ಕೊಪ್ಪಳ: ಅಪ್ರಾಪ್ತ ಬಾಲಕಿಯ ನಗ್ನ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್ ಮಾಡ್ತಿದ್ದ ಯುವಕ ಅರೆಸ್ಟ್

| Updated By: ರಮೇಶ್ ಬಿ. ಜವಳಗೇರಾ

Updated on: Sep 04, 2023 | 9:08 AM

ಅಪ್ರಾಪ್ತ ಬಾಲಕಿಯ ಬೆತ್ತಲೆ ವಿಡಿಯೊ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದ ಯುವಕನನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಗೆ ಬಂದಿದ್ದ 17 ವರ್ಷದ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಬಳಿಕ ಆಕೆಯನ್ನು ತನ್ನ ಪ್ರೀತಿ-ಪ್ರೇಮದ ನಾಟಕದ ಜಾಲಕ್ಕೆ ಬೀಳಿಸಿಕೊಂಡಿದ್ದ ಯುವಕ, ಬಳಿಕ ತನ್ನ ಆಟ ಶುರು ಮಾಡಿಕೊಂಡಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕೊಪ್ಪಳ: ಅಪ್ರಾಪ್ತ ಬಾಲಕಿಯ ನಗ್ನ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್ ಮಾಡ್ತಿದ್ದ ಯುವಕ ಅರೆಸ್ಟ್
ಮುಸ್ತಾಫಾ
Follow us on

ಕೊಪ್ಪಳ, (ಸೆಪ್ಟೆಂಬರ್, 04): ಅಪ್ರಾಪ್ತ ಬಾಲಕಿಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್(blackmailing)   ಮಾಡುತ್ತಿದ್ದ ಯುವಕನೋರ್ವನ್ನು ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ(Koppal) ಜಿಲ್ಲೆಯ ಗಂಗಾವತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಪ್ರೀತಿ-ಪ್ರೇಮ (Love) ನಾಟಕವಾಡಿ ವಿದ್ಯಾರ್ಥಿನಿಯ ಬೆತ್ತಲೆ ವಿಡಿಯೋ ರೆಕಾರ್ಡ್​ ಮಾಡಿಟ್ಟುಕೊಂಡು ಬಳಿಕ ಬ್ಲ್ಯಾಕ್​ ಮೇಲ್​ ಮಾಡುತ್ತಿದ್ದ ಮುಸ್ತಾಫಾ ಎನ್ನುವಾತನ್ನನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ

ಇನ್ಸ್ಟಾಗ್ರಾಮ್ ಮೂಲಕ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಬಳಿಕ ಪ್ರೀತಿ ಪ್ರೇಮ ನಾಟಕವಾಡಿದ್ದಾನೆ. ಹೀಗೆ ಒಂದು ದಿನ ಪ್ರೀತಿ ನಾಟಕದೊಂದಿಗೆ ನಂಬಿಸಿ ವಿಡಿಯೋ ಕಾಲ್​ನಲ್ಲಿ ವಿದ್ಯಾರ್ಥಿನಿಯನ್ನು ಬೆತ್ತಲಾಗುವಂತೆ ಹೇಳಿ ಅದನ್ನು ಸ್ಕ್ರೀನ್ ರೆಕಾರ್ಡ್​ ಮಾಡಿಕೊಂಡಿದ್ದಾನೆ. ನಂತರ ಹೀಗೆ ಪ್ರತಿ ಬಾರಿಯೂ ಸಹ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸುತ್ತಿದ್ದ. ಆದ್ರೆ, ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದಾಗ ಆ ವಿಡಿಯೋವನ್ನು ತೋರಿಸಿ ಬ್ಲ್ಯಾಕ್​ ಮೇಲ್​ ಮಾಡಲು ಶುರು ಮಾಡಿದ್ದಾನೆ. ಇದರಿಂದ ಬೇಸತ್ತು ವಿದ್ಯಾರ್ಥಿನಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರಿನಂತೆ ಪೊಲೀಸರು ಇದೀಗ ಆರೋಪಿ ಮುಸ್ತಾಫನನ್ನು ಪೋಕ್ಸೊ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಅಶ್ಲೀಲ ವಿಡಿಯೋ ಹರಿಬಿಡುವ ಬೆದರಿಕೆ, ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

ಆರೋಪಿ ಪರಿಚಯವಾಗಿದ್ದೇಗೆ?

