಡುವೆ ಭಾರಿ ಘರ್ಷಣೆ, ವಿಡಿಯೋ ವೈರಲ್; ಆರೋಪಿಗಳ ಬಂಧನ

TV9 Digital Desk

| Edited By: guruganesh bhat

Updated on:Sep 10, 2021 | 4:28 PM

ಸೆಪ್ಟೆಂಬರ್ 4 ರಂದು ಗೌನಿಪಲ್ಲಿಯಿಂದ ಚಿಂತಾಮಣಿಗೆ ಹೋಗುವ ಬಸ್ನಲ್ಲಿ‌ ಯುವಕರ ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಸದ್ಯ ಈಗ ಯುವಕನಿಗೆ ಥಳಿಸಿದ ಮತ್ತಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವತಿಯನ್ನು ಚುಡಾಯಿಸಿದಕ್ಕೆ ಗುಂಪುಗಳ ನಡುವೆ ಭಾರಿ ಘರ್ಷಣೆ, ವಿಡಿಯೋ ವೈರಲ್; ಆರೋಪಿಗಳ ಬಂಧನ
ಎರಡು ಗುಂಪುಗಳ ನಡುವೆ ಘರ್ಷಣೆ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಗ್ರಾಮದ ಬಳಿ ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲೇ ಯುವಕರ ನಡುವೆ ಗಲಾಟೆಗಾಗಿ ಮಾರಾಮಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಗೌನಿಪಲ್ಲಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಸೆಪ್ಟೆಂಬರ್ 4 ರಂದು ಗೌನಿಪಲ್ಲಿಯಿಂದ ಚಿಂತಾಮಣಿಗೆ ಹೋಗುವ ಬಸ್ನಲ್ಲಿ‌ ಯುವಕರ ಗುಂಪುಗಳ ನಡುವೆ ಘರ್ಷಣೆಯಾಗಿತ್ತು. ಸದ್ಯ ಈಗ ಯುವಕನಿಗೆ ಥಳಿಸಿದ ಮತ್ತಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಬು, ಅನಿಲ್, ಮದು ಹಾಗೂ ಪವನ್ ಎಂಬ ಯುವಕರಿಗೆ ಅಭಿ, ನಾಗೇಂದ್ರ, ಗಂಗಾಧರ್, ನರೇಷ್ ಎನ್ನುವ ಮತ್ತೊಂದು ಯುವಕರ ಗುಂಪು ಬಸ್ನಲ್ಲೇ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

ಶ್ರೀನಿವಾಸಪುರ ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ಅನಿಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ.

ಮೂರು ದಿನದ ಹಿಂದೆ ಬಯಲು ಸೀಮೆ ಕೋಲಾರದಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಗಲಾಟೆ ನಡೆದಿತ್ತು. ಥೇಟ್ ರಾಜಾಹುಲಿ ಸಿನಿಮಾ ಸ್ಟೈಲ್‌ನಲ್ಲಿ ಹುಡುಗಿಯರಿಗೆ ಚುಡಾಯಿಸಿದ್ದಕ್ಕೆ ಬಸ್ ನಲ್ಲಿ ಗಲಾಟೆ ನಡೆದಿತ್ತು. ಯುವತಿಯನ್ನ ಚುಡಾಯಿಸಿದ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ನಲ್ಲಿ ಯುವಕರ ಗುಂಪೊಂದು ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದರು.

ಬಸ್‌ನಲ್ಲಿ ಯುವಕನಿಗೆ ಹಾಗೂ ಆತನ ನೆರವಿಗೆ ಬಂದ ಯುವತಿ ಮೇಲೆ ಹಲ್ಲೆ ನಡೆದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಪುಲ್ ವೈರಲ್ ಆಗಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಕ್ರಾಸ್ ಬಳಿ ಗೌನಿಪಲ್ಲಿ ಗ್ರಾಮದಿಂದ ಶ್ರೀನಿವಾಸಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾಬು ಎಂಬ ಯುವಕ ಕಳೆದ ಹಲವು ದಿನಗಳಿಂದ ಬಸ್ ನಲ್ಲಿ ಬರುವ ಯುವತಿಯನ್ನ ಚುಡಾಯಿಸುತ್ತಿದ್ದ ಎನ್ನಲಾಗಿದ್ದು ಈ ಹಿಂದೆಯೂ ಎರಡು-ಮೂರು ಬಾರಿ ಎಚ್ಚರಿಕೆ ನೀಡಿದ್ರು, ಆದ್ರೂ ಎಚ್ಚೆತ್ತುಕೊಳ್ಳದ ಯುವಕನಿಗೆ ಇಂದು ಒಂದು ಗುಂಪು ಹಿಗ್ಗಾ ಮುಗ್ಗ ಥಳಿಸಿದೆ.

