Kannada News Karnataka Koppal Experience the Malnadu bcz of Monsoon rain; Koppal Kapila theertha falls attracting tourists, Kannada News Today
ಬಿಸಿಲನಾಡು ಕೊಪ್ಪಳದಲ್ಲಿ ಮಲೆನಾಡ ಅನುಭವ! ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಕಪೀಲತೀರ್ಥ ಜಲಪಾತ
ರಾಜ್ಯದ ಬಿಸಿಲನಾಡು ಎಂದು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಕರೆಯಲಾಗುತ್ತದೆ. ವರ್ಷದ ಬಹುತೇಕ ತಿಂಗಳುಗಳ ಕಾಲ ಬಿಸಿಲು ಈ ಭಾಗದಲ್ಲಿ ಸಾಮಾನ್ಯ. ಆದರೆ ಮುಂಗಾರು ಮಳೆಯ ಸಮಯದಲ್ಲಿ ಇದೀಗ ಬಿಸಿಲನಾಡು ಕೊಪ್ಪಳ ಮಲೆನಾಡಿನ ಅನುಭೂತಿಯನ್ನು ನೀಡುತ್ತಿದೆ. ಜಲಪಾತಗಳನ್ನ ನೋಡಬೇಕು, ದುಮ್ಮಿಕ್ಕಿ ಹರಿಯೋ ನೀರಲ್ಲಿ ಮೋಜು ಮಸ್ತಿ ಮಾಡಬೇಕು ಅಂತ ಅನಿಸಿದ್ರೆ ಈ ಭಾಗದ ಜನ ಮಲೆನಾಡ ಭಾಗಕ್ಕೆ ಹೋಗಬೇಕು. ಆದರೆ ಇದೀಗ ಮಳೆಗಾಲದಲ್ಲಿ ಕೊಪ್ಪಳ ಜಿಲ್ಲೆಯ ಅದೊಂದು ಜಲಪಾತ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿರುವ ಜಲಪಾತವನ್ನು ನೋಡಲು ರಾಜ್ಯ ಮತ್ತು ನೆರೆಯ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದಾರೆ.
1 / 5
ಒಂದೆಡೆ ನಯನ ಮನೋಹರವಾಗಿರುವ ಪ್ರಕೃತಿ ಸೌಂದರ್ಯದ ಹಸಿರು ಕಾಡು. ಸೂರ್ಯನಿಗೆ ಅಡ್ಡಲಾಗಿ ಮೋಡಗಳು ನಿಂತಿದ್ದರೆ, ಇನ್ನೊಂದಡೆ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯ ಆರ್ಭಟ. ಇದರ ನಡುವೆ ಹಾಲಿನ ಹೊಳೆಯಂತೆ ಧುಮ್ಮಿಕ್ಕಿ ಬೀಳ್ತಿರೋ ಜಲಪಾತದ ಸೊಬಗು. ಇಂತಹ ಮನಮೋಹಕ ದೃಶ್ಯಗಳು ಯಾರಿಗೇ ಕಂಡರೂ ಕೂಡಾ ಅವರ ಮನಸು ಹಗರಾಗುತ್ತದೆ. ನೀರಲ್ಲಿ ಹೋಗಿ ಸಂಭ್ರಮಿಸಬೇಕು ಅಂತ ಅನಿಸುತ್ತಿದೆ. ಹೀಗಾಗಿ ದುಮ್ಮುಕ್ಕುತ್ತಿರುವ ಜಲಪಾತದ ಆಟವಾಡ್ತಾ ಎಂಜಾಯ್ ಮಾಡಿಕೊಂಡು, ಫೋಟೊಗೆ ಫೋಸ್ ಕೊಡ್ತಿರೋ ಪ್ರವಾಸಿಗರ ದಂಡು. ಈ ಎಲ್ಲ ದೃಶ್ಯಗಳನ್ನು ಕಂಡು ನೀವು ಇದ್ಯಾವುದೋ ಮಲೆನಾಡಿನ ಪ್ರದೇಶ ಇರಬೇಕು ಅಂತಾ ಅಂದುಕೊಂಡರೆ ಅದು ತಪ್ಪು. ಈ ಪಾಲ್ಸ್, ಈ ಹಸಿರು ಪರಿಸರ ಇರೋದು, ಬರ-ಬಿಸಿಲು ನಾಡು ಅಂತಾ ಕರೆಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ.
2 / 5
ಒಂದೆಡೆ ನಯನ ಮನೋಹರವಾಗಿರುವ ಪ್ರಕೃತಿ ಸೌಂದರ್ಯದ ಹಸಿರು ಕಾಡು. ಸೂರ್ಯನಿಗೆ ಅಡ್ಡಲಾಗಿ ಮೋಡಗಳು ನಿಂತಿದ್ದರೆ, ಇನ್ನೊಂದಡೆ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯ ಆರ್ಭಟ. ಇದರ ನಡುವೆ ಹಾಲಿನ ಹೊಳೆಯಂತೆ ಧುಮ್ಮಿಕ್ಕಿ ಬೀಳ್ತಿರೋ ಜಲಪಾತದ ಸೊಬಗು. ಇಂತಹ ಮನಮೋಹಕ ದೃಶ್ಯಗಳು ಯಾರಿಗೇ ಕಂಡರೂ ಕೂಡಾ ಅವರ ಮನಸು ಹಗರಾಗುತ್ತದೆ. ನೀರಲ್ಲಿ ಹೋಗಿ ಸಂಭ್ರಮಿಸಬೇಕು ಅಂತ ಅನಿಸುತ್ತಿದೆ. ಹೀಗಾಗಿ ದುಮ್ಮುಕ್ಕುತ್ತಿರುವ ಜಲಪಾತದ ಆಟವಾಡ್ತಾ ಎಂಜಾಯ್ ಮಾಡಿಕೊಂಡು, ಫೋಟೊಗೆ ಫೋಸ್ ಕೊಡ್ತಿರೋ ಪ್ರವಾಸಿಗರ ದಂಡು. ಈ ಎಲ್ಲ ದೃಶ್ಯಗಳನ್ನು ಕಂಡು ನೀವು ಇದ್ಯಾವುದೋ ಮಲೆನಾಡಿನ ಪ್ರದೇಶ ಇರಬೇಕು ಅಂತಾ ಅಂದುಕೊಂಡರೆ ಅದು ತಪ್ಪು. ಈ ಫಾಲ್ಸ್, ಈ ಹಸಿರು ಪರಿಸರ ಇರೋದು, ಬರ-ಬಿಸಿಲು ನಾಡು ಅಂತಾ ಕರೆಸಿಕೊಳ್ಳುವ ಕೊಪ್ಪಳ ಜಿಲ್ಲೆಯಲ್ಲಿ.
