ಕೊಪ್ಪಳ: ಕನಕಗಿರಿ ಬಿಜೆಪಿ (BJP) ಶಾಸಕರ ವಿರುದ್ಧ ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ‘ಬಿಜೆಪಿ ಕನಕಗಿರಿ ಕ್ಷೇತ್ರ’ ಎಂಬ ವಾಟ್ಸಾಪ್ ಗ್ರೂಪ್ನಲ್ಲಿ (Whatsapp Group) ಕಾರ್ಯಕರ್ತರು, ಕ್ಷೇತ್ರದಲ್ಲಿ ನಮ್ಮ ಸಮಸ್ಯೆಗಳನ್ನು ಯಾರೊಬ್ಬರೂ ಆಲಿಸುತ್ತಿಲ್ಲ. ಶಾಸಕ ಬಸವರಾಜ ದಡೇಸುಗೂರು ಯಾವ ಕ್ಷೇತ್ರದಿಂದ ಗೆದ್ದಿದ್ದು? ಕೊಪ್ಪಳ ಜಿಲ್ಲೆ ಕನಕಗಿರಿಯಿಂದನಾ ಅಥವಾ ಬೆಂಗಳೂರಿನಿಂದನಾ? ಬೆಂಗಳೂರಲ್ಲಿ ಬೇರೆ ಪಕ್ಷದ ನಾಯಕರನ್ನು ಗಣನೆಗೆ ತೆಗೆದುಕೊಳ್ತಿದ್ದಾರೆ. ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ ಕೇಂದ್ರಕ್ಕೆ ಪತ್ರ ಬರೆಯೋಣ. 2023ಕ್ಕೆ ನಾಯಕರ ಬದಲಾವಣೆ ಆಗಬೇಕು ಎಂದು ಕೆಂಡಾಮಂಡಲರಾಗಿದ್ದಾರೆ.
ಕಾರ್ಯಕರ್ತರ ಸಣ್ಣ ಸಭೆಗಳೆಂದರೆ ನಾಯಕರಿಗೆ ಲೆಕ್ಕಕ್ಕಿಲ್ಲ, ದೊಡ್ಡ ಮೀಟಿಂಗ್ ಇದ್ದರೆ ಬೆಂಗಳೂರಲ್ಲಿ ಮಾಡುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ಶಾಸಕ ಬಸವರಾಜ ದಡೇಸುಗೂರು ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರಿಗೆ ಮಾಕ್ ಓಟಿಂಗ್ ತರಬೇತಿ:
ನಾಳೆ ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಬಿಜೆಪಿ ಶಾಸಕರ ವಾಸ್ತವ್ಯ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮುಂದುವರಿದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೋಟೆಲ್ಗೆ ಆಗಮಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಶಾಸಕರಿಗೆ ಮಾಕ್ ಓಟಿಂಗ್ ತರಬೇತಿ ನೀಡಲಾಗುತ್ತದೆ.
ಇದನ್ನೂ ಓದಿ: T20 Blast Final: ರಣರೋಚಕ ಫೈನಲ್: ಗೆದ್ದು ಸಂಭ್ರಮಿಸಿದ ಬಳಿಕ ಅಂಪೈರ್ ನೋಬಾಲ್ ಅಂದ್ರು..!
ಕಳೆದ ಬಾರಿ ರಾಷ್ಟ್ರಪತಿ ಚುನಾವಣೆಯಲ್ಲಿ ಶಾಸಕರಿಂದ ಕೆಲವು ಯಡವಟ್ಟುಗಳಾಗಿದ್ದವು. ಮತದಾನದ ವೇಳೆ ಕೆಲವು ಅಸಿಂಧು ಮತದಾನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅಣಕು ಮತದಾನದ ಮೂಲಕ ಶಾಸಕರಿಗೆ ಮಾಹಿತಿ ನೀಡಲಾಗುತ್ತದೆ. ಅಣಕು ಮತದಾನದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹೋಟೆಲ್ನಲ್ಲಿ ಹಾಜರಿರುತ್ತಾರೆ.
Published On - 10:29 am, Sun, 17 July 22