ಬೆಂಬಲಿಗರಿಗೆ ವಾರಂಟ್ ಜಾರಿ ಮಾಡಿದ್ದಕ್ಕೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಕೊಪ್ಪಳ ಕಾಂಗ್ರೆಸ್ ಶಾಸಕ, ಆಮೇಲೇನಾಯ್ತು?

| Updated By: ಸಾಧು ಶ್ರೀನಾಥ್​

Updated on: Jul 16, 2022 | 7:00 PM

Amaregouda Bayyapur: ಕೊಪ್ಪಳ ಜಿಲ್ಲೆ ಕುಷ್ಟಗಿ ಠಾಣೆಯಲ್ಲಿ ಸ್ಥಳೀಯ ಶಾಸಕ ಪೊಲೀಸರ ಜೊತೆ ವಾಗ್ವಾದ ನಡೆಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಕೇಳಿಬಂದಿದೆ. ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರು ಈ ದುರ್ವರ್ತನೆ ತೋರಿದ್ದಾರೆ ಎಂಬ ಆರೋಪಿಸಲಾಗಿದೆ.

ಬೆಂಬಲಿಗರಿಗೆ ವಾರಂಟ್ ಜಾರಿ ಮಾಡಿದ್ದಕ್ಕೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಕೊಪ್ಪಳ ಕಾಂಗ್ರೆಸ್ ಶಾಸಕ, ಆಮೇಲೇನಾಯ್ತು?
ಬೆಂಬಲಿಗರಿಗೆ ವಾರಂಟ್ ಜಾರಿ ಮಾಡಿದ್ದಕ್ಕೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಕೊಪ್ಪಳ ಕಾಂಗ್ರೆಸ್ ಶಾಸಕ, ಆಮೇಲೇನಾಯ್ತು?
Follow us on

ಕೊಪ್ಪಳ: ಕೊಪ್ಪಳ ಜಿಲ್ಲೆ ಕುಷ್ಟಗಿ ಠಾಣೆಯಲ್ಲಿ ಸ್ಥಳೀಯ ಶಾಸಕ ಪೊಲೀಸರ ಜೊತೆ (Kushtagi Police) ವಾಗ್ವಾದ ನಡೆಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಕೇಳಿಬಂದಿದೆ. ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ (Amaregouda Bayyapur) ಅವರು ಈ ದುರ್ವರ್ತನೆ ತೋರಿದ್ದಾರೆ ಎಂಬ ಆರೋಪಿಸಲಾಗಿದೆ. ತಮ್ಮ ಬೆಂಬಲಿಗರನ್ನು ಠಾಣೆಗೆ ಕರೆ ತಂದಿದ್ದ ಹಿನ್ನೆಲೆಯಲ್ಲಿ ವಾಗ್ವಾದ ಶುರುವಾಗಿದೆ. ಇದೇ ವಿಚಾರವಾಗಿ ಕುಷ್ಟಗಿ ಸಿಪಿಐ ನಿಂಗಪ್ಪ ಮತ್ತು ಪಿಎಸ್​ಐ ಜೊತೆ ಶಾಸಕ ಅಮರೇಗೌಡ ಗಲಾಟೆ ಮಾಡಿಕೊಂಡಿದ್ದಾರೆ.

