ಕೊಪ್ಪಳ, ಡಿ.04: ಸರಿಯಾಗಿ ಕಣ್ಣು ಕಾಣದ ವಯೋವೃದ್ದನೋರ್ವ ಮನೆಗೆ ಹೋಗಲು ಬಸ್ ನಿಲ್ದಾಣದ ಬಳಿ ನಿಂತಿದ್ದ ವೇಳೆ ದುಷ್ಕರ್ಮಿಗಳು ಮನೆಗೆ ಡ್ರಾಪ್ ಮಾಡ್ತೇವೆ ಅಂತ ಹೇಳಿ ಕರೆದುಕೊಂಡು ಹೋಗಿ ಹಲ್ಲೆ (Assault) ಮಾಡಿ ಜೈ ಶ್ರೀರಾಮ (Jai Sriram) ಅಂತ ಹೇಳಿಸಿದ್ದ ಘಟನೆ ಕೊಪ್ಪಳದಲ್ಲಿ (Koppal) ನಡೆದಿತ್ತು. ಈ ಘಟನೆ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಲಾಗಿದ್ದು ಪೋಸ್ಟ್ ಮಾಡಿದವನ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗಂಗಾವತಿ ನಿವಾಸಿ ಅಮೀರ್ ಅಮ್ಮು ಎಂಬುವವರ ವಿರುದ್ಧ ದೂರು ದಾಖಲಾಗಿದೆ. ವಯಸ್ಸಾದ ಕಣ್ಣು ಕಾಣದ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಜೈ ಶ್ರೀರಾಮ ಅಂತ ಹೇಳಿಸಿದ್ದೀರಿ. ವಿಶ್ವದಲ್ಲಿಯೇ ನಿಮ್ಮಂತ ಭಯೋತ್ಪಾದಕ ಸಂಘಟನೆ ಮತ್ತೊಂದು ಇರಲು ಸಾಧ್ಯವಿಲ್ಲಾ ಅಂತ ಅಮೀರ್ ಅವರು ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆ ಗಂಗಾವತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಪ್ಪಳ: ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ ಮುಸ್ಲಿಂ ವೃದ್ಧನಿಗೆ ಥಳಿತ, ದೂರು ದಾಖಲು
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಮಾನವೀಯತೆಯನ್ನು ಮರೆತ ಇಬ್ಬರು ದುಷ್ಕರ್ಮಿಗಳು ಅಟ್ಟಹಾಸ ನಡೆಸಿದ್ದರು. ಗಂಗಾವತಿ ಪಟ್ಟಣದ ನಿವಾಸಿಯಾಗಿದ್ದ ಹುಸೇನಸಾಬ್, ಕಳೆದ ನವೆಂಬರ್ 25 ರಂದು ನಸುಕಿನ ಜಾವ ಮೂರು ಗಂಟೆ ಸಮಯದಲ್ಲಿ ಹೊಸಪೇಟೆಯಿಂದ ಬಂದು ಗಂಗಾವತಿ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಮನೆಗೆ ಹೋಗಲು ಯಾರಾದ್ರು ಸಹಾಯ ಮಾಡಬಹುದು ಎಂದು ಕಾದು ಕುಳಿತಿದ್ದರು. ಸಹಾಯ ಮಾಡೋ ನೆಪದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹುಸೇನಸಾಬ್ ಅವರಿಗೆ ನಿಮ್ಮ ಮನೆಗೆ ಡ್ರಾಪ್ ಮಾಡ್ತೇವೆ ಅಂತ ಹೇಳಿ, ತಮ್ಮ ಸ್ಕೂಟಿಯಲ್ಲಿ ವೃದ್ದನನ್ನು ಹತ್ತಿಸಿಕೊಂಡಿದ್ದರು. ಆದ್ರೆ ಗಂಗಾವತಿ ಪಟ್ಟಣದ ಮೆಹಬೂಬ್ ನಗರದಲ್ಲಿರುವ ಮನೆಗೆ ಹುಸೇನಸಾಬ್ ನನ್ನು ಕೆರದುಕೊಂಡು ಹೋಗದೆ, ಗಂಗಾವತಿ ಪಟ್ಟಣದ ಹೊರವಲಯದಲ್ಲಿರುವ ಪಂಪಾ ನಗರದ ಬಳಿ ಇರುವ ಖಾಲಿ ಜಾಗಕ್ಕೆ ಕರೆದುಕೊಂಡು ಹೋಗಿದ್ದರು. ಮೊದಲೇ ಹುಸೇನಸಾಬ್ ನ ಕಣ್ಣು ಕಾಣ್ತಿರಲಿಲ್ಲಾ. ಹೀಗಾಗಿ ದುಷ್ಕರ್ಮಿಗಳು ಮನೆಗೆ ತನನ್ನು ಕರೆದುಕೊಂಡು ಹೋಗ್ತಿದ್ದಾರೆ ಅಂತ ಸುಮ್ಮನೇ ಕೂತಿದ್ದರು.
ಆದ್ರೆ ಪಂಪಾ ನಗರದ ಬಳಿ ಹೋದ ದುಷ್ಕರ್ಮಿಗಳು, ವೃದ್ದನ ಮೇಲೆ ವಿಕೃತಿ ಮೆರೆದಿದ್ದು ವೃದ್ದನ ಗಡ್ಡವನ್ನು ಗ್ಲಾಸ್ ನಿಂದ ಕತ್ತರಿಸಿ ಜೈ ಶ್ರೀರಾಮ್ ಅಂತ ಹೇಳುವಂತೆ ಪೀಡಿಸಿದ್ದರು. ವೃದ್ದ ಅನ್ನೋದನ್ನು ನೋಡದೆ, ಅನೇಕ ಕಡೆ ಹೊಡೆದು ಗಾಯ ಮಾಡಿದ್ದರು. ಅಣ್ಣಾ ನನ್ನನ್ನು ಬಿಟ್ಟುಬಿಡಿ, ವಯಸ್ಸಾಗಿದೆ, ಕಣ್ಣು ಕಾಣೋದಿಲ್ಲಾ ಅಂತ ವೃದ್ದ ಗೋಳಾಡಿದರೂ ವೃದ್ದನನ್ನು ಬಿಡದೇ ಹಲ್ಲೆ ನಡೆಸಿದ್ದರು. ಸ್ಥಳಕ್ಕೆ ಕುರಿಗಾಹಿಗಳು ಬರುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು.
ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