3 / 5
ಈ ಭಾಗದಲ್ಲಿ ದೊಡ್ಡ ಮಳೆಯಾದ್ರೆ ಮಾತ್ರ ಜಲಪಾತ ಸೃಷ್ಟಿಯಾಗುತ್ತದೆ. ಕಳೆದ ಒಂದು ವಾರದಿಂದ ಕೊಪ್ಪಳ ಜಿಲ್ಲೆಯಲ್ಲಿ ಬಾರಿ ಮಳೆಯಾಗುತ್ತಿದೆ. ಹೀಗಾಗಿ ಕಪೀಲತೀರ್ಥ ಜಲಾಪತಕ್ಕೆ ಜೀವಕಳೆ ಬಂದಿದ್ದು, ಪ್ರವಾಸಿಗರನ್ನ ತನ್ನತ್ತ ಆಕರ್ಷಿಸುತ್ತಿದೆ. ರಜಾ ದಿನದಲ್ಲಂತೂ ಪ್ರವಾಸಿಗರು ಕುಟುಂಬ ಸಮೇತ ಬಂದು ಇಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡಿ ಎಂಜಾಯ್ ಮಾಡ್ತಾರೆ.
4 / 5
ಹೋಗುವುದು ಹೇಗೆ?: ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದಿಂದ ಎರಡು ಕಿಮೀ ದೂರವಿರುವ ಈ ಜಲಪಾತಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ರವಾಸಿಗರ ವಾಹನಗಳು ನೇರವಾಗಿ ಜಲಪಾತದವರಗೆ ಹೋಗಲು ಅವಕಾಶವಿದೆ. ನೀವು ಜಲಪಾತದ ಸ್ಥಳದ ಹತ್ತಿರಕ್ಕೆ ಹೋದರು ಸಹ ನಿಮಗೆ ಅಲ್ಲಿ ಜಲಪಾತ ಇರುವುದು ಗೋತ್ತಾಗುವುದೇ ಇಲ್ಲ. ಬೆಟ್ಟದಿಂದ ಸ್ವಲ್ಪ ಇಳಿದರೆ ನಿಮಗೆ ಭೋರ್ಗೆರೆಯೋ ನೀರಿನ ನಿನಾದ ಕೇಳಿಸುತ್ತೆ. ಬೇರೆ ಜಲಪಾತಗಳನ್ನು ದೂರದರಿಂದ ನೋಡಿ ಖುಷಿ ಪಡಬೇಕು. ಆದ್ರೆ ಕಪೀಲತೀರ್ಥ ಜಲಪಾತದ ವೈಶಿಷ್ಠ ಅಂದ್ರೆ ಕೇವಲ 20 ಅಡಿ ಎತ್ತರದಿಂದ ರಭಸವಾಗಿ ಹರಿಯುವ ನೀರಿನ ಕೆಳಗೆ ನಿಂತು ಸ್ನಾನ ಮಾಡಬಹುದು. ಈ ಜಲಪಾತದಲ್ಲಿ ಕೆಳಗೆ ನಿಂತು ಸ್ನಾನ ಮಾಡಿದರೆ ಮೈ-ಕೈ ನೋವು ಮಾಯವಾಗುತ್ತದೆ. ಸದ್ಯ ಪ್ರವಾಸೊದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶನ ನೀಡ್ತಿದ್ದಾರೆ. ಪ್ರವಾಸಿಗರು ಕುಟುಂಬ ಸಮೇತರಾಗಿ ಬಂದು ಪ್ರಕೃತಿ ಸೊಬಗನ್ನ ಸವಿಯಬಹುದಾಗಿದೆ.
5 / 5
ಮಳೆಗಾಲದಲ್ಲಿ ಸ್ವಲ್ಪ ಮಳೆಯಾದರೆ ಸಾಕು ಈ ಜಲಪಾತ ಭೋರ್ಗರೆಯುತ್ತದೆ. ಆರು ತಿಂಗಳುಗಳ ಕಾಲ ದುಮ್ಮಿಕ್ಕಿ ಹರಿಯತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಸುಪ್ರಸಿದ್ದ ಜಲಪಾತ ಎಂಬ ಹೆಗ್ಗಳಿಕೆಯನ್ನೂ ಕೂಡಾ ಈ ಕಬ್ಬರಗಿ ಜಲಪಾತ ಪಾತ್ರವಾಗಿದೆ. ಈ ಜಲಪಾತವನ್ನು ಜನರು ಕುಟುಂಬದ ಸಮೇತವಾಗಿ ಬಂದು ಕಣ್ತುಂಬಿಕೊಳ್ಳಬಹುದು.