ಕೊಪ್ಪಳ: ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಆನೆಗೊಂದಿ ಉತ್ಸವಕ್ಕೆ ಮೆರವಣಿಗೆ ಮೂಲಕ ಚಾಲನೆ ನೀಡಲಾಯ್ತು. ಮೆರವಣಿಗೆಯಲ್ಲಿ ವಿದೇಶಿಗರು ಕುಣಿದಿದ್ದು ಆಕರ್ಷಕವಾಗಿತ್ತು. ವಿವಿಧ ಕಲಾ ತಂಡಗಳ ವೈಭವ ನೋಡುಗರ ಗಮನ ಸೆಳೆದ್ವು.
ಇನ್ನು ಉತ್ಸವದ ವೇದಿಕೆ ಹಿಂಬಾಗದ ಗುಡ್ಡದಲ್ಲಿ ಗುಡ್ಡಗಾಡು ಸಾಹಸ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕೊಪ್ಪಳ ಸೇರಿದಂತೆ, ವಿವಿಧ ಕಡೆಯಿಂದ ಬಂದ ಸಾಹಸಿಗರು ಗುಡ್ಡಗಾಡು ಸಾಹಸ ಕ್ರೀಡೆಯಲ್ಲಿ ಭಾಗಿಯಾಗಿದ್ರು. ಇದರ ಜೊತೆ ನೀರಿನಲ್ಲಿ ಮೈ ರೋಮಾಂಚನವಾಗೋ ಕ್ರೀಡೆಗಳು ಕೂಡ ಸಖತ್ ಕಿಕ್ ನೀಡಿದ್ವು. ಇನ್ನು ಆನೆಗೊಂದಿ ಉತ್ಸವಕ್ಕೆ ಮತ್ತಷ್ಟು ರಂಗು ತರಲು ಜಿಲ್ಲಾಡಳಿತ ಆನೆಗೊಂದಿ ಬೈ ಸ್ಕೈ ಆಯೋಜನೆ ಮಾಡಿತ್ತು.
Published On - 2:41 pm, Fri, 10 January 20