ಮಹಾಮಾರಿ ಆತಂಕದ ನಡುವೆ ಕೊವಿಡ್ ರೂಲ್ಸ್ ಉಲ್ಲಂಘಿಸಿ ಬಿಜೆಪಿ ಪ್ರಚಾರ ಸಭೆ; ದೈಹಿಕ ಅಂತರ, ಮಾಸ್ಕ್ ಮರೆತ ಸಚಿವ

| Updated By: ಆಯೇಷಾ ಬಾನು

Updated on: Dec 04, 2021 | 3:59 PM

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಕೊವಿಡ್ ರೂಲ್ಸ್ ಉಲ್ಲಂಘಿಸಲಾಗಿದೆ. ಸಚಿವ ಹಾಲಪ್ಪ ಆಚಾರ್‌ರಿಂದ ಕೊವಿಡ್ ರೂಲ್ಸ್ ಬ್ರೇಕ್ ಆಗಿದೆ.

ಮಹಾಮಾರಿ ಆತಂಕದ ನಡುವೆ ಕೊವಿಡ್ ರೂಲ್ಸ್ ಉಲ್ಲಂಘಿಸಿ ಬಿಜೆಪಿ ಪ್ರಚಾರ ಸಭೆ; ದೈಹಿಕ ಅಂತರ, ಮಾಸ್ಕ್ ಮರೆತ ಸಚಿವ
ಮಾಹಾಮಾರಿ ಆತಂಕದ ನಡುವೆ ಕೊವಿಡ್ ರೂಲ್ಸ್ ಉಲ್ಲಂಘಿಸಿ ಬಿಜೆಪಿ ಪ್ರಚಾರ ಸಭೆ; ದೈಹಿಕ ಅಂತರ, ಮಾಸ್ಕ್ ಮರೆತ ಸಚಿವ
Follow us on

ಕೊಪ್ಪಳ: ಕಳೆದ ಎರಡು ವರ್ಷ ಕೊರೊನಾ ಆಂತಕದಲ್ಲೇ ಕಾಲ ಕಳೆದಿದ್ದ ರಾಜ್ಯದ ಜನತೆ ಇತ್ತೀಚೆಗೆ ಕೊಂಚ ನೆಮ್ಮದಿಯಿಂದಿದ್ದರು. ಕೆಲಸ, ವ್ಯಾಪಾರ, ಶಾಲೆ ಅಂತಾ ಬ್ಯುಸಿಯಾಗ್ತಿದ್ರು.ಆದ್ರೀಗ, ಮತ್ತದ್ದೇ ಆತಂಕ, ಮತ್ತದ್ದೇ ಭಯ ಶುರುವಾಗಿದೆ. ಮತ್ತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ವಿಧಾನ ಪರಿಷತ್ ಚುನಾವಣೆ ಕೂಡ ಎದುರಾಗಿದ್ದು ಪ್ರಚಾರದ ಭರದಲ್ಲಿ ರಾಜಕೀಯ ವ್ಯಕ್ತಿಗಳೇ ಕೊರೊನಾ ರೂಲ್ಸ್ ಬ್ರೇಕ್ ಮಾಡ್ತಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಕೊವಿಡ್ ರೂಲ್ಸ್ ಉಲ್ಲಂಘಿಸಲಾಗಿದೆ. ಸಚಿವ ಹಾಲಪ್ಪ ಆಚಾರ್‌ರಿಂದ ಕೊವಿಡ್ ರೂಲ್ಸ್ ಬ್ರೇಕ್ ಆಗಿದೆ. ಬಿಜೆಪಿ ಪ್ರಚಾರ ಸಭೆಯಲ್ಲಿ ಸಾವಿರಾರು ಜನರು ದೈಹಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಭಾಗಿಯಾಗಿದ್ದಾರೆ. ಚುನಾವಣಾ ಸಭೆಯಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಕೊವಿಡ್ ರೂಲ್ಸ್ ಉಲ್ಲಂಘಿಸಿ ಬಿಜೆಪಿ ಪ್ರಚಾರ ಸಭೆ

ಕೊವಿಡ್ ರೂಲ್ಸ್ ಉಲ್ಲಂಘಿಸಿ ಬಿಜೆಪಿ ಪ್ರಚಾರ ಸಭೆ

ಮಾಸ್ಕ್ ಹಾಕದಿದ್ರೆ ದಂಡ
ಕೊರೊನಾ ಅತಂಕ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಮಾಸ್ಕ್ ಧರಿಸದಿದ್ದರೆ ದಂಡ ಹಾಕಲು ಮುಂದಾಗಿದೆ. ನಗರ ಪ್ರದೇಶಗಳಲ್ಲಿ 250 ರೂಪಾಯಿ ದಂಡದ ರೇಟ್ ಫಿಕ್ಸ್ ಮಾಡಿದ್ರೆ. ಗ್ರಾಮೀಣ ಭಾಗದಲ್ಲಿ 100 ರೂಪಾಯಿ ಹಾಕಲಾಗುತ್ತೆ. ಹಾಗೇನೆ ಮೈಕ್ರೋ ಕಂಟೇನ್ಮೆಂಟ್ ನಿಯಮ ಪಾಲನೆ ಕಡ್ಡಾಯಗೊಳಿಸಿದ್ದು, ಕೇರಳ, ಮಹಾರಾಷ್ಟ್ರ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಲಾಗ್ತಿದೆ. ಅಷ್ಟೇ ಅಲ್ಲ ಮಾರ್ಗಸೂಚಿ ಉಲ್ಲಂಘಿಸಿದರೆ ಕಾನೂನು ಪ್ರಕಾರ ಅಂದ್ರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಅನ್ನೋ ಎಚ್ಚರಿಕೆಯನ್ನೂ ಸರ್ಕಾರ ರವಾನಿಸಿದೆ. ಆದ್ರೆ ಕೊಪ್ಪಳದಲ್ಲಿ ನಡೆಯುತ್ತಿರುವ ಬಿಜೆಪಿ ಪ್ರಚಾರ ಸಭೆಯಲ್ಲೇ ಕೊರೊನಾ ರೋಲ್ಸ್ ಉಲ್ಲಂಘನೆಯಾಗಿದೆ.

ಇದನ್ನೂ ಓದಿ: ಎರಡು ಡೋಸ್ ವ್ಯಾಕ್ಸಿನ್ ಪಡೆದವರಿಗಷ್ಟೇ ಒರಿಯಾನ್ ಮಾಲ್​ ಪ್ರವೇಶಕ್ಕೆ ಅವಕಾಶ

Published On - 3:53 pm, Sat, 4 December 21