ಕೊಪ್ಪಳ: ಶಾಲಾ ಕಟ್ಟಡಕ್ಕೆ ಸಿಡಿಲು ಬಡಿದು 9 ಜನರಿಗೆ ಗಾಯ

ಶಾಲಾ ಕಟ್ಟಡಕ್ಕೆ ಸಿಡಿಲು ಬಡಿದು 9 ಜನರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕೊಡತಗೇರಿ ಗ್ರಾಮದಲ್ಲಿ ನಡೆದಿದೆ.

ಕೊಪ್ಪಳ: ಶಾಲಾ ಕಟ್ಟಡಕ್ಕೆ ಸಿಡಿಲು ಬಡಿದು 9 ಜನರಿಗೆ ಗಾಯ
ಸಿಡಿಲು ಬಡಿದು ಗಾಯಗೊಂಡಿರುವ ಗಾಯಾಳುಗಳು
Edited By:

Updated on: Jul 17, 2022 | 9:58 PM

ಕೊಪ್ಪಳ: ಶಾಲಾ (School) ಕಟ್ಟಡಕ್ಕೆ ಸಿಡಿಲು ಬಡಿದು 9 ಜನರು ಗಾಯಗೊಂಡಿರುವ ಘಟನೆ ಕೊಪ್ಪಳ (Koppal) ಜಿಲ್ಲೆ ಕುಷ್ಟಗಿ (Kushtagi) ತಾಲೂಕಿನ ಕೊಡತಗೇರಿ ಗ್ರಾಮದಲ್ಲಿ ನಡೆದಿದೆ. ಸಿಡಿಲಿನ ಹೊಡೆತಕ್ಕೆ ಮೂವರಿಗೆ ಗಂಭೀರ ಗಾಯವಾಗಿದೆ. ಕಲ್ಲಪ್ಪ ಮಂಗಳಪ್ಪ ಪೂಜಾರ, ಮಲ್ಲಪ್ಪ ಹೋಬಳೆಪ್ಪ ಗೌಡರ, ಹನುಮಪ್ಪ ಬಾಳಪ್ಪಗ ಎಂಬುವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ಹನುಮನಾಳ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಳೆಯಿಂದ ಆಶ್ರಯ ಪಡೆಯಲೆಂದು ಶಾಲಾ ಕಟ್ಟದಲ್ಲಿ ಜನರು ನಿಂತಿದ್ದರು. ಈ ವೇಳೆ  ಶಾಲಾ ಮೇಲ್ಛಾವಣಿಗೆ ಸಿಡಿಲು ಬಡಿದಿದ್ದರಿಂದ ಜನರಿಗೆ ರಭಸವಾಗಿ ಸಿಡಿದ ಕಲ್ಲಿನ ಚೂರುಗಳು ಬಡಿದು ಗಾಯಗೊಂಡಿದ್ದಾರೆ.

ಸೆಲ್ಫಿ ಹುಚ್ಚಿಗೆ ‌ನೀರು ಪಾಲಾದ ಯುವಕ; ವಾರಾಂತ್ಯ ಪ್ರವಾಸ ಮೋಜು ತಂದಿಟ್ಟ ದುರಂತ

ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೊಬ್ಬ ‌ನೀರು ಪಾಲಾದ ದುರಂತ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೀರಸಾಗರದ ಜಲಾಶಯದಲ್ಲಿ ಈ ಘಟನೆ ನಡೆದಿದೆ. ಕಿರಣ (22) ನೀರಲ್ಲಿ ಕೊಚ್ಚಿ ಹೋದ ಯುವಕ.

ವಾರಾಂತ್ಯ ಪ್ರವಾಸ ಮೋಜು ತಂದಿಟ್ಟ ದುರಂತ: ಮೃತ ಕಿರಣ ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ‌ ನಿವಾಸಿ. ಇಂದು ಗೆಳೆಯರೊಡನೆ ಪ್ರವಾಸಕ್ಕೆಂದು ಹೋಗಿದ್ದ. ಈ ಸಮಯದಲ್ಲಿ ಸೆಲ್ಫಿಗಾಗಿ ಜಲಾಶಯದ ದಡದಲ್ಲಿ ನಿಂತಿದ್ದ. ನೀರಿನ ರಭಸ ಹೆಚ್ಚಾಗಿದ್ದರಿಂದ ಕಿರಣ ಕೊಚ್ಚಿ ಹೋಗಿದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಿರಣನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಕಲಘಟಗಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 9:37 pm, Sun, 17 July 22