ಬೆಂಗಳೂರು: ಲವ್ ಬ್ರೇಕಪ್ ಆಗಿದ್ದಕ್ಕೆ ಮಾಜಿ ಪ್ರಿಯಕರ ಪ್ರೀತಿಸಿದ ಯುವತಿಗೆ ಬ್ಲಾಕ್‌ಮೇಲ್ ಮಾಡಿದ್ದಾನೆ. ಕಳೆದ ಎರಡು ವರ್ಷಗಳಿಂದ ರೆಸ್ಟೊರೆಂಟ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಲ್ಕತ್ತಾ ಮೂಲದ ಯುವತಿ ಸದ್ಯ ಬೆಂಗಳೂರಿನಲ್ಲಿ ಬಂದು ಕಾರ್ಯ ನಿರ್ವಹಿಸುತ್ತಿದ್ದರು. ಈ ಮೇಳೆ ಕಾರಣಾಂತರಗಳಿಂದ ಪ್ರಿಯಕರನ ಜೊತೆ ಬ್ರೇಕಪ್ ಆಗಿದೆ. ಹೀಗಾಗಿ ಆರೋಪಿ ಸಂತ್ರಸ್ಥ ಯುವತಿಯ ಅಶ್ಲೀಲ ಫೋಟೋಗಳನ್ನ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ.
ಫೇಸ್ಬುಕ್ ಪ್ರೀತಿಗೆ ಜೀವನ ಹಾಳು:
ಸಂತ್ರಸ್ಥ ಯುವತಿ ಕೊಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಫೇಸ್ಬುಕ್ ಮೂಲಕ ಸ್ಟಾಲೋನ್ ವುಡ್ ಎಂಬಾ ಯುವಕನ ಪರಿಚಯವಾಗುತ್ತೆ. ನಂತರ ಆ ಪರಿಚಯ ಇಬ್ಬರ ನಡುವೆ ಪ್ರೇಮವಾಗುವಂತೆ ಮಾಡುತ್ತೆ. ಕೆಲ ದಿನಗಳ ಕಾಲ ಇಬ್ಬರು ಪ್ರೇಮ ಪಕ್ಷಿಗಳಾಗಿ ಕೊಲ್ಕತ್ತಾದಲ್ಲಿ ಹಾರಾಡಿದ್ದಾರೆ. ಆದರೆ ಇತ್ತೀಚೆಗೆ ಸಂತ್ರಸ್ಥ ಯುವತಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಆರೋಪಿಯ ಜೊತೆ ಜಗಳವಾಗಿ ಲವ್ ಬ್ರೇಕಪ್ ಆಗಿದೆ. ಹೀಗಾಗಿ ಕೊಲ್ಕತ್ತಾದಲ್ಲಿ ಇಬ್ಬರು ಜೊತೆಯಲ್ಲಿ ತೆಗೆಸಿಕೊಂಡ ಫೋಟೋಗಳು, ಯುವತಿಯ ಅಶ್ಲೀಲ ಫೋಟೋಗಳು, ಖಾಸಗಿ ಫೋಟೋಗಳನ್ನ ಇಟ್ಟಿಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದಾನೆ. ಅಲ್ಲದೆ ತನ್ನ ಇಬ್ಬರು ಸ್ನೇಹಿತರಿಗೆ ಯುವತಿಯ ಫೋಟೋ ಶೇರ್ ಮಾಡಿದ್ದಾನೆ.
ಫೋಟೋಯಿಂದ ಮುರಿದು ಬಿತ್ತು ಮದುವೆ:
ಸಂತ್ರಸ್ಥ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಇದನ್ನು ತಿಳಿದ ಆರೋಪಿ ಸ್ಟಾಲೋನ್ ಹಾಗೂ ಆತನ ಗೆಳೆಯ ಇಕ್ಬಾಲ್ ಸಂತ್ರಸ್ಥ ಯುವತಿಯ ಅಶ್ಲೀಲ ಫೋಟೋವನ್ನು ಮದುವೆ ನಿಶ್ಚಯವಾಗಿದ್ದ ಮದುವೆ ಗಂಡಿಗೆ ಶೇರ್ ಮಾಡಿದ್ದಾರೆ. ಸದ್ಯ ಮದುವೆಯೂ ಇಲ್ಲದೇ, ಬೆಂಗಳೂರಲ್ಲಿ ಕೆಲಸವೂ ಸಿಗದೇ ಯುವತಿ ಕಂಗಾಲಾಗಿದ್ದಾಳೆ. ನೊಂದ ಯುವತಿಯಿಂದ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Published On - 5:28 pm, Mon, 27 January 20