ತಂದೆಗೆ ಹುಷಾರಿಲ್ಲದ ಕಾರಣ ಚಿಕಿತ್ಸೆ ಕೊಡಿಸಲು ವಿದ್ಯಾರ್ಥಿನಿ, ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಲ್ಯಾಬ್​ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ತಾಫ್​ ಪರಿಚಯ ಮಾಡಿಕೊಂಡಿದ್ದ. ಬಳಿಕ ಇನ್ಸ್​ಟಾಗ್ರಾಮ್​ ಐಡಿ ಕೇಳಿ ಪಡೆದುಕೊಂಡಿದ್ದ. ನಂತರ ಇಬ್ಬರ ನಡುವೆ ಚಾಟಿಂಗ್, ಮಾತುಕತೆ ಶುರುವಾಗಿದೆ. ಅಲ್ಲದೇ ಭೇಟಿಯಾದಗ ಅನುಚಿವಾಗಿ ವರ್ತಿಸಿದ್ದಾನೆ. ಅಲ್ಲದೇ ಒಂದು ದಿನ ರಾತ್ರಿ ಫೋನ್​ ಮಾಡಿ ಬೆತ್ತಲೆಯಾಗುವಂತೆ ಒತ್ತಾಯಿಸಿದ್ದ. ಇದಕ್ಕೆ ವಿದ್ಯಾರ್ಥಿನಿ ಒಪ್ಪದಿದ್ದಾಗ, ನಾನು ನಿನ್ನ ತುಂಬಾ ಲವ್ ಮಾಡುತ್ತೇನೆ. ಮುಂದೆ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಬಾಲಕಿ, ವಿಡಿಯೋ ಕಾಲ್​ನಲ್ಲಿ ನಗ್ನಳಾಗಿದ್ದಾಳೆ. ಅದನ್ನು ರೆಕಾರ್ಡ್ ಮಾಡಿಕೊಂಡಿದ್ದ ಮುಸ್ತಾಫ್ , ಪದೇ ಪದೇ ವಿಡಿಯೋ ಕಾಲ್​ ಮಾಡಿ ನಗ್ನವಾಗಲು ಹೇಳುತ್ತಿದ್ದನಂತೆ. ಇದಕ್ಕೆ ವಿದ್ಯಾರ್ಥಿನಿ ಒಪ್ಪದಿದ್ದಕ್ಕೆ ಆ ವಿಡಿಯೋ ಕಳುಹಿಸಿ ಬ್ಲ್ಯಾಕ್​ ಮೇಲ್​ ಮಾಡಲು ಶುರು ಮಾಡಿದ್ದಾನೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ಕೊನೆಗೆ ಗಂಗಾವತಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ.

ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

ದಾವಣಗೆರೆ, (ಸೆಪ್ಟೆಂಬರ್ 04): ಅಶ್ಲೀಲ ವಿಡಿಯೋ ಹರಿಬಿಡುವ ಬೇದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಹೆದರಿ ಆತ್ಮಹತ್ಯೆಗೆ (Suiicde) ಯತ್ನಿಸಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಯುವರಿಬ್ಬರ ಬ್ಲ್ಯಾಕ್​ಮೇಲ್​​ಗೆ (blackmailing) ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದ 17 ವರ್ಷ ವಿದ್ಯಾರ್ಥಿನಿ(student) ಚಿಕಿತ್ಸೆ ಫಲಿಸದೇ ಉಡುಪಿ‌ಯ(Udupi) ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ದಾವಣಗೆರೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿಗಳಿಗೆ ಶಿಕ್ಷೆ ಆಗಲಿ ಎಂದು ವಿದ್ಯಾರ್ಥಿನಿ ಆತ್ಮಹತ್ಯೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನೀಡಿದ್ದ ವಿಡಿಯೋ ಹೇಳಿಕೆ ವೈರಲ್ ಆಗಿದೆ.

ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:54 am, Mon, 4 September 23