ಪೊಲೀಸ್ ಠಾಣೆಯ ಧ್ವಜದ ಕಟ್ಟೆ ಮೇಲೆ ಕೂತು ವಾಗ್ವಾದ:
ಈ ವೇಳೆ ಅಮರೇಗೌಡ ಅವರು ಪೊಲೀಸರ ಮೇಲೆ ಕೈಮಾಡಲು ಮುಂದಾದರು ಎನ್ನಲಾಗಿದೆ. 2017ರ ಅಕ್ರಮ ಮರಳು ಗಣಿಗಾರಿಕೆ ವಿಚಾರವಾಗಿ ಶಾಸಕ ಅಮರೇಗೌಡ ಬಯ್ಯಾಪುರ ಬೆಂಬಲಿಗರಿಗೆ ಕೋರ್ಟ್​ ವಾರಂಟ್ ಜಾರಿ ಮಾಡಿತ್ತು. ಈ ಸಂಬಂಧ ಶಾಸಕರ ಬೆಂಬಲಿಗರನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಇದೇ ವಿಚಾರವಾಗಿ ಪೊಲೀಸರ ಜತೆ ಶಾಸಕ ಅಮರೇಗೌಡ ವಾಗ್ವಾದಕ್ಕಿಳಿದು, ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ಠಾಣೆಯ ಧ್ವಜದ ಕಟ್ಟೆ ಮೇಲೆ ಕೂತು ವಾಗ್ವಾದ ಆರಂಭವಾಗಿ, ವಿಕೋಪಕ್ಕೆ ಹೋದಾಗ ತಾಳ್ಮೆ ಕಳೆದುಕೊಂಡ ಶಾಸಕ ಅಮರೇಗೌಡ ಬಯ್ಯಾಪೂರ ಕುಷ್ಟಗಿ ಪೊಲೀಸ್ ಠಾಣೆಯ CPI ನಿಂಗಪ್ಪ ಹಾಗೂ PSI ರೊಂದಿಗೆ ಕೈ ಕೈ ಮಿಲಾಯಿಸಿದ್ದಾರೆ. ಆಗ ಅಮರೇಗೌಡರನ್ನ ಬೆಂಬಲಿಗರು ಹಿಡಿದುಕೊಂಡು, ಸಂತೈಸಿದ್ದಾರೆ.

ಸಿಪಿಐ ನಿಂಗಪ್ಪ ವರ್ಗ ಮಾಡುವಂತೆ ಸರ್ಕಾರಕ್ಕೆ ಒತ್ತಾಯ:

ಕೊಪ್ಪಳ ಜಿಲ್ಲೆ ಕುಷ್ಟಗಿ ಸಿಪಿಐ ನಿಂಗಪ್ಪ ಜಾತಿ ತಾರತಮ್ಯ ಮಾಡುತ್ತಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ಸಿಪಿಐ ನಿಂಗಪ್ಪ ಬಿಜೆಪಿ ಪರ ಕೆಲಸ ಮಾಡುತ್ತಾರೆ ಎಂದು ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಇದೇ ವೇಳೆ ಆರೋಪಿಸಿದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಏನಾದರೂ ಆದರೆ ಸಿಪಿಐ ನಿಂಗಪ್ಪ ಹೊಣೆ ಎಂದು ಬಯ್ಯಾಪುರ ಹೇಳಿದರು.

25 ಕಾರ್ಯಕರ್ತರ ಜತೆ ಕುಷ್ಟಗಿ ಪೊಲೀಸ್ ಠಾಣೆಗೆ ಹೋಗಿದ್ದು ನಿಜ. ಪೊಲೀಸ್​ ಠಾಣೆಯಲ್ಲಿ ಸಿಬ್ಬಂದಿ ಮೇಲೆ ನಾನು ದೌರ್ಜನ್ಯ ಮಾಡಿಲ್ಲ. ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯ ಖಂಡಿಸಿದ್ದೇನೆ. ಪೊಲೀಸ್ ಠಾಣೆಯಲ್ಲಿ ನೆಲದ ಮೇಲೆ ಕುಳಿತು ದೌರ್ಜನ್ಯ ಖಂಡಿಸಿದ್ದೇನೆ. ನಮ್ಮ ಕಾರ್ಯಕರ್ತರಿಗೆ ಸಿಪಿಐ ನಿಂಗಪ್ಪ ನಿತ್ಯ ಕಿರುಕುಳ ನೀಡ್ತಿದ್ದಾರೆ. ಕುಷ್ಟಗಿ ಸಿಪಿಐ ನಿಂಗಪ್ಪ ಪಕ್ಷಭೇದದ ಜೊತೆಗೆ ಜಾತಿಭೇದ ಮಾಡುತ್ತಿದ್ದಾರೆ ಎಂದು ಹೇಳಿದ ಶಾಸಕ ಅಮರೇಗೌಡ ಬಯ್ಯಾಪುರ ಸಿಪಿಐ ನಿಂಗಪ್ಪರನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದರು.

Published On - 6:13 pm, Sat, 16 July 22