ಇನ್ನೂ ಅಭಿ, ನಾಗೇಂದ್ರ, ಗಂಗಾಧರ್, ನರೇಶ್ ಎಂಬ ಯುವಕರ ಗುಂಪಿಂದ ಮತ್ತೊಂದು ಗುಂಪಿನ ಮೇಲೆ ಹಲ್ಲೆ ನಡೆದಿದ್ದು. ತಾಡಿಗೋಳ ಗ್ರಾಮದ ಯುವತಿಯರನ್ನ ಚುಡಾಯಿಸಿದ್ದ ಬಾಬು ಹಾಗು ಮತ್ತೊಬ್ಬ ಯುವಕನಿಗೆ ಧರ್ಮದೇಟು ಬಿದ್ದಿದೆ. ಇನ್ನೂ ಬಾಬು ಹಿಂಬದಿಯ ಸೀಟ್ ನಲ್ಲಿದ್ದ ಓರ್ವ ಯುವತಿ ಹಾಗು ಯುವಕನಿಗು ಯುವಕರು ಹೊಡೆದಿದ್ದು ಬಸ್‌ನಲ್ಲಿದ್ದ ಪ್ರಯಾಣಿಕರಂತೂ ಒಳ್ಳೆ ಸಿನಿಮಾ ನೋಡಿದಂತೆ ನೋಡುತ್ತಿದ್ದ ಪ್ರಸಂಗ ನಡೆಯಿತು. ಇನ್ನೂ ಇದಾದ ಬಳಿಕ ಶ್ರೀನಿವಾಸಪುರದಲ್ಲಿ ದೊಣ್ಣೆ ಕೋಲುಗಳಿಂದ ಎರಡು ಯುವಕರು ಗುಂಪು ಮಾರಾಮರಿ ನಡೆದಿದೆ. ಶ್ರೀನಿವಾಸಪುರದಲ್ಲಿ ಯುವತಿಯರನ್ನ ಚುಡಾಯಿಸಿದ ಹಾಗೂ ಚುಡಾಯಿಸಿದ್ದಕ್ಕೆ ಹೊಡೆದ ಗುಂಪಿನ ನಡುವೆ ದೊಡ್ಡ ದೊಂಬಿ ಗಲಾಟೆ ಆಗಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಇನ್ನೂ ಗೌನಿಪಲ್ಲಿ ಹಾಗೂ ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಒಟ್ನಲ್ಲಿ ವಿದ್ಯಾಭ್ಯಾಸ ಮಾಡಿ ತಾವು ತಮ್ಮ ಕುಟುಂಬಕ್ಕೆ ನೆರವಾಗಲಿ ಎಂದು ತಂದೆ ತಾಯಿ ಕೂಲಿನಾಲಿ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ರೆ, ಇತ್ತ ಯುವಕ ಯುವತಿಯರು ಮಾತ್ರ ಶೋಕಿ, ಮೋಜು, ಮಸ್ತಿ ಫ್ರೆಂಡ್ಸ್ ಅಂತಾ ಊರ ಊಸಾಬರಿಯಲ್ಲಿ ಭಾಗಿಯಾಗಿ ಪೋಷಕರನ್ನ ಇಕ್ಕಟ್ಟಿಗೆ ಸಿಲುಕಿಸಿರುವುದಂತೂ ಸುಳ್ಳಲ್ಲ.

ಇದನ್ನೂ ಓದಿ: ಡ್ರಗ್ಸ್​ ಸೇವನೆ, ಮಾರಾಟ ಪ್ರಕರಣ: ತೆಲುಗು ನಟರಾದ ರವಿತೇಜ, ಚಾರ್ಮಿ ಹೆಸರೂ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖ

ಯಲಹಂಕ: ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಖಾಸಗಿ ಶಾಲಾ ಶಿಕ್ಷಕನಿಂದ ಹಲ್ಲೆ, ಆರೋಪಿ ಅರೆಸ್ಟ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada